ADVERTISEMENT

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2023, 5:35 IST
Last Updated 7 ಆಗಸ್ಟ್ 2023, 5:35 IST
ನಟ ವಿಜಯರಾಘವೇಂದ್ರ ,ಪತ್ನಿ ಸ್ಪಂದನಾ
ನಟ ವಿಜಯರಾಘವೇಂದ್ರ ,ಪತ್ನಿ ಸ್ಪಂದನಾ   

ಬೆಂಗಳೂರು: ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿಧನರಾಗಿದ್ದಾರೆ. ಬ್ಯಾಂಕಾಕ್ ತೆರಳಿದ್ದ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದ್ದು ಅಲ್ಲಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ ಶಿವರಾಂ ಅವರ ಪುತ್ರಿಯಾದ ಸ್ಪಂದನಾ ಅವರು 2007ರಲ್ಲಿ  ನಟ ವಿಜಯರಾಘವೇಂದ್ರ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಒಬ್ಬ ಮಗ ಇದ್ದಾನೆ.

ಸ್ಪಂದನಾ ಅವರು ತಮ್ಮ ಸೋದರ ಸಂಬಂಧಿಗಳ ಜೊತೆ ಪ್ರವಾಸಕ್ಕೆ ತೆರಳಿದ್ದರು. ವಿಜಯ್‌ ರಾಘವೇಂದ್ರ ಅವರು ಚಿತ್ರೀಕರಣ ಪೂರ್ಣಗೊಳಿಸಿಕೊಂಡು ಅವರನ್ನು ಸೇರಿದ್ದರು. ಹೀಗೆ ಅವರೆಲ್ಲರ ಜೊತೆ ಸಮಯ ಕಳೆದು ಮಲಗಿದ್ದವರು ಅಲ್ಲೇ ನಿಧನರಾಗಿದ್ದಾರೆ. ಕಡಿಮೆ ರಕ್ತದೊತ್ತಡದಿಂದ ಈ ಘಟನೆಯಾಗಿದೆ ಎಂದು ಭಾವಿಸಿದ್ದೇವೆ. ಬಂದ ಬಳಿಕ ಹೆಚ್ಚಿನ ವಿವರ ಸಿಗಲಿದೆ. ನಾಳೆ ಮೃತದೇಹ ಬೆಂಗಳೂರಿಗೆ ಬರಲಿದೆ ಎಂದಿದ್ದಾರೆ ನಟ ಶ್ರೀಮುರಳಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.