ADVERTISEMENT

ಅ.4ಕ್ಕೆ ಅಧ್ಯಕ್ಷ ಇನ್‌ ಅಮೆರಿಕಾ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 14:34 IST
Last Updated 24 ಆಗಸ್ಟ್ 2019, 14:34 IST
ರಾಗಿಣಿ ದ್ವಿವೇದಿ ಮತ್ತು ಶರಣ್‌
ರಾಗಿಣಿ ದ್ವಿವೇದಿ ಮತ್ತು ಶರಣ್‌   

ಶರಣ್‌ ಮತ್ತು ರಾಗಿಣಿ ದ್ವಿವೇದಿ ಅಭಿನಯದ ‘ಅಧ್ಯಕ್ಷ ಇನ್‌ ಅಮೆರಿಕಾ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಅಕ್ಟೋಬರ್‌ 4ಕ್ಕೆ ದಸರಾ ಹಬ್ಬಕ್ಕೂ ಮುಂಚಿತವಾಗಿ ಬಿಡುಗಡೆಮಾಡಲು ಚಿತ್ರತಂಡ ನಿರ್ಧರಿಸಿದೆ.

ಇದು ಮಲಯಾಳದ ‘ಟು ಕಂಟ್ರೀಸ್‌’ ಚಿತ್ರದ ರಿಮೇಕ್. ಕನ್ನಡದಲ್ಲಿ ಯೋಗಾನಂದ್ನಿರ್ದೇಶನ ಮಾಡಿದ್ದು, ತಾರಾಗಣದಲ್ಲಿ ಗೋವಿಂದೇಗೌಡ, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ ಇದ್ದಾರೆ.ಸಿನಿಮಾ ವಿತರಕ ಶೈಲೇಂದ್ರ ಬಾಬು, ಬಿಡುಗಡೆಯ ಹೊಣೆ ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT