ಬೆಂಗಳೂರು: ‘ಅವಳೇ ನನ್ನ ಹೆಂಡ್ತಿ’, ‘ತುಂಬಿದ ಮನೆ’ ಸಿನಿಮಾ ಖ್ಯಾತಿಯ ನಿರ್ದೇಶಕ ಎಸ್.ಉಮೇಶ್ (68) ಕಿಡ್ನಿ ವೈಫಲ್ಯದಿಂದಾಗಿ ಶುಕ್ರವಾರ ನಿಧನರಾದರು. ಅವರಿಗೆ ಪತ್ನಿ, ಮೂವರು ಮಕ್ಕಳು ಇದ್ದಾರೆ. ಸಂಜೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.
ಕಾಶಿನಾಥ್ ನಟನೆಯ ‘ಅವಳೇ ನನ್ನ ಹೆಂಡ್ತಿ’ ಚಿತ್ರದ ಕಥೆ ಬರೆದವರು ಉಮೇಶ್. ಕೆ.ಪ್ರಭಾಕರ್ ಜೊತೆಗೂಡಿ ಸಿನಿಮಾ ಮಾಡಿದ್ದರು. ತಮಿಳಿಗೂ ರಿಮೇಕ್ ಆಗಿತ್ತು. ‘ಅವನೇ ನನ್ನ ಗಂಡ’, ‘ನಂಬಿದರೆ ನಂಬಿ ಬಿಟ್ರೆ ಬಿಡಿ’, ‘ಸಿಡಿದೆದ್ದ ಗಂಡು’, ‘ಪ್ರೇಮ ಪರೀಕ್ಷೆ’, ‘ರಾಜಾ ಕೆಂಪು ರೋಜಾ’, ‘ಎಲ್ಲರಂಥಲ್ಲ ನನ್ನ ಗಂಡ’, ‘ದಾಯಾದಿ’, ‘ಅವಳೇ ನನ್ನ ಹುಡುಗಿ’, ‘ಮದುವೆ ದಿಬ್ಬಣ’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಬೆಂಗಳೂರಿನವರಾದ ಉಮೇಶ್, 1973ರಲ್ಲಿ ಸಂಕಲನಕಾರರಾಗಿ ಚಿತ್ರರಂಗ ಪ್ರವೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.