ADVERTISEMENT

ಲತಾ ದೀದಿ ಅಮರ್‌ ರಹೆ: ಸಂಗೀತ ಲೋಕದ ದಂತಕಥೆಗೆ ಅಭಿಮಾನಿಗಳ ವಿದಾಯ

ಪಿಟಿಐ
Published 6 ಫೆಬ್ರುವರಿ 2022, 14:01 IST
Last Updated 6 ಫೆಬ್ರುವರಿ 2022, 14:01 IST
ಲತಾ ಮಂಗೇಶ್ಕರ್‌
ಲತಾ ಮಂಗೇಶ್ಕರ್‌   

ಮುಂಬೈ: ಲತಾ ಮಂಗೇಶ್ಕರ್‌ ಅವರ ದಕ್ಷಿಣ ಮುಂಬೈನಲ್ಲಿರುವ ನಿವಾಸದಿಂದ ಶಿವಾಜಿ ಪಾರ್ಕ್‌ವರೆಗೆ ಭಾನುವಾರ ನಡೆದ ಅಂತಿಮ ಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ನೂರಾರು ಅಭಿಮಾನಿಗಳು, ‘ಲತಾ ದೀದಿ ಅಮರ್‌ ರಹೆ’ ಎಂಬ ಘೋಷಣೆ ಕೂಗುತ್ತಾ, ಹಾಡು ಹಾಡುತ್ತಾ ತಮ್ಮ ನೆಚ್ಚಿನ ಗಾಯಕಿಗೆ ಭಾವಪೂರ್ಣ ವಿದಾಯ ಕೋರಿದರು.

ಅದಕ್ಕೂ ಮುನ್ನ ಲತಾ ಅವರ ನಿವಾಸ ಪ್ರಭು ಕುಂಜ್‌ಗೆ ಯುವಕರು, ಹಿರಿಯರೆನ್ನದೆ ನೂರಾರು ಮಂದಿ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ಲತಾ ಅವರ ನಿವಾಸದ ಬಳಿ ಜನರನ್ನು ನಿಯಂತ್ರಿಸುವ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ADVERTISEMENT

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.