ADVERTISEMENT

‘ನೈಟ್‌ಕರ್ಫ್ಯೂ’ ವಿಧಿಸಿದ ಮಾಲಾಶ್ರೀ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 0:35 IST
Last Updated 16 ಫೆಬ್ರುವರಿ 2024, 0:35 IST
ಮಾಲಾಶ್ರೀ
ಮಾಲಾಶ್ರೀ   

ವಿರಾಮದ ನಂತರ ‘ಮಾರಕಾಸ್ತ್ರ’ ಹಿಡಿದು ಚಿತ್ರರಂಗ ಮರು ಪ್ರವೇಶಿಸಿದ್ದ ಮಾಲಾಶ್ರೀ ‘ನೈಟ್ ಕರ್ಫ್ಯೂ’ಗೆ ಜೊತೆಯಾಗಿದ್ದಾರೆ. ಚಿತ್ರದಲ್ಲಿ ಸೇನಾ ವೈದ್ಯೆಯಾಗಿ ಮಾಲಾಶ್ರೀ ಕಾಣಿಸಿಕೊಂಡಿದ್ದಾರೆ. ರವೀಂದ್ರವೆಂಶಿ ನಿರ್ದೇಶನದ ಚಿತ್ರಕ್ಕೆ ಬಿ.ಎಸ್.ಚಂದ್ರಶೇಖರ್ ಬಂಡವಾಳ ಹೂಡಿದ್ದಾರೆ.

‘ಕೋವಿಡ್ 19 ಸಂದರ್ಭದಲ್ಲಿ ನಡೆದ ಸತ್ಯ ಘಟನೆಗಳನ್ನು ಆಧರಿಸಿದ ಚಿತ್ರ. ಸೆನ್ಸಾರ್‌ ಮುಗಿದಿದ್ದು ಏಪ್ರಿಲ್‌ನಲ್ಲಿ ಚಿತ್ರ ತೆರೆಗೆ ಬರಲಿದೆ. ಶಕ್ತಿಗಾಗಿ ಮಾಲಾಶ್ರೀ, ಯುಕ್ತಿಗಾಗಿ ರಂಜನಿ ರಾಘವನ್ ಕೂಡ ವೈದ್ಯೆಯಾಗಿ ನಟನೆ ಮಾಡಿದ್ದಾರೆ. ಪ್ರಮೋದ್‌ ಶೆಟ್ಟಿ, ರಂಗಾಯಣ ರಘು, ಸಾಧು ಕೋಕಿಲ ಮೊದಲಾದವರು ಚಿತ್ರದಲ್ಲಿದ್ದಾರೆ’ ಎಂದರು ನಿರ್ದೇಶಕರು. 

ಎಂ.ಎಸ್.ಮಾರುತಿ ಸಂಗೀತ, ಪ್ರಮೋದ್‌ ಭಾರತೀಯ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.