ADVERTISEMENT

ಪತ್ನಿಯ ಚಿತ್ರದಲ್ಲಿ ಪೃಥ್ವಿರಾಜ್ ವಿಜ್ಞಾನಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 20:00 IST
Last Updated 6 ಜನವರಿ 2019, 20:00 IST
‘ನೈನ್‌’ ಮಲಯಾಳಂ ಸಿನಿಮಾ ಪೃಥ್ವಿರಾಜ್‌
‘ನೈನ್‌’ ಮಲಯಾಳಂ ಸಿನಿಮಾ ಪೃಥ್ವಿರಾಜ್‌   

ಮಲಯಾಳಂ ಚಿತ್ರರಂಗದಲ್ಲಿ ಎಲ್ಲಾ ಬಗೆಯ ಚಿತ್ರಗಳು ನಿರ್ಮಾಣಗೊಂಡರೂ ವೈಜ್ಞಾನಿಕ ಚಿತ್ರಗಳಿಗೆ ಕೊರತೆ ಇತ್ತು.ನಟ, ನಿರ್ದೇಶಕ, ನಿರ್ಮಾಪಕ, ಹಿನ್ನೆಲೆ ಗಾಯಕ ಪೃಥ್ವಿರಾಜ್‌ ಸುಕುಮಾರನ್‌ ಈ ಕೊರತೆಯನ್ನು ನೀಗುತ್ತಿದ್ದಾರೆ. ಪೃಥ್ವಿ ನಟನೆಯ ‘ನೈನ್‌’ ಸಿನಿಮಾ ವೈಜ್ಞಾನಿಕ ಕಾಲ್ಪನಿಕ ವಸ್ತುವನ್ನೊಳಗೊಂಡ ಚಿತ್ರ.

ಅದಕ್ಕಿಂತಲೂ ಆಸಕ್ತಿಯ ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕಿದೆ. ಪೃಥ್ವಿ ಈ ಚಿತ್ರದಲ್ಲಿ ವಿಜ್ಞಾನಿ ಆಲ್ಬರ್ಟ್‌ ಪಾತ್ರ ಮಾಡಿದ್ದಾರೆ.‘ನೈನ್‌’ಗೆ ಬಂಡವಾಳ ಹೂಡಿರುವುದು ಪೃಥ್ವಿ ಪತ್ನಿ ಸುಪ್ರಿಯಾ ಮೆನನ್.

‘ನಮ್ಮ ಚಿತ್ರರಂಗದಲ್ಲಿ ವೈಜ್ಞಾನಿಕ ವಸ್ತುವುಳ್ಳ ಚಿತ್ರಗಳನ್ನು ನಿರ್ಮಿಸುವ ಪ್ರಯತ್ನ ನಡೆದಿಲ್ಲ. ‘ನೈನ್‌’ ಈ ಕೊರತೆಯನ್ನು ನೀಗಲಿದೆ. ಸೈನ್ಸ್‌ ಫಿಕ್ಷನ್‌ ಹಾರರ್‌ ಥ್ರಿಲ್ಲರ್‌ ಚಿತ್ರವಾಗಿ ಮೂಡಿಬಂದಿದೆ.ಚಿತ್ರೀಕರಣ ಮುಗಿದಿದ್ದು ನಿರ್ಮಾಣೋತ್ತರ ಕೆಲಸಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ನಮ್ಮ ನಿರೀಕ್ಷೆಯಂತೆ ಎಲ್ಲ ಕೆಲಸಗಳು ಮುಗಿದರೆ ಫೆಬ್ರುವರಿ ಏಳರಂದು ‘ನೈನ್‌’ ಬಿಡುಗಡೆಯಾಗಲಿದೆ’ ಎಂದು ಪೃಥ್ವಿ ಹೇಳಿಕೊಂಡಿದ್ದಾರೆ.

ADVERTISEMENT

ಜೀನಸ್‌ ಮೊಹಮದ್‌ ನಿರ್ದೇಶನದ ‘ನೈನ್‌’ ಟ್ರೇಲರ್‌ ಇದೇ 9ರಂದು ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ವಿಷಯವನ್ನು ಪೃಥ್ವಿರಾಜ್‌ ಅವರೇ ಸಾಮಾಜಿಕ ಮಾಧ್ಯಮಗಳಿಗೆ ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ. ಪ್ರಕಾಶ್‌ರಾಜ್‌, ವಾಮಿಖಾ ಗಬಿ, ಮಮತಾ ಮೋಹನ್‌ದಾಸ್‌ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.