ADVERTISEMENT

ಡಿ.18ರಂದು ಆರ್​ಎಚ್​ 100 ತೆರೆಗೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 10:03 IST
Last Updated 14 ಡಿಸೆಂಬರ್ 2020, 10:03 IST
ಆರ್‌.ಎಚ್‌. 100 ಚಿತ್ರ ತಂಡ
ಆರ್‌.ಎಚ್‌. 100 ಚಿತ್ರ ತಂಡ   

ಆರ್‌ಎಚ್‌ 100 ಸಿನಿಮಾ ಇದೀಗ ಟ್ರೇಲರ್ ಬಿಡುಗಡೆಯಾಗಿದೆ. ಎಸ್.ಎಲ್.ಎಸ್ ಪ್ರೊಡಕ್ಷನ್ಸ್ಅಡಿ ಹರೀಶ್ ಕುಮಾರ್ ಎಲ್ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ.ಇತ್ತೀಚೆಗೆ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಭವನದಲ್ಲಿ ಟ್ರೇಲರ್ ಬಿಡುಗಡೆ ನಡೆಯಿತು. ಚಿತ್ರ ಡಿ. 18ರಂದು ಬಿಡುಗಡೆ ಆಗಲಿದೆ.

ಎಂ.ಸಿ. ಮಹೇಶ್‌ ಕಥೆ,ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಆ್ಯಕ್ಟ್–1978 ಚಿತ್ರದ ನಿರ್ಮಾಪಕ ದೇವರಾಜ್ ಆರ್, ನಿರ್ದೇಶಕ ಹರಿ ಸಂತು ನಟ ಚೇತನ್ ರಾಜ್ ಟ್ರೇಲರ್ಬಿಡುಗಡೆ ಮಾಡಿ ಶುಭ ಕೋರಿದರು.

ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಮಹೇಶ್, ‘ಒಟ್ಟು 38 ದಿನಗಳ ಕಾಲ ಬೆಂಗಳೂರು ಮತ್ತು ಕೊಡಚಾದ್ರಿಯಲ್ಲಿ ಚಿತ್ರದ ಬಹುಪಾಲು ಶೂಟಿಂಗ್ ಮಾಡಿಕೊಂಡಿದ್ದೇವೆ. ಸೆನ್ಸಾರ್ ಮಂಡಳಿಯಿಂದ ‘ಎʼ ಪ್ರಮಾಣ ಪತ್ರ ಸಿಕ್ಕಿದೆ’ ಎಂದರು.

ADVERTISEMENT

‘ಆರ್.ಎಕ್ಸ್ 100’ ಗೊತ್ತು, ಈ ‘ಆರ್.ಎಚ್. 100’ ಎಂದರೇನು? ಎಂಬ ಪ್ರಶ್ನೆ ಬರುವುದು ಸಹಜ. ಆದರೆ, ನಿರ್ದೇಶಕರು ಈ ಪ್ರಶ್ನೆಗೆ ಚಿತ್ರಮಂದಿರದಲ್ಲೇ ಉತ್ತರ ನೋಡಿ’ ಎಂದರು.

ಮನೋಜ್ ಹಾಗೂ ಸಿದ್ದು ಕೋಡಿಪುರ್ ಹಾಡುಗಳನ್ನು ಬರೆದಿದ್ದಾರೆ.ಮೆಲ್ವಿನ್ ಮೈಕಲ್ ಸಂಗೀತ ನೀಡಿದ್ದಾರೆ. ಸೋಮಶೇಖರ್ ಕಾರ್ಯಕಾರಿ ನಿರ್ಮಾಪಕರು.ಸಂಜಿತ್‌ ಹೆಗ್ಡೆ, ಅನುರಾಧಾ ಭಟ್, ಸಿದ್ದಾರ್ಥ್ ಬೆಲ್‌ ಮನುಹಾಡಿದ್ದಾರೆ. ಚಿತ್ರಕ್ಕೆ ಕೃಷ್ಣ ಛಾಯಾಗ್ರಹಣ, ಸಿ.ರವಿಚಂದ್ರನ್‌ ಸಂಕಲನ ಹಾಗೂ ಕುಂಗ್‌ಪೂ ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ. ಗಣೇಶ್, ಹರ್ಷ. ಚಿತ್ರ, ಕಾವ್ಯ, ಸೋಮ್ ಸುಹಿತ್ ಚಿತ್ರದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.