ADVERTISEMENT

ನವೆಂಬರ್‌ನಲ್ಲಿ ಪಿಗ್ಗಿ ಮದುವೆ?

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 19:30 IST
Last Updated 16 ಅಕ್ಟೋಬರ್ 2018, 19:30 IST
Mumbai: Bollywood actor Priyanka Chopra and American singer Nick Jonas during a ceremony to perform pre-wedding rituals at her Juhu residence, in Mumbai on Saturday, Aug 18, 2018. (PTI Photo) (PTI8_18_2018_000135B)

ಇದೇನವೆಂಬರ್‌ನಲ್ಲಿ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಗಾಯಕ, ನಟ ನಿಕ್‌ ಜೋನಾಸ್‌ ವಿವಾಹವು ಜೋಧ್‌ಪುರದ ಉಮೈದ್‌ ಭವನ ಪ್ಯಾಲೇಸ್‌ ಹೋಟೆಲ್‌ನಲ್ಲಿ ನಡೆಯಲಿದೆ.

ಇತ್ತೀಚೆಗೆ ಈ ಜೋಡಿ ರಾಜಸ್ತಾನದ ಜೋಧ್‌ಪುರಕ್ಕೆ ಭೇಟಿ ನೀಡಿದ್ದರು. ಆಗ ವಿವಾಹ ಸ್ಥಳವನ್ನು ನಿಗದಿಗೊಳಿಸಿ, ಮದುವೆಗಾಗಿ ಕೆಲ ಆಭರಣಗಳನ್ನು ಖರೀದಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮದುವೆ ದಿನಾಂಕ ಹಾಗೂ ಸ್ಥಳವನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ. ಈ ಮದುವೆಗೆ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಸಿನಿಮಾ ಗಣ್ಯರು ಸೇರಿ ಬರೀ 200 ಜನರನ್ನಷ್ಟೇ ಆಹ್ವಾನಿಸಲಾಗುತ್ತದೆ ಎನ್ನಲಾಗಿದೆ.

ಇತ್ತೀಚೆಗೆ ಪ್ರಿಯಾಂಕಾ ಹಾಲ್ಬರ್ಟನ್‌ ಸ್ಕೂಲ್‌ ಎಂಬ ಸ್ಟಾರ್ಟ್‌ ಅಪ್‌ಗೂ ಹಣ ಹೂಡಿಕೆ ಮಾಡಿದ್ದರು. ಈ ಮೂಲಕ ವಾಣಿಜ್ಯ ಕ್ಷೇತ್ರಕ್ಕೂ ಲಗ್ಗೆಯಿಟ್ಟಿದ್ದರು. ಮದುವೆ ಬಳಿಕ ಅವರು ಲಾಸ್‌ ಏಂಜಲೀಸ್‌ ಹಾಗೂ ನ್ಯೂಯಾರ್ಕ್‌ನಲ್ಲೇ ಹೆಚ್ಚು ಸಮಯ ಕಳೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.