ADVERTISEMENT

‘ನಿಕ್ ಜೋನಸ್ ಪತ್ನಿ‘ ಎಂದು ಸಂಬೋಧಿಸಿದ ಮಾಧ್ಯಮ ಸಂಸ್ಥೆ ವಿರುದ್ಧ ಪ್ರಿಯಾಂಕಾ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2021, 5:51 IST
Last Updated 17 ಡಿಸೆಂಬರ್ 2021, 5:51 IST
ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾಗ್ರಾಮ್ ಖಾತೆಯ ಚಿತ್ರ
ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾಗ್ರಾಮ್ ಖಾತೆಯ ಚಿತ್ರ   

ನ್ಯೂಯಾರ್ಕ್: ತಮ್ಮನ್ನು ನಿಕ್ ಜೋನಸ್ ಪತ್ನಿ ಎಂದು ಸಂಬೋಧಿಸಿ ಸುದ್ದಿ ಪ್ರಸಾರ ಮಾಡಿದ ಮಾಧ್ಯಮ ಸಂಸ್ಥೆಯೊಂದರ ವಿರುದ್ಧ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕಿಡಿಕಾರಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಅವರು, ನನಗೆ ನನ್ನದೇ ಆದ ಐಡೆಂಟಿಟಿ ಇದೆ. ನನ್ನ ಸಾಮಾಜಿಕ ಮಾಧ್ಯಮಗಳಖಾತೆಯ ಬಯೊದಲ್ಲಿ ಐಎಂಡಿಬಿ(ಸಿನಿಮಾ, ಟಿವಿ ಸರಣಿ ಮುಂತಾದ ಮನರಂಜನಾ ಕ್ಷೇತ್ರದ ಮಾಹಿತಿಯನ್ನೊಳಗೊಂಡ ಆನ್‌ಲೈನ್ ಡೇಟಾ ಬೇಸ್) ಲಿಂಕ್ ಸೇರಿಸಬೇಕೆ? ಇಂದಿಗೂ ಮಹಿಳೆಯರಿಗೆ ಏಕೆ ಹೀಗೆ ಆಗುತ್ತಿದೆ? ಈ ಬಗ್ಗೆ ವಿವರಣೆ ನೀಡಿ ಎಂದು ಪ್ರಿಯಾಂಕಾ ಚೋಪ್ರಾ ಒತ್ತಾಯಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಹಂಚಿಕೊಂಡಿರುವ ಸ್ಕ್ರೀನ್ ಶಾಟ್‌ನಲ್ಲಿ‘ಗುಡ್ ಮಾರ್ನಿಂಗ್ ಅಮೆರಿಕ ಜೊತೆ ಮಾತನಾಡಿದ ನಿಕ್ ಜೋನಸ್ ಪತ್ನಿ, ‘ಮ್ಯಾಟ್ರಿಕ್ಸ್ ರಿಸರೆಕ್ಷನ್‌’ ಚಿತ್ರದ ಸಹ ನಟ ಕೀನು ರೀವ್ಸ್‌ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ’ಎಂದು ವರದಿ ಮಾಡಿರುವುದು ಕಂಡುಬಂದಿದೆ.

ADVERTISEMENT

ಈ ವರದಿಯನ್ನು ಉಲ್ಲೇಖಿಸಿರುವ ಪ್ರಿಯಾಂಕಾ ಚೋಪ್ರಾ, ‘ಅತ್ಯಂತ ಕುತೂಹಲಕಾರಿ ವಿಷಯವೇನೆಂದರೆ ನಾನು, ಸಾರ್ವಕಾಲಿಕ ಐಕಾನಿಕ್ ಫಿಲ್ಮ್ ಫ್ರಾಂಚೈಸಿಯನ್ನು ಪ್ರಮೋಟ್ ಮಾಡುತ್ತಿದ್ದೇನೆ.. ಆದರೆ, ಈಗಲೂ ನನ್ನನ್ನು ವೈಫ್ ಆಫ್... ಎಂದೇ ಸಂಬೋಧಿಸಲಾಗುತ್ತಿದೆ’ಎಂದು ಬರೆದುಕೊಂಡಿದ್ದಾರೆ.

‘ಮಹಿಳೆಯರಿಗೇಕೆ ಈಗಲೂ ಹೀಗೆ ಆಗುತ್ತಿದೆ. ದಯವಿಟ್ಟು ಈ ಬಗ್ಗೆ ವಿವರಣೆ ನೀಡಿ. ನನ್ನ ಬಯೊದಲ್ಲಿ ಐಎಂಡಿಬಿ ಲಿಂಕ್ ಶೇರ್ ಮಾಡಬೇಕೆ?’ ಎಂದು ಪ್ರಶ್ನಿಸಿದ್ದು, ಪತಿ ನಿಕ್ ಜೋನಸ್ ಖಾತೆಗೆ ಟ್ಯಾಗ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.