ADVERTISEMENT

ಸಕೂಚಿ ಚಿತ್ರದ ಟ್ರೈಲರ್‌- ಮಾಟ ಮಂತ್ರ!

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 12:23 IST
Last Updated 1 ಫೆಬ್ರುವರಿ 2023, 12:23 IST
ಡಯಾನಾ, ತ್ರಿವಿಕ್ರಮ್‌
ಡಯಾನಾ, ತ್ರಿವಿಕ್ರಮ್‌   

ಮಾಟ ಮಂತ್ರದ ಕಥೆಯನ್ನು ಟ್ರೈಲರ್‌ನಲ್ಲೇ ಹೇಳಿದರೆ ಹೇಗೆ? ಹಾಗೊಂದು ‘ಮಾಟ ಪ್ರಯೋಗ’ ಮಾಡಿದೆ ಸಕೂಚಿ ಚಿತ್ರದ ಟ್ರೈಲರ್‌. ಜಂಕಾರ್‌ ಮ್ಯೂಸಿಕ್‌ನ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾದ ಈ ಟ್ರೈಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ಫೆ. 17ರಂದು ತೆರೆ ಕಾಣಲಿದೆ.

ಶಬ್ದ ಪರಿಣಾಮ, ದೃಶ್ಯ ಜೋಡಣೆ ವಿಶೇಷವಾಗಿ ಮೂಡಿಬಂದಿದೆ. ‘ಸಕೂಚಿ’ ಚಿತ್ರಕ್ಕೆ ಸಾವಿನ ಸೂಚಿ ಎಂಬ ಅಡಿಬರಹವಿದೆ. ಸಕೂಚಿ ಎಂದರೆ ಅತಿ ಘೋರ ಎಂದರ್ಥ. ನಿರ್ದೇಶಕ ಅಶೋಕ ಚಕ್ರವರ್ತಿ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ. ಅಂದಹಾಗೆ ಇದು ಅವರ ನಿರ್ದೇಶನದ ಮೊದಲ ಚಿತ್ರ. ಮಾಟ ಮಂತ್ರ ವಿಷಯಕ್ಕೆ ಕಮರ್ಷಿಯಲ್‌ ಸ್ಪರ್ಶ ನೀಡಲಾಗಿದೆ ಎಂಬುದು ನಿರ್ದೇಶಕರ ವಿವರಣೆ.

ತ್ರಿವಿಕ್ರಮ್‌ ಸಾಮ್ರಾಟ್‌ ಈ ಚಿತ್ರದ ನಾಯಕ. ವಿಕ್ಕಿ ಮಾರ್ಟಿನ್‌ ಎಂಬುದು ಅವರ ಪಾತ್ರದ ಹೆಸರು. ಡಯಾನ ಈ ಚಿತ್ರದ ನಾಯಕಿ. ಚಿತ್ರದಲ್ಲಿ ಮುಗ್ದ ಹುಡುಗಿ. ಸಂಗೀತವೇ ಚಿತ್ರದ ಮುಖ್ಯ ಅಂಶ. ಗಣೇಶ್ ಗೋವಿಂದಸ್ವಾಮಿ ಅವರು ಸಂಗೀತ ಸಂಯೋಜಿಸಿದ್ದಾರೆ ಎಂದಿದೆ ಚಿತ್ರತಂಡ.

ADVERTISEMENT

ಅಶ್ವಿನ್‌ ಬಿ.ಸಿ. ನಿರ್ಮಾಪಕರು. ಮಧುಕರ್‌ ಜೆ., ಮಹಾವೀರ್‌ ಪ್ರಸಾದ್‌ ಸಹ ನಿರ್ಮಾಪಕರು. ಆನಂದ್ ಸುಂದ್ರೇಶ್ ಛಾಯಾಗ್ರಹಣ, ಮಹೇಶ್ ಸಂಕಲನ, ಕುಂಫು ಚಂದ್ರು ಸಾಹಸ, ಆನಂದ್ ನೃತ್ಯವಿದೆ. ಚಿತ್ರದಲ್ಲಿ ಸಂಜಯ್ ರಾಜ್ ನಟನೆಯ ಜೊತೆಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ 30-40 ಮಂಗಳ ಮುಖಿಯರು ಅಭಿನಯಿಸಿದ್ದಾರೆ. ಚಿತ್ರದಲ್ಲಿ ಹರೀಶ್‌ ಅವರದ್ದು ಖಳ ಪಾತ್ರ.

ಟ್ರೈಲರ್‌ ನೋಡಲು:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.