ADVERTISEMENT

ಸಂತ ಕಬೀರನಾಗಿ...

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 19:59 IST
Last Updated 11 ಜುಲೈ 2013, 19:59 IST

ನಟ ಶಿವರಾಜ್‌ಕುಮಾರ್ ಕೆಲ ಶತಮಾನಗಳ ಹಿಂದಕ್ಕೆ ಪಯಣಿಸಲಿದ್ದಾರೆ.  `ಕಬೀರ'ನಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಸೂಕ್ಷ್ಮ ಸಂವೇದನೆಯುಳ್ಳ ನಿರ್ದೇಶಕ ನರೇಂದ್ರ ಬಾಬು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಪೂರ್ವ ತಯಾರಿ ಆರಂಭವಾಗಿದೆ.

ಅವರು ಈ ಹಿಂದೆ `ಕಬಡ್ಡಿ' ಚಿತ್ರ ನಿರ್ದೇಶಿಸಿದ್ದರು. `ಭಜರಂಗಿ' ಚಿತ್ರೀಕರಣದ ವೇಳೆ ಶಿವಣ್ಣ ಈ ವಿಷಯವನ್ನು ಬಿಚ್ಚಿಟ್ಟರು. `ಆರ್ಯನ್' ಹಾಗೂ ರಾಧಿಕಾ ಕುಮಾರಸ್ವಾಮಿ ಅವರೊಂದಿಗೆ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಪೂರ್ಣಗೊಂಡ ಬಳಿಕ ಕಬೀರನಾಗಿ
ಅವರು ತೆರೆ ಮೇಲೆ ಬರಲಿದ್ದಾರೆ.

ವರನಟ ರಾಜ್‌ಕುಮಾರ್ ಈಗಾಗಲೇ `ಸಂತ ಕಬೀರ'ನಾಗಿ ಮಿಂಚಿದ್ದರು. ಅದು 1962ರಲ್ಲಿ ತೆರೆಕಂಡಿತ್ತು.  

ಅಂದಹಾಗೆ ಇಂದು (ಜು.12) ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬ. ಈ ಸಂದರ್ಭವನ್ನು ಉತ್ತರಾಖಂಡ ದುರಂತದ ಸಂತ್ರಸ್ತರಿಗೆ ಧನ ಸಹಾಯ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳೂ ಅದಕ್ಕೆ ಸಾಥ್ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.