ಬಾಲಿವುಡ್ ನಟ–ನಟಿಯರಿಗೂ ಟ್ರೋಲಿಗರಿಗೂ ಬಿಡಲಾರದ ಸಂಬಂಧ ಅನಿಸುತ್ತಿದೆ. ಈಚೆಗಷ್ಟೇ ನಟ ಶಾಹೀದ್ ಕಪೂರ್ ಪತ್ನಿ ಮೀರಾ ರಜಪೂತ್ ವಿರುದ್ಧ ದಾಳಿ ನಡೆದಿತ್ತು. ಇದೀಗ ನಟಿ ಕೃತಿ ಸನನ್ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲಿಗರ ದಾಳಿಗೆ ಗುರಿಯಾಗಿದ್ದಾರೆ.
ಮಹಿಳಾ ಸಬಲೀಕರಣದ ಉದ್ದೇಶದ ಹಿನ್ನೆಲೆಯಲ್ಲಿ ಕೃತಿ ಸನನ್ ಪತ್ರಿಕೆಯೊಂದರ ಮುಖಪುಟಕ್ಕೆ ನೀಡಿದ್ದ ಫೋಸ್ ಈಗ ಟ್ರೋಲಿಗರ ದಾಳಿಯ ವಿಷಯವಾಗಿದೆ. ಇಂಗ್ಲೆಂಡ್‌ನ ಟ್ಯಾಕ್ಸಿಟರ್ಮಿ ಮ್ಯೂಸಿಯಂನಲ್ಲಿ ಇಡಲಾಗಿದ್ದ ಜಿರಾಫೆಯ ಪ್ರತಿರೂಪದ ಜತೆಗೆ ಕೃತಿ ಫೋಟೊ ತೆಗೆಸಿಕೊಂಡಿದ್ದರು. ಜಿರಾಫೆಯನ್ನು ಗೋಡೆಗೆ ತೂಗು ಹಾಕಿದ ಮಾದರಿಯಲ್ಲಿ ಚಿತ್ರವನ್ನು ತೆಗೆಯಲಾಗಿದ್ದು ಇದಕ್ಕಾಗಿ ಕೃತಿ ಟ್ರೋಲಿಗರ ದಾಳಿಗೆ ತುತ್ತಾಗಿದ್ದಾರೆ. ಹಲವರು ಪ್ರಾಣಿಹಿಂಸೆಯ ಬಗ್ಗೆ ಕೃತಿಗೆ ಬೋಧನೆಯನ್ನೂ ಮಾಡಿದ್ದಾರೆ.
ಸಹಜವಾಗಿ ಸತ್ತ ಕಾಡುಪ್ರಾಣಿಗಳನ್ನು ಅಧ್ಯಯನಕ್ಕಾಗಿ ಟ್ಯಾಕ್ಸಿಟರ್ಮಿ ಮ್ಯೂಸಿಯಂನಲ್ಲಿ ಇಡಲಾಗುತ್ತದೆ. ಫೋಟೊ ಶೂಟ್ ಸಂದರ್ಭದಲ್ಲಿ ಪ್ರಾಣಿಯ ಪ್ರತಿರೂಪಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಲಾಗಿದೆ ಎನ್ನುವ ಒಕ್ಕಣೆಯನ್ನೂ ಪತ್ರಿಕೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿತ್ತು. ಆದರೂ ಕೃತಿ ವಿರುದ್ಧ ಟ್ರೋಲ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.