ADVERTISEMENT

ಚಳಿಗಾಲದ ನಾಲಗೆಗೆ ಖಾರದ ಖಾದ್ಯಗಳು

ರೇಷ್ಮಾ ಶೆಟ್ಟಿ
Published 10 ನವೆಂಬರ್ 2017, 19:30 IST
Last Updated 10 ನವೆಂಬರ್ 2017, 19:30 IST
ಚಳಿಗಾಲದ ನಾಲಗೆಗೆ ಖಾರದ ಖಾದ್ಯಗಳು
ಚಳಿಗಾಲದ ನಾಲಗೆಗೆ ಖಾರದ ಖಾದ್ಯಗಳು   

ಮಟನ್ ಗ್ರೇವಿ

ಬೇಕಾಗುವ ಸಾಮಗ್ರಿಗಳು
ಮಟನ್ – 1/2ಕೆ.ಜಿ.
ಎಣ್ಣೆ – 3ಟೇಬಲ್ ಚಮಚ
ಹೆಚ್ಚಿದ ಈರುಳ್ಳಿ – 3ಮಧ್ಯಮ ಗಾತ್ರದ್ದು
ಶುಂಠಿ ಬೆಳ್ಳುಳ್ಳಿ – 1ಟೇಬಲ್ ಚಮಚ
ಉಪ್ಪು – ರುಚಿಗೆ
ಕೆಂಪುಮೆಣಸಿನ ಪುಡಿ – 1ಟೇಬಲ್ ಚಮಚ, ಅರಿಶಿಣ ಪುಡಿ – 1/4ಚಮಚ
ದನಿಯಾ ಪುಡಿ – 1/4ಚಮಚ
ಜೀರಿಗೆ ಪುಡಿ – 1ಟೇಬಲ್ ಚಮಚ
ಸಣ್ಣಗೆ ಹೆಚ್ಚಿದ ಟೊಮೆಟೊ – 2
ಮೊಸರು – 1ಕಪ್‌
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2ಟೇಬಲ್ ಚಮಚ
ಮಟನ್ ಮಸಾಲ – 1ಟೇಬಲ್ ಚಮಚ
ಗರಂ ಮಸಾಲ – 1/2ಟೇಬಲ್ ಚಮಚ

ತಯಾರಿಸುವ ವಿಧಾನ: ಒಂದು ಪ್ರೆಶರ್ ಕುಕ್ಕರ್ ತೆಗೆದುಕೊಂಡು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಹುರಿಯಿರಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಕೆಲವು ನಿಮಿಷಗಳ ಕಾಲ ಕೈಯಾಡಿಸಿ. ಅದಕ್ಕೆ ಮಟನ್ ತುಂಡುಗಳನ್ನು ಹಾಕಿ ಅದು ಬಣ್ಣ ಬದಲಾಗುವವರೆಗೂ ಫ್ರೈ ಮಾಡಿ. ನಂತರ ಅದಕ್ಕೆ ಉಪ್ಪು, ಕೆಂಪು ಮೆಣಸಿನ ಪುಡಿ, ಅರಿಶಿಣ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ, ಮಟನ್ ಮಸಾಲ ಪುಡಿ – ಇವೆಲ್ಲವನ್ನೂ ಮಿಕ್ಸ್ ಮಾಡಿ. ನಂತರ 2ರಿಂದ3 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ, ಆ ಮಿಶ್ರಣಕ್ಕೆ ಹೆಚ್ಚಿದ ಟೊಮೆಟೊ ಸೇರಿಸಿ, ಟೊಮೆಟೊ ನುಣ್ಣಗಾಗುವವರೆಗೂ ಬೇಯಿಸಿ. ಅದಕ್ಕೆ ಮೊಸರು ಸೇರಿಸಿ, ಇವೆಲ್ಲವನ್ನೂ ಚೆನ್ನಾಗಿ ಬೇಯಿಸಿ. ಆಮೇಲೆ ಸ್ವಲ್ಪ ನೀರು, ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ, ಮಟನ್ ಮೆತ್ತಗಾಗುವರೆಗೂ ಬೇಯಿಸಿ. ನಂತರ ಉರಿ ಕಡಿಮೆ ಮಾಡಿ, ಕೊನೆಯಲ್ಲಿ ಗರಂ ಮಸಾಲ ಪುಡಿ ಸೇರಿಸಿ ಸಣ್ಣ ಉರಿಯಿಟ್ಟು 2 ನಿಮಿಷ ಹಾಗೆ ಬಿಡಿ. ನಂತರ ಗ್ಯಾಸ್ ಆಫ್ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಟನ್ ಮಸಾಲ ರೆಡಿ, ಇದು ಅನ್ನ ಮತ್ತು ರೊಟ್ಟಿಯ ಜೊತೆ ತಿನ್ನಲು ಸರಿ ಹೊಂದುತ್ತದೆ.

ADVERTISEMENT

**

ಬಟರ್ ಚಿಕನ್ ಮಸಾಲ

ಚಿಕನ್ ಸಿದ್ಧತೆಗೆ ಬೇಕಾಗುವ ಸಾಮಗ್ರಿಗಳು:
ಮೂಳೆ ಸಹಿತ ಚಿಕನ್ – 1/2ಕೆ.ಜಿ.
ಮೊಸರು – 1ಕಪ್‌
ಕೆಂಪು ಮೆಣಸಿನ ಪುಡಿ – 1/2ಟೇಬಲ್ ಚಮಚ
ಉಪ್ಪು – ರುಚಿಗೆ, ಮೆಂತ್ಯಸೊಪ್ಪು – 2ಟೇಬಲ್ ಚಮಚ
ನಿಂಬೆರಸ – 1ಟೇಬಲ್ ಚಮಚ
ಶುಂಠಿ– ಬೆಳ್ಳುಳ್ಳಿ ಪೇಸ್ಟ್ – 1ಟೇಬಲ್ ಚಮಚ
ಬಟರ್ ಮಸಾಲ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಬೆಣ್ಣೆ – 2ಟೇಬಲ್ ಚಮಚ
ಈರುಳ್ಳಿ – 2
ದನಿಯಾ ಪುಡಿ – 1ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್‌ – 1ಚಮಚ, ಟೊಮೆಟೊ – 4
ಗೋಡಂಬಿ – 1/4ಕಪ್‌
ಬಾದಾಮಿ – 5–6
ಹಸಿರುಮೆಣಸಿನಕಾಯಿ – 3 ರಿಂದ 4
ಕೆಂಪು ಮೆಣಸಿನ ಪುಡಿ – 1ಟೇಬಲ್ ಚಮಚ
ಉಪ್ಪು –ರುಚಿಗೆ
ಮೆಂತ್ಯಸೊಪ್ಪು – 1ಟೇಬಲ್ ಚಮಚ
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 1ಚಮಚ
ಕ್ರೀಮ್ – 1/4ಕಪ್‌
ಪಲಾವ್ ಎಲೆ – 1
ಕೊತ್ತಂಬರಿ ಪುಡಿ – 1ಟೇಬಲ್ ಚಮಚ

ತಯಾರಿಸುವ ವಿಧಾನ: ಮೊದಲು ಕೋಳಿಮಾಂಸದ ತುಂಡುಗಳನ್ನು ಚೆನ್ನಾಗಿ ತೊಳೆಯಿರಿ. ನಂತರ ಮೇಲೆ ಚಿಕನ್ ಮಿಶ್ರಣದಲ್ಲಿ ಹೇಳಿದ ಎಲ್ಲ ಸಾಮಗ್ರಿಗಳನ್ನು ಈ ಮಾಂಸದೊಂದಿಗೆ ಸೇರಿಸಿ ಚೆನ್ನಾಗಿ ಕಲೆಸಿ ಅದನ್ನು 3ರಿಂದ4 ಗಂಟೆ ಫ್ರಿಜ್ಡ್‌ನಲ್ಲಿ ಇಡಿ. ನಂತರ ಪಾತ್ರೆಯೊಂದರಲ್ಲಿ ಬೆಣ್ಣೆ ಹಾಕಿ ಬಿಸಿಮಾಡಿ, ಅದಕ್ಕೆ ಫ್ರಿಜ್‌ನಲ್ಲಿ ಇರಿಸಿದ ಕೋಳಿಮಾಂಸದ ಮಿಶ್ರಣವನ್ನು ಸೇರಿಸಿ, ಮಧ್ಯಮ ಉರಿಯಲ್ಲಿ 4ರಿಂದ5 ನಿಮಿಷ ಬೇಯಿಸಿ. ಆ ಪಾತ್ರೆಯನ್ನು ತೆಗೆದು ಬದಿಗಿರಿಸಿ. ನಂತರ ಬೇರೆ ಪಾತ್ರೆಯೊಂದರಲ್ಲಿ 2 ಚಮಚ ಬೆಣ್ಣೆ ಹಾಕಿ, ಅದು ಕರಗಿದ ಮೇಲೆ ಹೆಚ್ಚಿದ ಈರುಳ್ಳಿ ಸೇರಿಸಿ. ನಂತರ ಅದಕ್ಕೆ ಜೀರಿಗೆ ಪುಡಿ ಮತ್ತು ಹಸಿಮೆಣಸು ಹಾಕಿ. ನಂತರ ಟೊಮೆಟೊ, ದನಿಯಾ ಪುಡಿ, ಶುಂಠಿ – ಬೆಳ್ಳುಳ್ಳಿ ಪೇಸ್ಟ್‌, ಹೆಚ್ಚಿದ ಮೆಂತ್ಯ ಸೊಪ್ಪು, ಕೆಂಪು ಮೆಣಸಿನ ಪುಡಿ, ಗೋಡಂಬಿ, ಬಾದಾಮಿ ಮತ್ತು ಪಲಾವ್ ಎಲೆ, ಉಪ್ಪು ಸೇರಿಸಿ. ನಂತರ ಎಲ್ಲದರ ಮಿಶ್ರಣವನ್ನು 5ರಿಂದ 6 ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಿ.

ನಂತರ ಗ್ಯಾಸ್ ಆಫ್ ಮಾಡಿ, ಈ ಮಿಶ್ರಣವನ್ನು ತಣಿಯಲು ಬಿಡಿ. ಅದನ್ನು ಮಿಕ್ಸರ್‌ಗೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿ, ಬೇರೆ ಪಾತ್ರೆಗೆ 6 ಚಮಚ ಬೆಣ್ಣೆಯನ್ನು ಹಾಕಿ, ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ, ನಂತರ ಅದನ್ನು ಚೆನ್ನಾಗಿ ಕುದಿಸಿ, ಆ ಮಿಶ್ರಣಕ್ಕೆ ಕಾಶ್ಮೀರಿ ಕೆಂಪು ಮೆಣಸಿನ ಪುಡಿ ಸೇರಿಸಿ 2ರಿಂದ3 ನಿಮಿಷ ಕುದಿಸಿ. ಆ ಮಿಶ್ರಣಕ್ಕೆ ಬೇಯಿಸಿದ ಮಾಂಸದ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ 1–1/2 ಗ್ಲಾಸ್ ನೀರು ಸೇರಿಸಿ. ಈಗ ಉಪ್ಪು ಸರಿಯಾಗಿದೆಯೇ ಎಂದು ನೋಡಿ ಮಧ್ಯಮ ಉರಿಯಲ್ಲಿ ಬೇಯಿಸಿ. ಸುಮಾರು 12ರಿಂದ 13 ನಿಮಿಷದವರೆಗೆ ಬೇಯಿಸಿಬೇಕು. ನಂತರ ಗ್ಯಾಸ್ ಆಫ್ ಮಾಡಿ ಗ್ರೇವಿಗೆ ಕ್ರೀಮ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ರುಚಿಯಾದ ಬಟರ್ ಮಸಾಲ ಚಿಕನ್ ತಿನ್ನಲು ರೆಡಿ. ನಾನ್, ಚಪಾತಿ ಮತ್ತು ಪಲಾವ್ ಜೊತೆ ತಿನ್ನಲು ಚೆನ್ನಾಗಿರುತ್ತದೆ.

**

ಫ್ರೈಡ್ ಚಿಕನ್‌

ಬೇಕಾಗುವ ಸಾಮಗ್ರಿಗಳು:

ಚಿಕನ್ ತುಂಡುಗಳು – 1/2ಕೆ.ಜಿ.
ಮೊಸರು – 200 ಗ್ರಾಂ
ಕರಿಮೆಣಸಿನ ಪುಡಿ – 1/2 ಟೀ ಚಮಚ
ಜೀರಿಗೆ ಪುಡಿ – 1/4 ಟೀ ಚಮಚ
ಉಪ್ಪು – ರುಚಿಗೆ
ಶುಂಠಿ – ಬೆಳ್ಳುಳ್ಳಿ – 2 ಟೀ ಚಮಚ
ಎಣ್ಣೆ – ಕರಿಯಲು

ತಯಾರಿಸುವ ವಿಧಾನ: ಕೋಳಿಮಾಂಸದ ತುಂಡುಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ನಂತರ ಪಾತ್ರೆ ತೆಗೆದುಕೊಂಡು ಅದರಲ್ಲಿ ಕೋಳಿಮಾಂಸದ ತುಂಡು ಮೊಸರು, ಕರಿಮೆಣಸಿನ ಪುಡಿ, ಜೀರಿಗೆ ಪುಡಿ, ಶುಂಠಿ – ಬೆಳ್ಳುಳ್ಳಿ ಪೇಸ್ಟ್‌ ಮತ್ತು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ನಂತರ 6 ಗಂಟೆಗಳ ಫ್ರಿಜ್‌ನಲ್ಲಿ ಇಡಿ. ನಂತರ ಪಾತ್ರೆಯೊಂದರಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಚಿಕನ್ ತುಂಡುಗಳನ್ನು ಹಾಕಿ, ಚೆನ್ನಾಗಿ ಹುರಿಯಿರಿ, ಕೋಳಿಮಾಂಸ ಹೊಂಬಣ್ಣ ಬರುವವರೆಗೂ ಹುರಿಯಿರಿ. ಈಗ ಫ್ರೈಡ್ ಚಿಕನ್ ತಿನ್ನಲು ರೆಡಿ.

**

ತಂದೂರಿ ಫಿಶ್

ಬೇಕಾಗುವ ಸಾಮಗ್ರಿಗಳು

ಕತ್ತರಿಸಿದ ಮೀನು – 1/4ಕೆ.ಜಿ.
ಶುಂಠಿ – ಹೆಚ್ಚಿದ್ದು –1ಟೇಬಲ್ ಚಮಚ ಬೆಳ್ಳುಳ್ಳಿ – 4ಎಸಳು
ವಿನೆಗರ್ – 1/3ಕಪ್‌
ಉಪ್ಪು – ರುಚಿಗೆ
ದನಿಯಾ ಬೀಜ – 1ಟೇಬಲ್ ಚಮಚ
ಜೀರಿಗೆ – 1ಟೇಬಲ್ ಚಮಚ
ಕರಿಮೆಣಸಿನ ಪುಡಿ – 1ಟೀ ಚಮಚ
ವೆಜಿಟೆಬಲ್ ಆಯಿಲ್ – 1/2ಕಪ್‌

ತಯಾರಿಸುವ ವಿಧಾನ: ಶುಂಠಿ, ಬೆಳ್ಳುಳ್ಳಿ, ವಿನೆಗರ್, ಉಪ್ಪು, ದನಿಯಾ, ಜೀರಿಗೆ ಮತ್ತು ಎಣ್ಣೆ ಸೇರಿಸಿ ಮಿಕ್ಸ್ ಮಾಡಿ ರುಬ್ಬಿ. ಅದು ಚೆನ್ನಾಗಿ ಪೇಸ್ಟ್ ಆಗಬೇಕು. ಆ ಮಿಶ್ರಣಕ್ಕೆ ಮೀನಿನ ತುಂಡು ಸೇರಿಸಿ ಮಿಕ್ಸ್ ಮಾಡಿ 4 ಗಂಟೆ ಫ್ರಿಜ್‌ನಲ್ಲಿ ಇರಿಸಿ. ನಂತರ ಓವನ್ ಅನ್ ಮಾಡಿ ಬಿಸಿ ಮಾಡಿ. ಓವನ್ ಉಷ್ಣತೆ ಹೆಚ್ಚಿರಲಿ. ನಂತರ ಫ್ರಿಜ್‌ನಲ್ಲಿ ಇರಿಸಿದ ಮೀನಿನ ತುಂಡುಗಳನ್ನು ಟ್ರೇಯಲ್ಲಿ ಇಟ್ಟು ಓವನ್ ಒಳಗಿಟ್ಟು 8ರಿಂದ 10 ನಿಮಿಷ ಸುಡಬೇಕು. ನಂತರ ಮೀನಿನ ತುಂಡಿನ ಮಗ್ಗಲು ಬದಲಾಯಿಸಿ ಇನ್ನೊಂದು ಬದಿಯನ್ನು 8 ನಿಮಿಷ ಸುಡಿ. ಈಗ ತಂದೂರಿ ಚಿಕನ್ ರೆಡಿ. ಮೀನಿನ ಗಾತ್ರದಂತೆ ಮೀನು ಬೇಯುವ ಸಮಯವೂ ಬದಲಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.