ADVERTISEMENT

ವಿಶಿಷ್ಟ ಅನುಭವದ ಈಟ್‌ ಔಟ್‌

ಪ್ರಶಾಂತ್‌ ಕೋದಂಡ. ವಿದ್ಯಾರಣ್ಯಪುರ
Published 18 ಫೆಬ್ರುವರಿ 2019, 20:00 IST
Last Updated 18 ಫೆಬ್ರುವರಿ 2019, 20:00 IST
   

ಈ ಟ್ ಔಟ್. ವಿದ್ಯಾರಣ್ಯಪುರದ ಜನರಿಗೆ ಚಿರಪರಿಚಿತಮೊಬೈಲ್‌ ಕ್ಯಾಂಟಿನ್‌. ಸಂಜೆಯಾಗುತ್ತಿದ್ದಂತೆ ವಿದ್ಯಾರಣ್ಯಪುರದ ಬಸ್ ನಿಲ್ದಾಣದ ಎದುರಿಗೆ ಹಾಜರ್.

ಸಸ್ಯಾಹಾರಿ ತಿನಿಸುಗಳು ಲಭ್ಯ. ಬಿಸಿಬಿಸಿ ಇಡ್ಲಿ , ಗರಿಗರಿ ವಡೆ (ತಲಾ ಒಂದಕ್ಕೆ ₹ 10), ದೋಸೆ (₹ 30), ಅಕ್ಕಿರೊಟ್ಟಿ, ಶಾವಿಗೆ ಬಾತ್, ಚೌಚೌಬಾತ್ ಹಾಗೂ ದಿನಕ್ಕೊಂದರಂತೆ ರೈಸ್ ಬಾತ್‌ ಜೊತೆಗೆ ಎರಡು ಬಗೆಯ ಚಟ್ನಿ ತಿನಿಸುಗಳಿರುತ್ತವೆ. ರೊಟ್ಟಿ, ಚೌ ಚೌ ಬಾತ್ ಹಾಗೂ ಅರ್ಧ ಪ್ಲೇಟ್ ರೈಸ್ ಬಾತ್ ಸಿಗುವುದರಿಂದ ಹೊಟ್ಟೆಗೆ ತಕ್ಕಷ್ಟು ತಿನಿಸುಗಳನ್ನು ಮಿತ ಬೆಲೆಯಲ್ಲಿ, ಶುಚಿತ್ವದ ವಾತಾವರಣದಲ್ಲಿ ಸವಿಯಬಹುದು.

ವಿದ್ಯಾರಣ್ಯಪುರ ಸುತ್ತಮುತ್ತಲಿನ ಬಡಾವಣೆಯ ನಾಗರಿಕರು ಈಟ್ಔಟ್‌ಗೆ ಕುಟುಂಬದ ಸಮೇತ ಭೇಟಿ ನೀಡುತ್ತಾರೆ. ಜೊತೆಗೆ ಪಾರ್ಸಲ್ ಕೊಂಡೊಯ್ಯುತ್ತಾರೆ. ಕೂರಲು ಕುರ್ಚಿ, ಶುಚಿತ್ವ ಕಾಪಾಡಲು ಡಸ್ಟ್‌ಪಿನ್‌ಗಳು ಹಾಗೂ ನ್ಯಾಪ್‌ಕಿನ್‌ ಲಭ್ಯ. ಅಡಿಕೆ ತಟ್ಟೆ ಹಾಗೂ ಸ್ಟೀಲ್ ಚಮಚ ಉಪಯೋಗಿಸುವುದರಿಂದ ಪ್ಲಾಸ್ಟಿಕ್ ದೂರ.

ADVERTISEMENT

ಮೊಬೈಲ್ ವಾಹನದಲ್ಲಿ ದೋಸೆ ಹಾಗೂ ರೊಟ್ಟಿ ಮಾಡಲು ಎರಡು ಬೇರೆ ಬೇರೆ ಕಾವಲಿಗಳಿವೆ. ಇಡ್ಲಿ ಮಾಡಲು ಒಂದು ಸ್ಟೌ, ಹೊಗೆ ಹೋಗಲು ಚಿಮಿಣಿ, ಎಲ್.ಇ.ಡಿ ದೀಪ ಹಾಗೂ ಕೈ ತೊಳೆಯುವ ವ್ಯವಸ್ಥೆ ಅಳವಡಿಸಲಾಗಿದೆ. ನಗುಮುಖದಿಂದಲೆ ಮಾತನಾಡುವ ಮಾಲೀಕ ಲೋಕೇಶ್, ಅಣ್ಣ, ಸರ್, ಮೇಡಂ ಎಂದೆ ಗ್ರಾಹಕರನ್ನು‌ ಬರಮಾಡಿಕೊಳ್ಳುತ್ತಾರೆ.

ನೆಟ್‌ವರ್ಕಿಂಗ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಲೋಕೇಶ್ ಸ್ವಂತ ಉದ್ಯೋಗ ಮಾಡಬೇಕೆಂದು ತೀರ್ಮಾನಿಸಿದರು. ಟಾಟಾ ಸೂಪರ್ ಎಸ್ ವಾಹನವನ್ನು ಕೊಂಡು ಅನೂಕುಲಕ್ಕೆ ತಕ್ಕಂತೆ ವಾಹನವನ್ನು ವಿನ್ಯಾಸ ಮಾಡಿಸಿಈಟ್ ಔಟ್ ಮೊಬೈಲ್ ಕ್ಯಾಂಟೀನ್ ಸಜ್ಜುಗೊಳಿಸಿದರು. ಸೆಪ್ಟೆಂಬರ್ 2015 ರಲ್ಲಿ ಕಾರ್ಯಾರಂಭ ಮಾಡಿದ ಈಟ್ ಔಟ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.