ADVERTISEMENT

ಕಪ್ಪು ವರ್ತುಲಕ್ಕೆ ಪರಿಹಾರ

ಚುಟುಕು ಚುರುಕು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 19:59 IST
Last Updated 13 ಸೆಪ್ಟೆಂಬರ್ 2013, 19:59 IST

ರಕ್ತಹೀನತೆ, ನಿದ್ರಾಹೀನತೆ, ಅಲರ್ಜಿ, ಖಿನ್ನತೆ, ವಯಸ್ಸಾಗುವಿಕೆ ಅಥವಾ ವೈದ್ಯಕೀಯ ಕಾರಣದಿಂದ ನಿಮ್ಮ ಕಣ್ಣಿನ ಸುತ್ತ ಕಪ್ಪು ವರ್ತುಲ ಮೂಡಬಹುದು. ಇದು ಮುಖದ ಅಂದ ಕೆಡಿಸುವುದಷ್ಟೇ ಅಲ್ಲ, ಅನಾರೋಗ್ಯದ ಅನಾವರಣವೂ ಹೌದು. ಆದ್ದರಿಂದ ಕಣ್ಣಿನ ಕಪ್ಪು ವರ್ತುಲವನ್ನು ಹೋಗಲಾಡಿಸಲು ಇಲ್ಲಿವೆ ಕೆಲವು ಕ್ರಮಗಳು:

*ಎರಡು ಅಥವಾ ಮೂರು ತುಂಡು ಸೌತೆ ಕಾಯಿಯನ್ನು ಬಳಸಿ ಜ್ಯೂಸ್ ತೆಗೆಯಿರಿ. ಎರಡು ಹತ್ತಿಯ ತುಣುಕುಗಳನ್ನು ತೆಗೆದುಕೊಂಡು ಆ ಜ್ಯೂಸ್‌ನಲ್ಲಿ ಅದ್ದಿ, ಅದನ್ನು ಕಣ್ಣಿನ ಮೇಲೆ ಇಟ್ಟುಕೊಂಡು ಕೆಲ ನಿಮಿಷ ವಿಶ್ರಮಿಸಿ. ಇದೇ ರೀತಿ 2-– 3 ಬಾರಿ ಮಾಡಿ. ಪ್ರತಿದಿನ ಹೀಗೆ ಮಾಡುವುದರಿಂದ ಕಣ್ಣಿಗೆ ತಂಪು ನೀಡುವುದಲ್ಲದೆ ಕಪ್ಪು ವರ್ತುಲವೂ ಮಾಯವಾಗುತ್ತದೆ.

*ಉತ್ತಮ ಗುಣಮಟ್ಟದ ಅರಿಶಿಣದ ಪುಡಿಯನ್ನು ಅನಾನಸ್ ಹಣ್ಣಿನ ಜ್ಯೂಸ್‌ನಲ್ಲಿ ಬೆರೆಸಿ ಪೇಸ್ಟ್ ಮಾಡಿಕೊಂಡು ಕಪ್ಪು ವರ್ತುಲದ ಮೇಲೆ ಲೇಪಿಸಿಕೊಳ್ಳಿ. 10– -15 ನಿಮಿಷಗಳ ನಂತರ ಹತ್ತಿಯಿಂದ ಒರೆಸಿ ನಂತರ ತೊಳೆದುಕೊಳ್ಳಿ.

*ಹಸಿರು ಸೇಬು ಹಣ್ಣನ್ನು ಬೇಯಿಸಿ ಪೇಸ್ಟ್ ಮಾಡಿ ಕಣ್ಣಿನ ಸುತ್ತ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ತೊಳೆಯಿರಿ. ಇದರಲ್ಲಿರುವ ಪೊಟ್ಯಾಷಿಯಂ, ವಿಟಮಿನ್ ಬಿ ಮತ್ತು ಸಿ ಕಪ್ಪು ವರ್ತುಲವನ್ನು ಹೋಗಲಾಡಿಸುವುದರ ಜೊತೆಗೆ ಆ ಚರ್ಮವನ್ನು ಆರೋಗ್ಯಕರವಾಗಿ ಇಡಲು ಸಹಕರಿಸುತ್ತವೆ.

*ಹಲ್ಲು ನೋವಿನ ಉಪಶಮನಕ್ಕೆ ಎರಡು ಮೂರು ಲವಂಗಗಳನ್ನು ನುಣ್ಣಗೆ ಅರೆದು ಸ್ವಲ್ಪ ನಿಂಬೆ ರಸದೊಡನೆ ಸೇವಿಸಿ.

ಉಪವಾಸ ಮಾಡದಿರಿ
ಉಪವಾಸವನ್ನು ಇವರೆಲ್ಲ ಮಾಡಬಾರದು: ಕ್ಯಾನ್ಸರ್ ರೋಗಿಗಳು, ಮಧುಮೇಹಿಗಳು, ಸಂಧಿವಾತ ಇರುವವರು, ಹೊಟ್ಟೆಯಲ್ಲಿ ಹುಣ್ಣಾಗಿರುವವರು, ಮೂತ್ರಕೋಶ, ಪಿತ್ತಜನಕಾಂಗ, ಶ್ವಾಸಕೋಶದ ತೊಂದರೆ ಇರುವವರು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.