ಮನೆಕೆಲಸ, ಬಟ್ಟೆ, ಪಾತ್ರೆ ಮತ್ತು ವಾಹನ ಚಲಾಯಿಸುವುದು... ಇದರಿಂದ ಕೈಗಳು ತಮ್ಮ ಮೃದುತ್ವವನ್ನು ಕಳೆದುಕೊಳ್ಳುತ್ತವೆ. ಕೈಗಳ ಕೋಮಲತೆಗೆ ಹೀಗೆ ಮಾಡಿ.
* ದಿನವೂ ಮಲಗುವ ಮುನ್ನ ಉಗುರು ಬೆಚ್ಚಗಿನ ಹಾಲಿನಲ್ಲಿ ಮುಂಗೈವರೆಗೂ ಮುಳುಗಿಸಿ ಐದು ನಿಮಿಷದವರೆಗೂ ಹಾಗೇ ಇಡಿ. ಹೀಗೆ ಮಾಡುವುದರಿಂದ ಹಾಲಿನಲ್ಲಿ ಇರುವ ಎಸೆನ್ಷಿಯಲ್ ಏಜೆಂಟ್ಗಳು ಚರ್ಮವನ್ನು ಮೃದುವಾಗಿ ಇಡುವುದು ಮಾತ್ರವಲ್ಲ, ಉಗುರುಗಳ ಬೆಳವಣಿಗೆಗೆ ಸಹಾಯಕಾರಿ.
* ಕೈಗಳನ್ನು ತಣ್ಣೀರಿನಿಂದ ತೊಳೆದು ಒಣಗಿಸಿಕೊಂಡ ನಂತರ ವ್ಯಾಸಲೀನ್ ಹಚ್ಚಿಅಥವಾ ಅರೋಮಾ ಎಣ್ಣೆಗಳನ್ನು ಕೈಗಳಿಗೆ ಹಚ್ಚಿಕೊಳ್ಳಬಹುದು.
* ಹತ್ತಿಯ ಬಟ್ತೆಯಿಂದ ತಯಾರಿಸಲ್ಪಟ್ಟ ಕೈಗವುಸು ಧರಿಸಿ ಮಲಗಿಕೊಳ್ಳಿ.
ಶೀಲಾ ನಟರಾಜ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.