ADVERTISEMENT

ಸ್ವಾಸ್ಥ್ಯ ಸೌಖ್ಯ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 18:30 IST
Last Updated 4 ಫೆಬ್ರುವರಿ 2011, 18:30 IST

 ಬಿ.ಎಸ್. ಮುಳ್ಳೂರ, ಹಲಗತ್ತಿ.
 ವಯಸ್ಸು 67.  ನನಗೆ ಸೆಂಟ್, ಧೂಳು, ಒಗ್ಗರಣೆ ವಾಸನೆ ಮೂಗಿಗೆ ಬಂದ ಕೂಡಲೆ ಕೆಮ್ಮು ಶುರು ಆಗುತ್ತದೆ. ಕೆಲ ಡಾಕ್ಟರಿಗೆ ತೋರಿಸಿದ್ದೇನೆ. ‘ಅಲರ್ಜಿ ಆಗುತ್ತಿದೆ. ಅದಕ್ಕೆ ಏನೂ ಔಷಧಿ ಇಲ್ಲ’ಅನ್ನುತ್ತಾರೆ. ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ನೀಡಿ.
  ಇದಕ್ಕೆ ಒಂದೇ ಔಷಧಿ. ಸೆಂಟ್, ಒಗ್ಗರಣೆ, ಮನೆಯ ಧೂಳಿನಿಂದ ದೂರವಿರಿ. ಮನೆ ಗುಡಿಸುವಾಗ ಮನೆಯಲ್ಲಿ ಇರಬೇಡಿ.

ಎಂ. ಎಸ್. ರಾಜು, ಮಾದಾಪುರ, ಚನ್ನಗಿರಿ ತಾ.
  ನನ್ನ ಮಗ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಅವನಿಗೆ ಆಗಾಗ ಬಾಯಿ ಹುಣ್ಣು ಆಗುತ್ತವೆ. ನಾಲಿಗೆಯ ಮೇಲೆ ಸಹ ಹುಣ್ಣುಗಳಾಗುತ್ತವೆ. ಆ ಸಮಯದಲ್ಲಿ ಅವನ ಬಾಯಿಯಿಂದ ದುರ್ವಾಸನೆ ಬರುತ್ತದೆ. ಈ ಸಮಸ್ಯೆ ಕಳೆದ 5 ವರ್ಷಗಳಿಂದಲೂ ಇದೆ. ಇದಕ್ಕೆ ಪರಿಹಾರವನ್ನು ಸೂಚಿಸಿ.
   ಅವನಿಗೇನೋ ಮನಸ್ಸಿನಲ್ಲಿ ದುಃಖವಿದೆ. ಹಾಗಾಗಿ ಈ ಸಮಸ್ಯೆ. ಅದೇನೆಂದು ದೂರದಲ್ಲಿ ನನಗೆ ಹೇಳಲು ಅಸಾಧ್ಯ. ಮನೋವೈದ್ಯರನ್ನು ಸಂಪರ್ಕಿಸಿ. ಬಾಯಿ ಹುಣ್ಣು ಆದಾಗ ಬಾಯಲ್ಲಿ  ತಾಜಾ ತೆಂಗಿನೆಣ್ಣೆಯನ್ನು ಇಟ್ಟುಕೊಳ್ಳಲಿ. ದುರ್ವಾಸನೆ ಹೋಗುತ್ತದೆ, ಹುಣ್ಣು ಬೇಗನೆ ಮಾಯವಾಗುವುದು.

ಅಬೂಬಕರ್, ವಯಸ್ಸು 45
  ಸುಮಾರು ಒಂದು ವರ್ಷದಿಂದ ನನ್ನ ಮುಖದಲ್ಲಿ ಕಪ್ಪಾದ ಕಲೆಗಳಿವೆ. ತುಂಬಾ ತುರಿಕೆ ಇದೆ. ಮುಖದಲ್ಲಿ ಇದ್ದ ಕಲೆ ಬೆನ್ನಿಗೂ ಬಂದಿದೆ. ಡಾಕ್ಟರ್ ಹತ್ತಿರ ತೋರಿಸಿದ್ದೇನೆ. ಅಲರ್ಜಿ ಎಂದು ಹೇಳಿ ಕ್ರೀಮ್ ಮತ್ತು ಮಾತ್ರೆ ಬರೆದು ಕೊಟ್ಟಿದ್ದಾರೆ. ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ಆದರೂ ಕಡಿಮೆ ಆಗಿಲ್ಲ. ದಯವಿಟ್ಟು ಸಲಹೆ ನೀಡಿ.

  ನಿಮ್ಮನ್ನು ನೋಡದೆ ನಿಮಗೇನು ಕಾಯಿಲೆಯೆಂದು ಹೇಳುವುದು ತಪ್ಪು. ಆದುದರಿಂದ ದಯವಿಟ್ಟು ಉತ್ತಮ ಚರ್ಮ ವೈದ್ಯರಿಂದ ಪರೀಕ್ಷಿಸಿಕೊಳ್ಳಿ.

ADVERTISEMENT

ಶಂಕರ್, ಮೈಸೂರು
 ನಾನು ಮಾನಸಿಕವಾಗಿ ತುಂಬಾ ನೊಂದಿದ್ದೇನೆ. ನಾನು ಯಾವುದಾದರೂ ಒಂದು ವಸ್ತುವನ್ನು  2-3 ಬಾರಿ ಮುಟ್ಟುತ್ತೇನೆ. ಬಟ್ಟೆ ಧರಿಸುವಾಗ ಇದೇ ಅಭ್ಯಾಸ.  ಯಾವಾಗಲೂ ಮನಸ್ಸಿನಲ್ಲಿ ಕೆಟ್ಟ ಯೋಚನೆ ಮಾಡುವಂತಾಗುತ್ತದೆ. ನಾನು ಈ ಹಿಂದೆ 4 ವರ್ಷಗಳ ಕಾಲ ಗುಟ್ಕಾ ತಿನ್ನುತ್ತಿದ್ದೆ. ಈಗ ಬಿಟ್ಟಿದ್ದೇನೆ. ನನಗೆ ಗ್ಯಾಸ್ಟ್ರಿಕ್ ಇದೆ. ಈಗ ನಾನು ಆಯುರ್ವೇದ ಔಷಧಿ ತೆಗೆದು ಕೊಳ್ಳುತ್ತಿದ್ದೇನೆ. ಇದರಿಂದ ಪರಿಹಾರ ಸಿಗುವುದೇ? ಅಥವಾ ಬೇರೆ ಚಿಕಿತ್ಸೆ ಇದೆಯೇ?

  ನಿಮ್ಮ ತೊಂದರೆಗಳಿಗೆ ಎರಡು ರೀತಿಯ ಪರಿಹಾರವಿದೆ. ಒಂದು ಮನೋವಿಜ್ಞಾನಿಗಳಿಂದ ಸೈಕೊ ಥೆರಪಿ ಮಾಡಿಸುವುದು. ಇನ್ನೊಂದು, ಕ್ರಿಯಾ ಯೋಗದಲ್ಲಿ ಉತ್ತಮ ಪರಿಹಾರ ಸಿಗುತ್ತದೆ. ತಿಳಿದವರಿಂದ ಯೋಗ ಪ್ರಾಣಯಾಮಗಳನ್ನು ಕಲಿತು ಜೀವನ ಆನಂದಿಸಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.