ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗದಲ್ಲಿ ಅನಿಶ್ಚಿತತೆ ದೂರಾಗುವುದು..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 3 ಅಕ್ಟೋಬರ್ 2024, 23:30 IST
Last Updated 3 ಅಕ್ಟೋಬರ್ 2024, 23:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಮುಕ್ತ ಮಾತುಕತೆ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಇರುವ ಅವಕಾಶಗಳನ್ನು ಮುಂದುವರಿಸಿಕೊಳ್ಳುವುದು ನಿಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತದೆ. ಆತ್ಮವಂಚನೆ ಮಾಡಿಕೊಳ್ಳಬೇಡಿ.
  • ವೃಷಭ
  • ದುರಾಚಾರ, ದುರ್ಬುದ್ಧಿ ಹೊಂದಿರುವ ಜನರಿಂದ ದೂರವಿರುವ ಬಗ್ಗೆ ಪ್ರಯತ್ನವಿರಲಿ. ಬದುಕನ್ನು ಪಾರಮಾರ್ಥಿಕವಾಗಿ ನಡೆಸುವ ಬಗ್ಗೆ ನಿಮ್ಮ ಯೋಚನೆಗಳಿರಲಿ. ಅನುಭವದಿಂದ ಆತ್ಮಾಭಿಮಾನ ವೃದ್ಧಿಯಾಗಲಿದೆ.
  • ಮಿಥುನ
  • ಬೆಳೆದ ವಸ್ತುಗಳ ಮಾರಾಟದಿಂದ ಆರ್ಥಿಕ ಅನುಕೂಲವಾಗಿ ನಿಮ್ಮ ಮೇಲಿದ್ದ ಸಾಲದ ಹೊರೆಯು ಕಡಿಮೆಯಾಗಲಿದೆ. ಅನಾಥ ಹುಡುಗನೊಬ್ಬನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಯೋಚನೆಯನ್ನು ಮಾಡುವಿರಿ.
  • ಕರ್ಕಾಟಕ
  • ವಿರೋಧಿಗಳು ರಾಜಿಯಾಗಲು ಬರುವಂತಹ ಸನ್ನಿವೇಶಗಳು ನಡೆಯಬಹುದು. ಸಣ್ಣ ಉದ್ಯಮಿಗಳಿಗೆ ಹೆಚ್ಚು ವ್ಯಾಪಾರವಿರುವುದು, ಕೆಲಸಗಾರರ ಸಹಕಾರ ಸಿಗುವುದು. ಪಿತ್ರಾರ್ಜಿತ ಆಸ್ತಿ ಕೈಸೇರಲಿದೆ.
  • ಸಿಂಹ
  • ಆಶ್ಚರ್ಯಕರ ಮತ್ತು ಸಂಭ್ರಮಿಸುವಂತಹ ಘಟನೆ ನಿಮ್ಮ ಬದುಕಲ್ಲಿ ಈ ದಿನ ನಡೆಯುವುದು. ಯಾವುದೇ ಕಠಿಣ ಪರಿಸ್ಥಿತಿಯಲ್ಲಿಯೂ ವಿಚಲಿತಗೊಳ್ಳದೆ ಕೆಲಸವನ್ನು ನೆರವೇರಿಸಿ. ಪತ್ನಿಯ ಆರೋಗ್ಯವು ಸುಧಾರಿಸುವುದು.
  • ಕನ್ಯಾ
  • ನಿಮ್ಮ ಯೋಜನೆಗಳು ಹಾಗೂ ಅವುಗಳ ಬೆಳವಣಿಗೆಗಳ ಬಗ್ಗೆ ಸಂಬಂಧಪಟ್ಟವರಲ್ಲಿ ದಿನವಿಡೀ ಚರ್ಚಿಸಿದರೂ ತೀರ್ಮಾನಕ್ಕೆ ಬರುವುದು ಕಷ್ಟಕರ. ಮನೋಲ್ಲಾಸಕ್ಕಾಗಿ ದೂರದ ಪ್ರಯಾಣದ ಸಾಧ್ಯತೆಗಳು ಹೆಚ್ಚಿರುವುದು.
  • ತುಲಾ
  • ಸಮೀಪವರ್ತಿಗಳ ಸಲಹೆ ಸಹಕಾರದಿಂದ ವ್ಯಾಪಾರ ವಹಿವಾಟುಗಳಲ್ಲಿನ ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿರುವಿರಿ. ಎಲ್ಲರೊಂದಿಗೆ ವಿಷಯ ವಿನಿಮಯದಿಂದ ನಿಮ್ಮ ಎಲ್ಲಾ ಗೊಂದಲಗಳಿಗೆ ಉತ್ತರ ಸಿಗಲಿದೆ.
  • ವೃಶ್ಚಿಕ
  • ಇಂದು ಮೇಲಧಿಕಾರಿಯಿಂದಲೋ, ಗುರು-ಹಿರಿಯರಿಂದಲೋ ಉತ್ತಮವಾದ ಪ್ರಶಂಸೆಯ ಮಾತುಗಳು ಕೇಳಿಬರಲಿದೆ. ಶ್ರೀ ಮಹಾವಿಷ್ಣುವನ್ನು ಸ್ತುತಿಸಿದಲ್ಲಿ ಮನೆಯಲ್ಲಿ ಆರೋಗ್ಯ, ಐಶ್ವರ್ಯಗಳ ವೃದ್ಧಿಯಾಗುವುದು.
  • ಧನು
  • ಸೋದರರೊಡನೆ ಅಥವಾ ದಾಯಾದಿಗಳೊಡನೆ ಇದ್ದ ಕಲಹಗಳು ಈ ದಿನಾಂತ್ಯದಲ್ಲಿ ನಿರ್ಮೂಲವಾಗಲಿದೆ. ನಿಮ್ಮ ಅತಿಯಾದ ಖರ್ಚು ವೆಚ್ಚಗಳು ಈ ದಿನ ತಗ್ಗುವುದು. ಮಕ್ಕಳ ತುಂಟತನದ ಬಗ್ಗೆ ಗಮನವಿರಲಿ.
  • ಮಕರ
  • ನೀವು ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವುದನ್ನು ಜನ ಬಳಕೆ ಮಾಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿರಿ. ಬ್ಯಾಂಕ್ ಅಧಿಕಾರಿಗಳಿಗೆ ಉದ್ಯೋಗದಲ್ಲಿ ಬದಲಾವಣೆಯಾಗುವಂತಹ ಸಂಭವವಿರುವುದು.
  • ಕುಂಭ
  • ಕೊಡುವ ಹಣ ಕೊಡುವ ಬಗ್ಗೆ, ತೆಗೆದುಕೊಳ್ಳುವ ಹಣ ತೆಗೆದುಕೊಳ್ಳುವ ಬಗ್ಗೆ ಲೆಕ್ಕಾಚಾರ ಸರಿಯಾಗಿ ಇಟ್ಟುಕೊಳ್ಳಿರಿ. ಆಲಸ್ಯದಿಂದಾಗಿ ಯಾವುದೇ ಕೆಲಸಗಳನ್ನು ಸಹ ಮುಂದೂಡದೆ ಪೂರ್ಣಗೊಳಿಸಲು ಪ್ರಯತ್ನಿಸಿ.
  • ಮೀನ
  • ನೆರೆಹೊರೆಯವರೊಂದಿಗೆ ಮತ್ತು ಸಹೋದರಿಯರೊಂದಿಗೆ ಸೌಹಾರ್ದದಿಂದ ವರ್ತಿಸಿ. ಬಹಳ ದಿನಗಳಿಂದ ಇದ್ದ ಆಸ್ಪತ್ರೆ ಅಲೆದಾಟಗಳು ಕೊನೆಗೊಳ್ಳುವುದು. ಉದ್ಯೋಗದಲ್ಲಿ ಅನಿಶ್ಚಿತತೆ ದೂರಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.