ದಿನ ಭವಿಷ್ಯ: ಈ ರಾಶಿಯವರು ಸಾಲ ಮರುಪಾವತಿ ಮಾಡುವ ತೀರ್ಮಾನ ಮಾಡಿ
ಮಂಗಳವಾರ, 20 ಮೇ 2025
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ಮೇ 2025, 21:30 IST
Last Updated 19 ಮೇ 2025, 21:30 IST
ದಿನ ಭವಿಷ್ಯ
ಮೇಷ
ಮುಂಜಾನೆ ಏಳುವಾಗಲೇ ಉತ್ಸಾಹಿಗಳಾಗಿರುತ್ತೀರಿ. ರಕ್ಷಣಾ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಆಯ್ಕೆಗೊಳ್ಳುವಿರಿ. ಜಗದ್ಗುರುವಿನ ದರ್ಶನ ಚೈತನ್ಯ ನೀಡುವುದು.
ವೃಷಭ
ಆತ್ಮವಿಶ್ವಾಸ ರೂಢಿಸಿಕೊಂಡು ಪರಿಶ್ರಮದಿಂದ ಪ್ರಗತಿಯ ಹಾದಿಗೆ ಹೋಗಬೇಕು. ವ್ಯಾಪಾರ ನಿಮಿತ್ತ ಭೇಟಿ ಮಾಡುವಿರಿ. ಹಿರಿಯ ಅಧಿಕಾರಿಗಳಿಗೆ ಬೇಡಿಕೆಗಳನ್ನು ಸ್ಪಷ್ಟವಾಗಿ ತಿಳಿಸಿ.
ಮಿಥುನ
ಮಕ್ಕಳ ಹೆಸರಿನಲ್ಲಿ ನಿವೇಶನ ಖರೀದಿಸುವ ಯೋಚನೆಗಳು ಬರಲಿವೆ. ಸರ್ಕಾರಿ ಅಧಿಕಾರಿಗಳು ಬಡ್ತಿ ಪಡೆದುಕೊಳ್ಳುವಿರಿ. ಶ್ರೀ ಸುಬ್ರಹ್ಮಣ್ಯನ ಸೇವೆ ಮಾಡುವುದರಿಂದ ಶುಭವಿರುವುದು.
ಕರ್ಕಾಟಕ
ರಾಜಕೀಯ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಲು ಚಿಂತನೆ ಮಾಡಬೇಕು. ಮಗಳ ಮದುವೆ ಖರ್ಚನ್ನು ಸರಿದೂಗಿಸುವಿರಿ. ಕಾಗದಪತ್ರಗಳ ನಿರ್ವಹಣೆಯಲ್ಲಿ ಎಚ್ಚರವಿರಲಿ. ಹೊಸ ವಸ್ತುಗಳನ್ನು ಕೊಳ್ಳುವ ಯೋಗವಿದೆ.
ಸಿಂಹ
ಪೂರ್ವ ಆಲೋಚನೆಯ ಕೌಟುಂಬಿಕ ಅಭಿವೃದ್ಧಿಯ ಕೆಲಸಗಳು ಮಂದಗತಿಯಲ್ಲಿ ಸಾಗಲಿವೆ. ಗದ್ದೆ ಅಥವಾ ತೋಟದ ಕೆಲಸಗಳಿಗೆ ಮಗನಿಂದ ದೈಹಿಕ ಮತ್ತು ಆರ್ಥಿಕ ಸಹಾಯ ಸಿಗುವುದು. ರುಚಿ ಊಟ ಸವಿಯುವಿರಿ.
ಕನ್ಯಾ
ಸತ್ಯ ಮಾರ್ಗದಿಂದ ಕಾರ್ಯಪ್ರವೃತ್ತರಾದಲ್ಲಿ ಅಭಿವೃದ್ಧಿ ಅನುಭವಕ್ಕೆ ಬರಲಿದೆ. ದಿನದ ಕೆಲಸ ಕಾರ್ಯಗಳಲ್ಲಿ ಬದಲಾವಣೆಗಳು ಇರುವುದಿಲ್ಲ. ಗುಪ್ತಚರ ದಳ ಮಂದಿಗೆ ಕಾರ್ಯಭಾರಗಳು ಹೆಚ್ಚಲಿವೆ.
ತುಲಾ
ಸ್ನೇಹಿತರು ಹಾಗೂ ಹಿತಚಿಂತಕರು ಸಹಾಯಕ್ಕೆ ಎಂದಿಗೂ ಇರುವರೆಂಬ ನಂಬಿಕೆ ಬರುವುದು. ಮಹಾಗಣಪತಿಯ ದರ್ಶನ ಅಥವಾ ಸ್ಮರಣೆಯಿಂದ ದಿನ ಪ್ರಾರಂಭಿಸಿದರೆ ಮನಸ್ಸಿಗೆ ನೆಮ್ಮದಿ.
ವೃಶ್ಚಿಕ
ಕಾರ್ಯರಂಗದಲ್ಲಿ ಮುನ್ನಡೆಗೆ ಸಹೋದ್ಯೋಗಿಗಳ ನಿರ್ಧಾರಗಳಿಂದ ಸಮಸ್ಯೆ ಉಂಟಾಗಬಹುದು. ಸೂಕ್ಷ್ಮವಾಗಿ ಯೋಚಿಸಿ ಸ್ವಂತ ನಿರ್ಧಾರ ತೆಗೆದುಕೊಳ್ಳುವುದರಿಂದ ಕೆಲಸ ಕಾರ್ಯಗಳು ಸಾಗಲಿವೆ.
ಧನು
ಸಾಲ ಮರುಪಾವತಿ ಮಾಡುವ ತೀರ್ಮಾನ ಮಾಡಿ. ಹೊಸ ಮನೆ ನಿರ್ಮಾಣಕ್ಕಾಗಿ ಹೆಚ್ಚಿನ ತಯಾರಿಯನ್ನು ನಡೆಸುವಿರಿ. ಅಧಿಕಾರಿಗಳ ಸಂಪರ್ಕದಿಂದ ಕೆಲಸಗಳಿಗೆ ಪುಷ್ಟಿ ದೊರೆಯಲಿದೆ.
ಮಕರ
ಎಲ್ಲರಿಗೂ ಬೇಕಾಗುವ ವ್ಯಕ್ತಿತ್ವ ನಿಮ್ಮದಾಗಲಿದೆ. ಕುಟುಂಬದ ಹಾಗೂ ಸ್ನೇಹಿತರ ನಡುವಿನ ಸಂಬಂಧಗಳು ಇನ್ನಷ್ಟು ಉತ್ತಮಗೊಳ್ಳುವುದು. ಪತ್ನಿಯ ಆರೋಗ್ಯದಲ್ಲಿ ಸಮಸ್ಯೆ ಎದುರಾಗಬಹುದು.
ಕುಂಭ
ವಂಶಪಾರಂಪರ್ಯವಾಗಿ ಬಂದ ವೃತ್ತಿ ಮತ್ತಷ್ಟು ಏಳಿಗೆ ಕಾಣಲಿದೆ. ಕಷ್ಟ ಕಾಲದಲ್ಲಿ ಹೇಳಿಕೊಂಡಿರುವ ಹರಕೆ ತೀರಿಸುವ ಸಲುವಾಗಿ ಮಂಜುನಾಥ ಸ್ವಾಮಿಯ ದರ್ಶನ ಮಾಡಿ.
ಮೀನ
ಸಮಾಜ ಸೇವೆಯನ್ನು ಹವ್ಯಾಸವನ್ನಾಗಿ ಬೆಳೆಸಿಕೊಂಡಿರುವ ನಿಮಗೆ ಪ್ರಚಾರದ ಜೊತೆಗೆ ರಾಜಕೀಯ ಸೇರಲು ಆಹ್ವಾನ ದೊರೆಯಲಿದೆ. ಅಣ್ಣ ತಮ್ಮಂದಿರ ನಡುವಿನ ಕಲಹಕ್ಕೆ ನ್ಯಾಯ ಹೇಳುವುದು ಸರಿಯಲ್ಲ.