ದಿನ ಭವಿಷ್ಯ: ಈ ರಾಶಿಯವರು ಗೃಹಾಲಂಕಾರ ವಸ್ತುಗಳ ವ್ಯಾಪಾರದಿಂದ ಲಾಭ ಕಾಣುವಿರಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 25 ಮೇ 2025, 23:30 IST
Last Updated 25 ಮೇ 2025, 23:30 IST
ಮೇಷ
ಕಟ್ಟಡ ಕಾರ್ಮಿಕರಿಗೆ ಮತ್ತು ದಿನಕೂಲಿಗಾರರಿಗೆ ಅವಕಾಶಗಳು ಸಿಗಲಿವೆ. ಆಸ್ತಿಗೆ ಸಂಬಂಧಿಸಿದಂತೆ ದಾಯಾದಿಗಳ ತಕರಾರುಗಳು ನಿಧಾನವಾಗಿ ದೂರ ಸರಿದು ಮನಸ್ಸಿಗೆ ನೆಮ್ಮದಿ ಉಂಟಾಗಲಿದೆ.
ವೃಷಭ
ಮುಂದಿನ ಗುರಿಯನ್ನು ನೆನಪಿನಲ್ಲಿಟ್ಟುಕೊಂಡು ಇಂದಿನ ಹೆಜ್ಜೆಯನ್ನು ಇಡುವುದು ಒಳ್ಳೆಯದು. ರೇಷ್ಮೆ ನೇಕಾರರಿಗೆ ತಮ್ಮ ಹೊಸ ನೇಯ್ಗೆ ಹಾಗೂ ಡಿಸೈನ್‌ಗಳಿಂದ ಉತ್ತಮ ಅವಕಾಶಗಳು ಲಭ್ಯವಾಗಲಿವೆ.
ಮಿಥುನ
ಪ್ರವೃತ್ತಿಗೆ ಕೊಡುತ್ತಿರುವ ಗಮನ, ಸಮಯ ಹೆಚ್ಚು ಎಂದು ಅನಿಸಲಿದೆ. ಷೇರುಪೇಟೆಯಲ್ಲಿ ಹಣ ಹೂಡಲು ಸಮಯವಾಗಿದೆ. ನ್ಯಾಯಾಲಯದ ಕಾರ್ಯಗಳಲ್ಲಿ ಮುನ್ನಡೆ ಕಾಣುವಿರಿ.
ಕರ್ಕಾಟಕ
ಕಷ್ಟಗಳನ್ನು ಎದುರಿಸುವ ಉತ್ತಮ ಎದೆಗಾರಿಕೆಯನ್ನು ಹೊಂದಿರುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿಂದ ಸಮಾಧಾನವಾಗುವುದು. ವಿಷ್ಣುಸಹಸ್ರನಾಮದ ಪಠಣೆಯಿಂದ ನೆಮ್ಮದಿ ಇರುವುದು.
ಸಿಂಹ
ಸಮಯವರಿತು ಕಾರ್ಯಸಾಧನೆ ಮಾಡುವುದು ಒಳ್ಳೆಯದು. ಆರಂಭಿಸಿದ ಕೆಲಸ ಕಾರ್ಯಗಳು ವಿಳಂಬಗತಿಯಲ್ಲಿ ಸಾಗಿದರೂ ಪೂರ್ಣಗೊಳ್ಳಲಿವೆ. ಗೃಹಾಲಂಕಾರ ವಸ್ತುಗಳ ವ್ಯಾಪಾರದಿಂದ ಲಾಭ ಕಾಣುವಿರಿ.
ಕನ್ಯಾ
ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಪ್ರಗತಿ ಇದ್ದು, ಮುಂದಿನ ಭವಿಷ್ಯಕ್ಕೆ ಗೋಚರಕ್ಕೆ ಬರುತ್ತವೆ. ದೀರ್ಘಕಾಲದ ಚಿಂತನೆ ಸದ್ಯದಲ್ಲೇ ಕಾರ್ಯರೂಪಕ್ಕೆ ಬಂದೀತು. ಮನರಂಜನೆಗಾಗಿ ಖರ್ಚುವೆಚ್ಚಗಳು ಅಧಿಕವಾಗಲಿದೆ.
ತುಲಾ
ಶಿಸ್ತಿನಿಂದ ಕೆಲಸ ಕಾರ್ಯಗಳನ್ನು ಮಾಡಿ, ಗಮನಿಸುವ ಜನರು ಸುತ್ತಲೂ ಇರುತ್ತಾರೆ. ಸಾಕುಪ್ರಾಣಿಗಳ ಗಮನವಿರಲಿ, ಮುನ್ನೆಚ್ಚರಿಕೆಯಾಗಿ ವೈದ್ಯರಲ್ಲಿ ಒಮ್ಮೆ ಚರ್ಚಿಸಿ. ಮಾತೃವರ್ಗದವರ ಸಮಾಗಮ ಆಗಲಿದೆ.
ವೃಶ್ಚಿಕ
ವೈಯಕ್ತಿಕ ಬದುಕಿನಲ್ಲಿ ಹಿತಕರ ಮಾರ್ಪಾಟುಗಳು ಅನಿವಾರ್ಯವಾಗುವುದು. ಆದಾಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಗುಣಮಟ್ಟವನ್ನು ಕಡಿಮೆ ಮಾಡಿಕೊಳ್ಳಬೇಡಿ. ನವದಂಪತಿಗೆ ಸಂತಾನದ ಶುಭಸುದ್ದಿ ಇರಲಿದೆ.
ಧನು
ಕಾರ್ಯಕ್ಷೇತ್ರದಲ್ಲಿ ಶತ್ರುಗಳು ಹಿನ್ನಡೆ ಅನುಭವಿಸಿ ಮನಸ್ಸಿಗೆ ಸಮಾಧಾನ ದೊರಕಲಿದೆ. ಈ ಮಧ್ಯ ವಿವಿಧ ರೀತಿಯಲ್ಲಿ ಧನಾದಾಯದ ಮಾರ್ಗವು ಗೋಚರಿಸಲಿದೆ. ಮುಂದಿನ ಯೋಜನೆಗಳ ಬಗ್ಗೆ ಕಾರ್ಯಾಚರಣೆ ಪ್ರಾರಂಭಿಸಿ.
ಮಕರ
ಪದವೀಧರರಿಗೆ ತಮ್ಮ ಉದ್ಯೋಗದ ಅನ್ವೇಷಣೆಯಲ್ಲಿ ಹೊಸ ರೀತಿಯ ಬೆಳವಣಿಗೆ ಕಂಡುಬರಲಿದೆ. ದೊಡ್ಡ ಮೊತ್ತದ ಅಥವಾ ಹೆಚ್ಚಿನ ಜವಾಬ್ದಾರಿ ಇರುವ ಯಾವುದೇ ಕೆಲಸವನ್ನು ಒಪ್ಪಿಕೊಳ್ಳಲು ಹಿಂಜರಿಕೆ ಬೇಡ.
ಕುಂಭ
ನೂತನ ಅಧಿಕಾರಿಗಳ ಆಗಮನದಿಂದಾಗಿ ಕಚೇರಿಯಲ್ಲಿ ಕೆಲಸಗಳು ತೋರಿಬರಲಿವೆ. ಲೆಕ್ಕಪತ್ರಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳುವ ಕಾರ್ಯದ ಬಗ್ಗೆ ಯೋಚನೆ ಮಾಡಿ. ನ್ಯಾಯವಾದಿಗಳಿಗೆ ಸುಲಭದಲ್ಲಿ ಜಯ ಲಭಿಸಲಿದೆ.
ಮೀನ
ಕೊಂಚ ಕಿರಿಕಿರಿ ಮೂಡಿಸಿದರೂ ಫಲಿತಾಂಶ ಸಕಾರಾತ್ಮಕವಾಗಿರಲಿದೆ. ಆತುರ ಬೇಡ. ಕೆಲಸದ ಒತ್ತಡ ಹಾಗೂ ಜವಾಬ್ದಾರಿಗಳು ಹೆಚ್ಚಲಿವೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯನ್ನು ಬೆಳೆಸಿಕೊಳ್ಳಿರಿ.