ADVERTISEMENT

ದಿನ ಭವಿಷ್ಯ | ಈ ರಾಶಿಯವರ ವ್ಯವಹಾರಗಳು ಜಯಪ್ರದವಾಗುತ್ತವೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 3 ಜುಲೈ 2025, 22:57 IST
Last Updated 3 ಜುಲೈ 2025, 22:57 IST
   
ಮೇಷ
  • ನಿಕಟ ಸಂಬಂಧಗಳೊಂದಿಗೆ ಬದುಕಿನ ದುರ್ಘಟನೆಯ ವಿಷಯಗಳನ್ನು ಹಂಚಿಕೊಳ್ಳುವುದರಿಂದ ಸಹಾಯ ಹೊಂದುವಿರಿ. ಪ್ರಮುಖ ಹುದ್ದೆಗಳಲ್ಲಿರುವವರಿಗೆ ಒಳ್ಳೆಯ ಸ್ಥಾನ ಮತ್ತು ಪ್ರಶಂಸೆ ದೊರಕುವುದು.
  • ವೃಷಭ
  • ಕಟ್ಟಡದ ಕಂಟ್ರಾಕ್ಟರ್‌ಗಳಿಗೆ ಕೆಲಸಗಾರರ ಕೊರತೆ ಕಾಣಲಿದೆ. ಪರಿಣತ ಕೆಲಸಗಾರರ ಗೈರುಹಾಜರಿಯಿಂದ ನಷ್ಟ ಸಂಭವಿಸುವುದು. ಪರಿಸ್ಥಿತಿಯು ಆತ್ಮಾವಲೋಕನ ನಡೆಸುವಂತಾಗಲಿದೆ.
  • ಮಿಥುನ
  • ಕೆಲಸಗಳನ್ನು ಸಾಧಿಸಿಕೊಳ್ಳಬೇಕಿದ್ದರೆ ಅವಿರತ ಶ್ರಮ ಅಗತ್ಯವಾಗುವುದು. ಗುತ್ತಿಗೆಯನ್ನು ನೀಡುವ ಮೊದಲು ಎಲ್ಲಾ ನಿಯಮಗಳಿಗೆ ಒಪ್ಪಿದ ದಾಖಲೆಪತ್ರಗಳಲ್ಲಿ ಸೂಕ್ತ ಸಹಿ ಪಡೆದುಕೊಳ್ಳಲು ಮರೆಯದಿರಿ.
  • ಕರ್ಕಾಟಕ
  • ಕಾಲು ನೋವು ಅಥವಾ ಬೆನ್ನುನೋವು ಕಾಣಿಸಿದವರಿಗೆ ವೈದ್ಯರ ದರ್ಶನ ಅಗತ್ಯವೆನಿಸಲಿದೆ. ವೃತ್ತಿ ಜೀವನದಲ್ಲಿ ಗೊಂದಲದಿಂದ ಹೊರಬರಬೇಕಾದರೆ ಧೈರ್ಯದಿಂದ ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
  • ಸಿಂಹ
  • ಕೆಲಸದ ಒತ್ತಡದಿಂದ ದೇಹಾಯಾಸ ತೋರಿಬಂದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆಹಾರ ಪದಾರ್ಥಗಳನ್ನು ದಾನ ಮಾಡಿ. ಸ್ಟೇಷನರಿ ಮತ್ತು ಫ್ಯಾನ್ಸಿ ವಸ್ತುಗಳ ಮಾರಾಟವಿರುವುದು.
  • ಕನ್ಯಾ
  • ಕೆಲಸದಲ್ಲಿ ಆತುರದ ಸ್ವಭಾವ ಬೇಡ. ಮಕ್ಕಳಿಗೆ ಓದಿನಲ್ಲಿ ಹೆಚ್ಚು ಆಸಕ್ತಿ ಹುಟ್ಟುವಂತೆ ಮನೆಯ ಪರಿಸರವನ್ನು ನಿರ್ಮಿಸಿ. ಮನೆಯವರ ಆರ್ಥಿಕ ಪರಿಸ್ಥಿತಿ ಕ್ರಮೇಣ ಸುಧಾರಿಸಲಿದೆ. ವ್ಯವಹಾರಗಳು ಜಯಪ್ರದವಾಗುತ್ತವೆ.
  • ತುಲಾ
  • ರಾಜಕಾರಣಿಗಳಿಗೆ ಶುಭ ಸುದ್ದಿ ದೊರೆಯಲಿದೆ. ಸಾಧ್ಯತೆ ಅರಿತು ವ್ಯವಹಾರದಲ್ಲಿ ಮುಂದುವರಿಯಿರಿ. ಸದ್ಯಕ್ಕೆ ವೃತ್ತಿಯ ಬದಲಾವಣೆಯ ಯೋಚನೆ ಸರಿಯಲ್ಲ. ಕೆಲಸಕ್ಕೆ ನಿಯಮಿತ ಸಮಯವಿರುವುದಿಲ್ಲ.
  • ವೃಶ್ಚಿಕ
  • ಕುಟುಂಬದಲ್ಲಿ ಊಹೆಗೂ ನಿಲುಕದಂಥ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಸಹವರ್ತಿಗಳ ಜತೆ ಉತ್ತಮ ಸಂಪರ್ಕ ಬೆಳೆಸಿಕೊಳ್ಳುವುದು ಸಾಧ್ಯವಾಗುವುದು. ಹಣಕಾಸಿನ ವಿವಾದಗಳನ್ನು ಬಗೆಹರಿಸಿಕೊಳ್ಳುವಿರಿ.
  • ಧನು
  • ಸೃಜನಶೀಲತೆ, ಚಿಂತನಾ ಲಹರಿಗಳು ಇತರರಿಗೆ ವಿಭಿನ್ನವೆನಿಸಿದರೂ ಸರಿಯಾಗಿಯೇ ಇರುತ್ತವೆ. ಅದರಲ್ಲಿ ಅನುಮಾನ ಬೇಡ. ಪದವಿ ವಿದ್ಯಾರ್ಥಿಗಳಿಗೆ ಉತ್ತಮ ನೆನಪಿನಶಕ್ತಿ, ಜ್ಞಾನ ದೊರೆತು ಆನಂದವಾಗಲಿದೆ.
  • ಮಕರ
  • ದಾಂಪತ್ಯದಲ್ಲಿ ಸಣ್ಣ ಪುಟ್ಟ ವಿಚಾರಗಳಿಂದ ಮಾನಸಿಕ ಅಸಮಾಧಾನ ಕಾಡಲಿದೆ. ಸಹನಾಶೀಲರಾಗಿ ವರ್ತಿಸಿದಲ್ಲಿ ಯಶಸ್ಸು ಸಿಗುತ್ತದೆ. ಊರಿನ ರಾಜಕಾರಣದ ವಿಷಯಗಳಲ್ಲಿ ಹೆಚ್ಚು ಸಮಯ ಕಳೆಯುವಂತಾಗುವುದು.
  • ಕುಂಭ
  • ದೈವಾನುಗ್ರಹದಿಂದ ಸಕಲ ಅಭೀಷ್ಟವು ಸಿದ್ಧಿಯಾಗಿ ಸಂತೃಪ್ತಿ ಪಡೆಯುತ್ತೀರಿ. ಕೌಟುಂಬಿಕ ಸಮಸ್ಯೆಯು ನೂತನ ಆಯಾಮ ಪಡೆಯಲಿದೆ. ಅತಿ ವಿಶ್ವಾಸದಿಂದ ಮುಂದುವರಿದ ಮುಖಭಂಗವಾಗಬಹುದು.
  • ಮೀನ
  • ಧಾರ್ಮಿಕ ಕೆಲಸದಲ್ಲಿ ಆಸಕ್ತಿ ಹೆಚ್ಚಲಿದೆ.ವೈಯಕ್ತಿಕ ಅಭಿವೃದ್ಧಿಗೂ ಸಾಮಾಜಿಕ ಏಳಿಗೆಗೂ ಅನುಕೂಲ ಆಗಲಿದೆ. ಕುಟುಂಬದವರೊಡನೆ ಸಂತೋಷದಿಂದ ಕಳೆಯುವಂತಾಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.