ADVERTISEMENT

ದಿನ ಭವಿಷ್ಯ: ಈ ರಾಶಿಯವರ ವೃತ್ತಿ ರಂಗದಲ್ಲಿ ಅದೃಷ್ಟದ ಬಾಗಿಲು ತೆರೆಯುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 2 ಏಪ್ರಿಲ್ 2024, 23:32 IST
Last Updated 2 ಏಪ್ರಿಲ್ 2024, 23:32 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ರಕ್ಷಣಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರು ಜಾಗ್ರತರಾಗಿರಿ. ಕಾರ್ಯನಿರ್ವಹಣೆಯಲ್ಲಿ ನಿಮ್ಮಿಂದ ದೋಷಗಳು ಸಂಭವಿಸಬಹುದು. ಮೆಕಾನಿಕಲ್ ವಿದ್ಯಾರ್ಥಿಗಳಿಗೆ ಓದಿನಲ್ಲಿ ಪರಿಶ್ರಮ ಪಡುವುದು ಅಗತ್ಯ .
  • ವೃಷಭ
  • ವ್ಯವಹಾರದಲ್ಲಿ ಸಂಬಂಧಿಗಳನ್ನು ಸೇರಿಸಿಕೊಂಡು ನೂತನ ಘಟಕಗಳನ್ನು ಆರಂಭಿಸಬಹುದು. ಕಾರ್ಯರಂಗದಲ್ಲಿ ಅನುಭವಸ್ಥರ ಸಹಯೋಗದಿಂದಾಗಿ ಪ್ರಗತಿ ನೋಡಬಹುದು.
  • ಮಿಥುನ
  • ಭಾವನಾತ್ಮಕ ಆಲೋಚನೆಗಳನ್ನು ಬದಿಗೆ ಸರಿಸಿ ಭಾವನೆಗಳ ಬದಲು ವಾಸ್ತವದತ್ತ ಗಮನ ಹರಿಸಲು ಇದು ಸೂಕ್ತವಾದ ಸಮಯ. ಬಂಗಾರವನ್ನು ಜಾಗ್ರತೆ ಮಾಡುವುದು ಉತ್ತಮ. ಕೆಲಸಗಳಿಗೆ ಹಣದ ಅಡಚಣೆ ಇರುವುದಿಲ್ಲ.
  • ಕರ್ಕಾಟಕ
  • ಜವಾಬ್ದಾರಿಯನ್ನೂ ಯೋಚಿಸದೇ, ಅವಸರದಲ್ಲಿ ಒಪ್ಪಿಕೊಳ್ಳಬೇಡಿ. ರಾಜಕೀಯ ವ್ಯಕ್ತಿಗಳು ಸಾಮಾಜಿಕ ಕಾರ್ಯಕ್ರಮದಿಂದ ಮತ್ತು ಮಾಧ್ಯಮದಿಂದ ದೂರ ಉಳಿಯುವ ಬಗ್ಗೆ ತೀರ್ಮಾನಿಸುವುದು ಒಳ್ಳೆಯದು.
  • ಸಿಂಹ
  • ಸಾಂಸಾರಿಕ ವಿಷಯದಲ್ಲಿ ಆರಿಸಿಕೊಳ್ಳುವ ನಿರ್ಧಾರಗಳು ಹಿರಿಯರ ಕೋಪಕ್ಕೆ ಕಾರಣವಾಗುತ್ತದೆ. ಕಿರು ಸಂಚಾರವು ಇರುವುದರಿಂದ ಕಾಲಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಲು ಅಡ್ಡಿ ಉಂಟಾಗಬಹುದು.
  • ಕನ್ಯಾ
  • ಪಠ್ಯೇತರ ಕಲಿಕೆ ಅದರಲ್ಲೂ ಚಿತ್ರಕಲೆಯಲ್ಲಿನ ಆಸಕ್ತಿಯಿಂದಾಗಿ ಹೆಚ್ಚಿನ ಕಲಿಕೆಗಾಗಿ ವಿಶೇಷ ತರಗತಿಗೆ ಕಳುಹಿಸಲು ತಂದೆಯವರಿಂದ ಒಪ್ಪಿಗೆ ದೊರೆಯುವುದು. ವಿದ್ಯಾರ್ಥಿನಿಯರಿಗೆ ವಿಶೇಷವಾಗಿ ಪ್ರಗತಿ ಪ್ರಾಪ್ತಿ .
  • ತುಲಾ
  • ಆಗಾಗ ಹಲವಾರು ವಿಚಾರಗಳಲ್ಲಿ ತೊಂದರೆ ಕಂಡುಬಂದರೂ ಆಂಜನೇಯನ ಆರಾಧನೆ ಮಾಡುವುದರಿಂದ ಸಮಸ್ಯೆಗಳು ಪರಿಹಾರವಾಗುವುದು. ಹೊರದೇಶದಲ್ಲಿ ಉದ್ಯೋಗದ ಅನ್ವೇಷಣೆ ಮಾಡುವುದಕ್ಕೆ ಸುದಿನ.
  • ವೃಶ್ಚಿಕ
  • ತಾಂತ್ರಿಕ ವರ್ಗದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಅಧಿಕ ಒತ್ತಡದ ಜತೆಯಲ್ಲಿ ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಸಿಗಬಹುದು. ಆತ್ಮ ವಿಶ್ವಾಸದಿಂದ ಕೆಲಸಕಾರ್ಯಗಳಲ್ಲಿ ಯಶಸ್ಸು ಹೊಂದುವಿರಿ.
  • ಧನು
  • ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಂದರ್ಭವು ಒದಗಿ ಬರಲಿದೆ. ಉದ್ಯೋಗ, ವ್ಯವಹಾರಗಳಲ್ಲಿ ಸಿಂಹಾವಲೋಕನದ ಅಗತ್ಯವಿದೆ. ಗೃಹ ನಿರ್ಮಾಣದ ಯೋಚನೆಯು ಕಾರ್ಯರೂಪಕ್ಕೆ ಬರಲಿದೆ.
  • ಮಕರ
  • ನಿಮ್ಮ ವಿರುದ್ಧವಾಗಿ ರಾಜಕೀಯ ಚಟುವಟಿಕೆಗಳು ಹೆಚ್ಚಾಗುವುದು. ಎದುರಾಗುವ ಸ್ಪರ್ಧೆಯಲ್ಲಿ ಪ್ರಮುಖ ಸ್ಥಾನ ಪಡೆಯಲು ತಯಾರಿ ನಡೆಸುವಿರಿ. ಮಕ್ಕಳ ಕೆಲಸಗಳ ಬಗ್ಗೆ ಪ್ರಶಂಸೆಯ ಮಾತು ಕೇಳಿ ಆನಂದವಾಗುತ್ತದೆ.
  • ಕುಂಭ
  • ಕುಟುಂಬದ ಮಾರ್ಗಸೂಚಕರ ಮಾರ್ಗಸೂಚಿಯಂತೆ ಕಳೆದು ಹೋಗಿದ್ದ ವಸ್ತುಗಳೂ ಪತ್ತೆಯಾಗುವುವು. ನಿಮ್ಮ ನಿಷ್ಠೂರ ಮಾತುಗಾರಿಕೆಯಿಂದಾಗಿ ಸಹೋದರರ ನಡುವೆ ಕಲಹ ಉಂಟಾಗಬಹುದು.
  • ಮೀನ
  • ದೀರ್ಘಕಾಲದಿಂದಿರುವ ಆರೋಗ್ಯ ಸಮಸ್ಯೆಗೆ ಸೂಕ್ತ ವೈದ್ಯರಿಂದ ಸಲಹೆ ಸಿಗಲಿದೆ. ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣುವಿರಿ. ವೃತ್ತಿ ರಂಗದಲ್ಲಿ ನಿಮಗಾಗಿ ಅದೃಷ್ಟದ ಬಾಗಿಲು ತೆರೆಯುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.