ADVERTISEMENT

ದಿನ ಭವಿಷ್ಯ: ಉದ್ಯೋಗ ತ್ಯಜಿಸಿ ಹಳ್ಳಿಯ ಬದುಕಿಗೆ ಹಿಂದಿರುಗುವ ಯೋಚನೆ ಬರುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 3 ಮೇ 2025, 23:59 IST
Last Updated 3 ಮೇ 2025, 23:59 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಉದ್ಯೋಗ ತ್ಯಜಿಸಿ ಹಳ್ಳಿಯ ಬದುಕಿಗೆ ಹಿಂದಿರುಗಲು ಅಥವಾ ಹುಟ್ಟಿದ ಊರಿನಲ್ಲಿ ಕೃಷಿ ಮಾಡಲು ಯೋಚನೆ ಬರುವುದು. ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ದುಡುಕಬೇಡಿ. ಸ್ನೇಹಿತರಲ್ಲಿ ವಿಶ್ವಾಸ ವೃದ್ಧಿಯಾಗುವುದು.
  • ವೃಷಭ
  • ರಕ್ಷಣಾ ವ್ಯವಸ್ಥೆಯವರಿಗೆ ವೃತ್ತಿಯಲ್ಲಿ ರಾತ್ರಿ ಪಾಳಿ ತಪ್ಪಿದ ಕಾರಣದಿಂದಾಗಿ ಮನಸ್ಸಿಗೆ ಸಮಾಧಾನ ಆಗುವುದು. ಸಮಾರಂಭಗಳಿಗಾಗಿ ಹೊಸ ಬಟ್ಟೆ ತರುವಂತೆ ಮನೆಯವರಿಂದ ಹೆಚ್ಚಿನ ಒತ್ತಾಯ ಬರಲಿದೆ.
  • ಮಿಥುನ
  • ರೇಷ್ಮೆ ವ್ಯಾಪಾರಿಗಳಿಗೆ ಸಗಟು ಮಾರಾಟದಿಂದ ಅಧಿಕ ಲಾಭ ದೊರೆಯುವುದು. ದನ ಕರುಗಳ ಅಥವಾ ಮನೆಯಲ್ಲಿ ಸಾಕಿರುವ ಪ್ರಾಣಿಗಳ ಆರೋಗ್ಯ ತಪಾಸಣೆ ಮಾಡಿಸಬೇಕಾಗುವುದು. ವೃಥಾ ಅಲೆದಾಟಗಳು ತಪ್ಪಲಿವೆ.
  • ಕರ್ಕಾಟಕ
  • ಇಂದು ಯಾವುದೇ ವ್ಯಕ್ತಿಗಳಿಂದ ಪ್ರಚೋದನೆಗೆ ಒಳಗಾಗದಿರಿ. ಶರೀರದಲ್ಲಿ ಉಲ್ಲಾಸ ಹಾಗೂ ಕಾರ್ಯಪ್ರವೃತ್ತಿಯನ್ನು ಹೊಂದುತ್ತೀರಿ. ನಿಮ್ಮ ಅಭಿವೃದ್ಧಿ ಹೆಜ್ಜೆಗಳು ನಿಮ್ಮ ಸುತ್ತಮುತ್ತಲಿನ ಜನರ ಕಣ್ಣನ್ನು ಕೆಂಪಾಗಿಸುತ್ತದೆ.
  • ಸಿಂಹ
  • ಕಮಿಷನ್ ಏಜೆಂಟ್‌ಗಳಿಗೆ ಅದರಲ್ಲೂ ವಿಶೇಷವಾಗಿ ಭೂ ವ್ಯವಹಾರ ನೆಡೆಸುವವರಿಗೆ ಅಧಿಕ ಆದಾಯವಿದೆ. ಮನೆಯಲ್ಲಿ ಹಿತಕರ ವಾತಾವರಣ ಇರುತ್ತದೆ. ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿದರೆ ಉತ್ತಮ.
  • ಕನ್ಯಾ
  • ಎಲ್ಲವನ್ನು ಮಾಡಬಲ್ಲೆನೆಂಬ ಹುಮ್ಮಸ್ಸು ನಿಮ್ಮಲ್ಲಿ ಬಂದಿದೆ. ಇದರಿಂದ ಸುಲಭವಾಗಿ ಕೆಲಸ ಪೂರೈಸುವಿರಿ. ನಿಮ್ಮ ಮುಂದಿನ ಮಾರ್ಗವನ್ನು ತಂದೆಯವರಲ್ಲಿ ಚರ್ಚಿಸಿ, ತಂದೆಯ ಅಭಿಪ್ರಾಯಗಳಿಗೆ ಬೆಲೆ ಕೊಡಿ.
  • ತುಲಾ
  • ನಾನಾ ವಿಧದ ಆದಾಯ ಉಂಟಾಗುವುದರಿಂದ ಆರ್ಥಿಕ ತಳಪಾಯ ಭದ್ರವಾಗುತ್ತದೆ. ವಿದ್ಯಾರ್ಥಿಗಳ ಮನಸ್ಥಿತಿ ವಿದ್ಯಾಭ್ಯಾಸದಿಂದ ದೂರಾಗುವ ಸಾಧ್ಯತೆಗಳಿದೆ. ಆಸೆ-ಆಕಾಂಕ್ಷೆಗಳು ಈ ದಿನ ದೇವತಾನುಗ್ರದಿಂದ ಈಡೇರಲಿದೆ.
  • ವೃಶ್ಚಿಕ
  • ಅಕ್ಕ-ತಂಗಿಗಾಗಿ ಹಣ, ಸಮಯವನ್ನು ಖರ್ಚು ಮಾಡಬೇಕಾದ ಸಂದರ್ಭ ಬರುವುದು. ಮಕ್ಕಳಿಗೆ ಜೀವನದ ಪಾಠ ಹೇಳುವಿರಿ. ಅನೇಕ ಅವಕಾಶಗಳು ನಿಮಗೆ ಎದುರಾಗುವುದರಿಂದ ಗೊಂದಲಕ್ಕೆ ಈಡಾಗುವಿರಿ.
  • ಧನು
  • ಆರೋಗ್ಯಕ್ಕಾಗಿ ಆಸ್ಪತ್ರೆಯ ಅಲೆದಾಟ ಅನಿವಾರ್ಯವಾಗುವುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಸಾಮರ್ಥ್ಯ, ಜನಬಲ ಹೆಚ್ಚಲಿದೆ. ಆಂಜನೇಯನ ಸೇವೆಯಿಂದ ಗೊಂದಲ ನಿವಾರಣೆಯಾಗುತ್ತದೆ.
  • ಮಕರ
  • ವೃತ್ತಿಯಲ್ಲಿ ಅನುಭವಿಗಳಿಂದ ಬೈಗುಳ ಕೇಳಬೇಕಾಗುವುದು. ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಅಧ್ಯಯನ ಅಗತ್ಯ. ಮಹಿಳೆಯರು ಋಣಾತ್ಮಕ ಚಿಂತನೆ ಮಾಡುವುದರಿಂದಾಗಿ ಆರೋಗ್ಯ ಹಾಳಾಗುವ ಲಕ್ಷಣವಿದೆ.
  • ಕುಂಭ
  • ಇನ್ನೊಬ್ಬರಿಗೆ ಮಾದರಿಯಾಗುವಂತೆ ಕೆಲಸಗಳಲ್ಲಿ ದಕ್ಷತೆಯನ್ನು ರೂಢಿಸಿಕೊಳ್ಳಿ. ಕೃಷಿ ಮತ್ತು ಹೈನುಗಾರಿಕೆಯಲ್ಲಿ ಹೊಸ ಪ್ರಯತ್ನ ನೆಡೆಸಿದರೆ ಉತ್ತಮ ಫಲ ಸಿಗುವುದು. ಮಗಳಿಂದ ಶುಭ ಸುದ್ದಿಯೊಂದನ್ನು ತಿಳಿಯುವಿರಿ.
  • ಮೀನ
  • ಮಾನಸಿಕ ಶಕ್ತಿ ಬಲಯುತವಾಗಿ ಇಂದು ನಿಮ್ಮ ಯೋಚನೆಗಳನ್ನು ಶೀಘ್ರವೇ ಕಾರ್ಯರೂಪಕ್ಕೆ ಬರಲಿವೆ. ಮಗನ ವಿವಾಹ ಸಿದ್ಧತೆಗಳು ಭರದಿಂದ ಸಾಗಲಿದೆ. ಭೂಮಿ ಖರೀದಿ ಮುಂದಕ್ಕೆ ಹಾಕುವ ಪರಿಸ್ಥಿತಿ ಬರಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.