ADVERTISEMENT

ದಿನ ಭವಿಷ್ಯ: ಹಣಕಾಸಿನ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆಯಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 26 ಜೂನ್ 2025, 0:32 IST
Last Updated 26 ಜೂನ್ 2025, 0:32 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕುಟುಂಬದಲ್ಲಿ ನಿಮ್ಮ ನಿಲುವುಗಳೇನು ಎಂಬುದನ್ನು ಸ್ಪಷ್ಟಪಡಿಸಬೇಕಾಗುವುದು. ಬದುಕಿನಲ್ಲಿ ನೆಲೆ ನಿಂತ ನೆಮ್ಮದಿ ಸಿಗಲಿದೆ. ಹಿರಿಯರಿಂದ ತಿಳಿದುಕೊಂಡಿದ್ದ ಕೆಲ ವಿಷಯಗಳು ಉಪಯೋಗಕ್ಕೆ ಬರಲಿವೆ.
  • ವೃಷಭ
  • ಸಂಘ ಸಂಸ್ಥೆಯಂಥ ಕಡೆಯಿಂದ ಹಣಕಾಸಿನ ಸಲಹೆಗಾರರಾಗಿ ಆಹ್ವಾನ ಬರುವ ಲಕ್ಷಣಗಳಿವೆ. ಆತ್ಮೀಯರೊಂದಿಗೆ ಭಾವನೆ ಹಂಚಿಕೊಳ್ಳುವಿರಿ. ರೇಷ್ಮೆ ವಸ್ತ್ರಗಳ ಉತ್ಪಾದನಾ ಕೆಲಸಗಳು ಚುರುಕುಗತಿಯಿಂದ ಸಾಗಲಿವೆ.
  • ಮಿಥುನ
  • ಪಾಲುದಾರಿಕೆ ವಿಷಯದಲ್ಲಿ ಸಹೋದರರೇ ಶತ್ರುಗಳಾಗುವ ಸಂಭವವಿದೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರು ತಪ್ಪು ದಾರಿಯಲ್ಲಿ ಸಂಚರಿಸಿ ಗೌರವ ಕಳೆದುಕೊಳ್ಳಬೇಡಿ.
  • ಕರ್ಕಾಟಕ
  • ಬರಲಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ವಿಚಾರದಲ್ಲಿ ವಿಫಲರಾಗುವಿರಿ. ರಕ್ತದೊತ್ತಡ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಬ್ಯಾಂಕ್ ನೌಕರರಿಗೆ ಒತ್ತಡ ಕಡಿಮೆಯಾಗಿ ನೆಮ್ಮದಿ ಸಿಗುವುದು.
  • ಸಿಂಹ
  • ಆರೋಪಗಳು ನಿರಾಧಾರ ಎಂದು ಸಾಬೀತುಗೊಂಡು ಮನಸ್ಸಿಗೆ ನೆಮ್ಮದಿ ಉಂಟಾಗುವುದು. ನಿಮ್ಮಂತೆಯೇ ಇತರರೂ ಸಂತೋಷವಾಗಿರಬೇಕೆಂಬ ನಿಮ್ಮ ಮನೋಭಾವದಿಂದಾಗಿ ಗೌರವ ಪಡೆದುಕೊಳ್ಳುವಿರಿ.
  • ಕನ್ಯಾ
  • ಮನೆಯಲ್ಲಿನ ಆಗು–ಹೋಗುಗಳ ಬಗೆಗೆ ಗಮನ ನೀಡಬೇಕಾಗುವುದು. ಆಫೀಸಿನಲ್ಲಿ ಉಂಟಾಗಿದ್ದ ಸಮಸ್ಯೆಗಳ ಒತ್ತಡ ಮನೆಯ ಸದಸ್ಯರ ಮೇಲೆ ತೀರಿಸುವುದು ಸರಿಯಲ್ಲ. ಅಸಮಾಧಾನದ ವಾತಾವರಣವಿರುವುದು.
  • ತುಲಾ
  • ಆರ್ಥಿಕವಾಗಿ ದೃಢ ನಿರ್ಧಾರವನ್ನು ಕೈಗೊಂಡ ಫಲದಿಂದಾಗಿ ಒಳ್ಳೆಯ ಫಲಿತಾಂಶ ಪಡೆಯುವಿರಿ. ವ್ಯವಹಾರಕ್ಕೆ ಅನುಕೂಲವಾಗುವಂತೆ ಹೊಸಜನರ ಪರಿಚಯವಾಗಲಿದೆ. ಅನಿವಾರ್ಯದ ಪ್ರಯಾಣವನ್ನು ಮಾತ್ರ ಕೈಗೊಳ್ಳಿ.
  • ವೃಶ್ಚಿಕ
  • ಸೃಜನಶೀಲ ಯೋಜನೆಯನ್ನು ಮುಂದುವರಿಸಲು ಶುಭದಿನ. ಆಶಾದಾಯಕ ಬೆಳವಣಿಗೆಯು ಗೋಚರಕ್ಕೆ ಬರಲಿದೆ. ಯಾವ ಕೆಲಸದಲ್ಲೂ ಅಡೆತಡೆಗಳೇನೂ ಇರದು. ಗೃಹ ಸಾಮಗ್ರಿ ಖರೀದಿಯಿಂದ ಖರ್ಚು ಬರಲಿದೆ.
  • ಧನು
  • ವೃತ್ತಿಯಲ್ಲಿ ಉನ್ನತಿ ತೋರಿಬಂದರೂ ವಿಘ್ನ ಭೀತಿ ಇರುತ್ತದೆ. ಯೋಜನೆಗಳು ಹಾಗೂ ಅವುಗಳ ಬೆಳವಣಿಗೆಗಳ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚಿಸಿ ನಂತರದಲ್ಲಿ ತೀರ್ಮಾನಿಸಿ. ದಿನಸಿ ವರ್ತಕರಿಗೆ ಲಾಭದಾಯಕ ದಿನ.
  • ಮಕರ
  • ಪತ್ರಿಕೆಯವರ ಸಹಕಾರದಿಂದ ಪ್ರಚಾರವನ್ನು ಪಡೆದುಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳು ಪ್ರತಿಪಕ್ಷಗಳ ಆಪಾದನೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆಯನ್ನು ಕೊಡುವುದರಿಂದ ಹೆಸರುವಾಸಿಯಾಗುವ ಸಂಭವವಿದೆ.
  • ಕುಂಭ
  • ಅಸೂಯೆ ಪಡುವ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ಸಂಘ ಸಂಸ್ಥೆಗಳ ದೊಡ್ಡ ಸ್ಥಾನವನ್ನು ಅಲಂಕರಿಸಲು ಗಣ್ಯರು ಒತ್ತಾಯಿಸುವರು.
  • ಮೀನ
  • ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲಕರ ದಿನ. ಹಣಕಾಸಿನ ವಿಷಯದಲ್ಲಿ ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆ. ಸುಗಂಧ ವಸ್ತುಗಳ ಮಾರಾಟದಲ್ಲಿ ಹೆಚ್ಚಳ ಇರುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.