ADVERTISEMENT

ದಿನ ಭವಿಷ್ಯ: ಆ. 29– ಈ ರಾಶಿಯವರ ಸದ್ಯದ ಸಮಸ್ಯೆಗಳು ಪರಿಹಾರ ಕಾಣಲಿವೆ.

ಪ್ರಜಾವಾಣಿ ವಿಶೇಷ
Published 28 ಆಗಸ್ಟ್ 2023, 22:38 IST
Last Updated 28 ಆಗಸ್ಟ್ 2023, 22:38 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಹೆಂಡತಿ ಮಕ್ಕಳ ಕನಸನ್ನು ನನಸು ಮಾಡುವ ಕಾರ್ಯದ ಕಡೆ  ಹೆಚ್ಚಿನ ಗಮನವಿರುವುದು. ಸೋಮಾರಿತನ ಇಲ್ಲದೆ ದುಡಿಯಿರಿ, ಆದರೆ ಸಂಪಾದನೆಯಮಾರ್ಗ ದೇವರು ಮೆಚ್ಚುವ ರೀತಿಯಲ್ಲಿ ಸತ್ಯವಾಗಿದ್ದಾಗಿರಲಿ.
  • ವೃಷಭ
  • ಹೊಸತನ್ನು ಸಾಧಿಸುವಂಥ ಪ್ರಚೋದನೆ ಮತ್ತು ವಿಭಿನ್ನ ವಿಷಯಗಳು ನಿಮ್ಮ ಗಮನ ಸೆಳೆಯಲಿವೆ. ನೀರಿನ ಹತ್ತಿರದಲ್ಲಿ ಅಥವಾ ನೀರಿಗೆ ಸಂಬಂಧಿಸಿದ ಕೆಲಸ ನಡೆಸುವವರಿಗೆ ವೃತ್ತಿಯಲ್ಲಿ ಭೀತಿ  ಎದುರಾಗಬಹುದು.
  • ಮಿಥುನ
  • ಇಂದು ಕಾರ್ಯ ಸಾಧನೆಗೆ ತೋರಿ ಬರುವ ಅಡ್ಡಿ ಆತಂಕಗಳ ನಿವಾರಣೆಯಾಗಲಿದೆ. ತಂದೆ ಹೇಳುವ ವಿಚಾರಗಳನ್ನು ಸಂಪೂರ್ಣ ಕೇಳಿಸಿಕೊಳ್ಳದೇ ಅಪಾರ್ಥವಾಗಿ ಅರ್ಥೈಸಿಕೊಳ್ಳುವುದರಿಂದ ಘರ್ಷಣೆಗಳಾಗಬಹುದು.
  • ಕರ್ಕಾಟಕ
  • ಕಣ್ಣಿನ ದೃಷ್ಟಿಗೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಶಸ್ತ್ರಚಿಕಿತ್ಸೆಯನ್ನು ತಪ್ಪಿಸಲಿದೆ. ಅತಿಯಾದ ಆಲಸ್ಯತನ ಈ ದಿನ ನಿಮ್ಮ ಸರ್ವತೋಮುಖ ಏಳಿಗೆಗೆ ಹಾನಿ  ಉಂಟುಮಾಡಲಿದೆ.
  • ಸಿಂಹ
  • ದೇವತಾನುಗ್ರದ ಜೊತೆಯಲ್ಲಿ ಹಲವು ದಿನಗಳಿಂದ ಇರುವ ಋಣಭಾದೆಗೆ ಅಂತ್ಯ ಕಾಣಿಸುವ ಕಾಲ ಒದಗಿಬರುವುದು. ನಿಮ್ಮ ನೇರ ನಡೆ-ನುಡಿ ಗೆಳೆತನಕ್ಕೆ ಹುಳಿ ಹಿಂಡಿದಂತಾಗಬಹುದು.
  • ಕನ್ಯಾ
  • ಸಂಸಾರದಲ್ಲಿ ಕೆಲವು ಬದಲಾವಣೆಗಳನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ ಬರುವುದು. ಕಾರ್ಯದಲ್ಲಿ ಕ್ರೀಯಾಶೀಲರಾಗಿ ಮತ್ತು ಮೇಲಧಿಕಾರಿಗಳಲ್ಲಿ  ನಡೆನುಡಿ ಉತ್ತಮವಾಗಿದ್ದರೆ ಪ್ರತಿಫಲ ಆಕರ್ಷಕವಾಗಿರುವುದು.
  • ತುಲಾ
  • ಸಣ್ಣ ಪುಟ್ಟ ಸಮಸ್ಯೆಯನ್ನು ಹೊರತುಪಡಿಸಿ ಆರೋಗ್ಯ, ಮಾನಸಿಕ ನೆಮ್ಮದಿ ಉತ್ತಮವಾಗಿರುತ್ತದೆ. ಅಧಿಕ ರೀತಿಯ ಖರ್ಚು-ವೆಚ್ಚ ಬಂದರೂ ಉಳಿ ತಾಯಕ್ಕೆ ಕೊರತೆ ಕಾಣುವುದಿಲ್ಲ. ವ್ಯಾಸಂಗಕ್ಕಾಗಿ ಹಣದ ವ್ಯವಸ್ಥೆ ಆಗುವುದು.
  • ವೃಶ್ಚಿಕ
  • ವೃತ್ತಿರಂಗದಲ್ಲಿ ಸಂದರ್ಭೋಚಿತವಾಗಿ ವರ್ತಿಸುವುದರಿಂದ ಈ ದಿನ ಲಾಭವಾಗಬಹುದು ಆದರೆ, ಈ ದಿನದ ನಿಮ್ಮ ವರ್ತನೆ ನಾಳೆಯ ದಿನ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ತಿಂಡಿ ತಿನಿಸುಗಳ ವ್ಯಾಪಾರದವರಿಗೆ ಲಾಭ.
  • ಧನು
  • ನಿರ್ಲಿಪ್ತತೆಯಿಂದಾಗಿ ಸದ್ಯದ ಸಮಸ್ಯೆಗಳು ಪರಿಹಾರ ಕಾಣಲಿವೆ. ಸಾಫ್ಟ್‌ವೇರ್‌ ಉದ್ಯೋಗಿಗಳಿಗೆ ಹೆಚ್ಚಿನ ಅವಕಾಶಗಳು ಲಭಿಸುವುವು. ನಿಮ್ಮ ಕಾರ್ಯರಂಗದಲ್ಲಿ ಹೊಸತನಕ್ಕೆ ಯೋಜನೆ ರೂಪಿಸಬಹುದು.
  • ಮಕರ
  • ಕೆಲವು ಮಾನಸಿಕ ತೊಂದರೆಗಳು ಎದುರಾಗಬಹುದು, ಯಾವುದೇ ರೀತಿಯ ದೊಡ್ಡ ಸಮಸ್ಯೆ ಉಂಟಾಗುವ ಪರಿಸ್ಥಿತಿ ಕಂಡುಬರುವುದಿಲ್ಲ. ಇಂದಿನಿಂದ ಯಾವುದಕ್ಕೂ ಮತ್ತೊಬ್ಬರ ಅವಲಂಬನೆ ಬೇಡವೆನಿಸುವುದು.
  • ಕುಂಭ
  • ಮಕ್ಕಳ ಜೊತೆ ಸಂತೋಷದಿಂದ ಸಮಯ ಕಳೆಯುವ ದಿಕ್ಕಿನಲ್ಲಿ ಕೆಲ ನಿರ್ಧಾರಗಳನ್ನು ಕೈಗೊಳ್ಳುವಿರಿ. ಕಾರ್ಯಕ್ಷೇತ್ರದಲ್ಲಿ ಸ್ವಯಂ ಪರೀಕ್ಷೆಯಆರಂಭ ಹಾಗಾಗಿಯೇ ಎರಡೆರಡು ಬಾರಿ ಪರಿಶೀಲನೆ ಮಾಡುವುದು ಅಗತ್ಯ.
  • ಮೀನ
  • ಕಠಿಣ ಪರಿಸ್ಥಿತಿಯಲ್ಲಿಯೂ ವಿಚಲಿತಗೊಳ್ಳದೆ ಕೆಲಸ  ನೆರವೇರಿಸಿ. ಬದುಕನ್ನು ಪಾರಮಾರ್ಥಿಕವಾಗಿ ನಡೆಸುವ ಬಗ್ಗೆ ನಿಮ್ಮ ಯೋಚನೆಗಳಿರಲಿ ಶ್ರೀಮಂಜುನಾಥನ ದರ್ಶನ, ಸೇವೆಯು ಭಾಗ್ಯ ಉಂಟುಮಾಡಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.