ದಿನ ಭವಿಷ್ಯ: ಈ ರಾಶಿಯವರು ಮಡದಿಯಲ್ಲಿ ಅನಗತ್ಯ ಭಿನ್ನಾಭಿಪ್ರಾಯ ಮೂಡದಂತೆ ಗಮನವಹಿಸಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 15 ಮಾರ್ಚ್ 2024, 23:53 IST
Last Updated 15 ಮಾರ್ಚ್ 2024, 23:53 IST
ಮೇಷ
ತರಬೇತಿ ಕಲಿಕೆಯಿಂದ ಆಫೀಸಿನ ಕೆಲಸಗಳನ್ನು ತಿಳಿದುಕೊಳ್ಳುವ ಅವಕಾಶ ಸಿಗುತ್ತದೆ. ಸರ್ಕಾರಿ ಸಂಸ್ಥೆಗಳಲ್ಲಿ ಉಪನ್ಯಾಸ ಕೈಗೊಳ್ಳುವ ಅವಕಾಶ ಇದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ನಿವಾರಣೆಯಾಗಲಿವೆ .
ವೃಷಭ
ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಸಂಪಾದನೆ ಮಾಡುವ ಅಪೇಕ್ಷಿಗಳಿಗೆ ಹಲವು ಉತ್ತಮ ಅವಕಾಶಗಳು ಎದುರಾಗುವುದು. ರಿಯಲ್ ಎಸ್ಟೇಟ್‌ದಾರರಿಗೆ ಧನಲಾಭದಿಂದ ವ್ಯವಹಾರಗಳು ವೃದ್ಧಿಗೊಳ್ಳಲಿದೆ.
ಮಿಥುನ
ಗುರಿಯನ್ನು ತಲುಪುವಲ್ಲಿ ನಿಮ್ಮ ಪರಿಶ್ರಮದ ಕೊರತೆ ಮತ್ತು ಅದೃಷ್ಟಹೀನತೆ ಸಮಬಲ ಸಾಧಿಸುವುದು. ನೀವು ತೆಗೆದುಕೊಳ್ಳುವ ಒಳ್ಳೆಯ ನಿರ್ಧಾರಗಳಿಂದ ಸಹೋದ್ಯೋಗಿಗಳು ಸಂತಸ ಹೊಂದುವರು.
ಕರ್ಕಾಟಕ
ಶತ್ರುಗಳೊಂದಿಗೆ ಇರುವ ಕಲಹ ಅಥವಾ ವಿವಾದದಿಂದ ಬಿಡುಗಡೆಯಾಗುವ ಮಾರ್ಗವನ್ನು ಹುಡುಕಿಕೊಳ್ಳಿರಿ. ಆರ್ಥಿಕ ವಿಚಾರದಲ್ಲಿ ಧನಾಗಮನದಿಂದ ಕಾರ್ಯಾನುಕೂಲಕ್ಕೆ ಹೆಚ್ಚಿನ ಬಲ ಸಿಗುವುದು.
ಸಿಂಹ
ಯಾವುದೇ ಅಡಚಣೆಗಳು ಇಲ್ಲದೆ, ಅಪಾರವಾದ ಜನಬಲ ದೊರೆತು ದೊಡ್ಡ ಕಾರ್ಯಗಳನ್ನು ಸಾಧಿಸುವಿರಿ. ಹೊಸ ವ್ಯವಹಾರದಲ್ಲಿ ಸ್ನೇಹಿತರ ಸಹಕಾರ ದೊರೆಯಲಿದೆ. ರಾಜಕೀಯ ವ್ಯಕ್ತಿಗಳಿಗೆ ಬಿಡುವಿಲ್ಲದ ಓಡಾಟ.
ಕನ್ಯಾ
ಪ್ರಭಾವಶಾಲಿ ವ್ಯಕ್ತಿಯೊಂದಿಗಿನ ಭೇಟಿಯನ್ನು ತಳ್ಳಿ ಹಾಕದೆ ಅವರಿಂದ ವೃತ್ತಿ ಕ್ಷೇತ್ರಕ್ಕೆ ಲಾಭ ಉಂಟಾಗುವಂತೆ ನೋಡಿಕೊಳ್ಳುವ ಪ್ರಯತ್ನಮಾಡಿ. ಧಾರ್ಮಿಕ ವ್ಯಕ್ತಿಗಳನ್ನು ಭೇಟಿ ಮಾಡುವಿರಿ, ಸಂತಸ ಉಂಟಾಗಲಿದೆ.
ತುಲಾ
ರಬ್ಬರ್, ಪ್ಲಾಸ್ಟಿಕ್ ಸಂಬಂಧಿತ ವ್ಯಾಪಾರದಲ್ಲಿರುವವರು ವೃತ್ತಿಯಲ್ಲಿ ಹೆಚ್ಚಿನ ಏರಿಳಿತಗಳೆರಡೂ ಕಂಡುಬಂದರೂ ನೆಮ್ಮದಿಗೆ ಕೊರತೆ ಇರುವುದಿಲ್ಲ. ಉದಯೋನ್ಮುಖ ತಾರೆಯರಿಗೆ ಹೆಚ್ಚಿನ ಅವಕಾಶಗಳಿಂದ ಲಾಭವಿದೆ.
ವೃಶ್ಚಿಕ
ಯೋಚಿಸುವ ಪ್ರತಿಯೊಂದು ಕೆಲಸ-ಕಾರ್ಯಗಳು ವಿಳಂಬ ರೀತಿಯಲ್ಲಿ ನಡೆಯುವುದು ನಿಮ್ಮ ಉತ್ಸಾಹಕ್ಕೆ ಅಡ್ಡಿಯನ್ನು ಉಂಟುಮಾಡುತ್ತದೆ. ಕಾನೂನಿಗೆ ವಿರುದ್ಧವಾದ ಕೆಲಸ ಸಂಭವಿಸಬಹುದು.
ಧನು
ಗುತ್ತಿಗೆ ವ್ಯವಹಾರಗಳನ್ನು ಒಪ್ಪಿಕೊಳ್ಳುವ ಮೊದಲು ನಿಮ್ಮಲ್ಲಿರುವ ಜನಸಂಪತ್ತಿನ ಬಗ್ಗೆ ಯೋಚಿಸುವುದು ಅಗತ್ಯವೆನಿಸಲಿದೆ. ತತ್ವಜ್ಞಾನಿಗಳೊಡನೆ ಸುದೀರ್ಘ ಚರ್ಚೆ ನಡೆದು ಬುದ್ಧಿಮಟ್ಟ ಹೆಚ್ಚಲಿದೆ.
ಮಕರ
ಬದಲಾದ ಸನ್ನಿವೇಶಕ್ಕೆ ಒಗ್ಗಿಕೊಳ್ಳ ಬೇಕಾದ ಅನಿವಾರ್ಯ ಸ್ಥಿತಿಯು ಎದುರಾಗುತ್ತದೆ. ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳು ನಿಮ್ಮ ಕೈಸೇರಲಿದೆ. ಆದಾಯ ವೆಚ್ಚಗಳು ಎರಡೂ ಸರಿ ಸಮವಾಗಿರುವುದು.
ಕುಂಭ
ಮಡದಿಯಲ್ಲಿ ಅನಗತ್ಯ ವಿಷಯ ಪ್ರಸ್ತಾಪಿಸಿ ಭಿನ್ನಾಭಿಪ್ರಾಯ ಮೂಡದಂತೆ ಗಮನವಹಿಸಿ. ಪರಿಶೀಲನೆ ಇಲ್ಲದೆ ಯಾವ ಕೆಲಸಗಳಲ್ಲೂ ಹೂಡಿಕೆ ಸಲ್ಲದು. ದಿನಗೂಲಿ ನೌಕರರಿಗೆ ಅನುಕೂಲಕರ ವಾತಾವರಣ ಸಿಗಲಿವೆ
ಮೀನ
ಇಂದು ದೂರದ ಊರಿನಲ್ಲಿರುವ ಆಪ್ತರನ್ನು ಭೇಟಿ ಮಾಡುವ ಸಲುವಾಗಿ ಪ್ರಯಾಣವನ್ನು ಕೈಗೊಳ್ಳಬೇಕಾಗುತ್ತದೆ. ಉದರವ್ಯಾಧಿ ಅಥವಾ ಜೀರ್ಣಾಂಗಕ್ಕೆ ಸಂಬಂಧಿಸದಂತೆ ಅನಾರೋಗ್ಯ ಎದುರಾಗಬಹುದು.