ADVERTISEMENT

ದಿನ ಭವಿಷ್ಯ: ಸುಖಾಸುಮ್ಮನೆ ಅಪವಾದ ಹೊತ್ತಿರುವ ಈ ರಾಶಿಯವರಿಗೆ ನ್ಯಾಯ ಸಿಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 7 ಜುಲೈ 2025, 0:48 IST
Last Updated 7 ಜುಲೈ 2025, 0:48 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ದೇವತಾ ಕಾರ್ಯಗಳು ಕೈಗೊಳ್ಳುವ ತೀರ್ಮಾನ ಮಾಡುವಿರಿ. ಶತ್ರುಪೀಡೆ, ಕಿರುಕುಳ ಆಗಾಗ ತೋರಿಬಂದರೂ ದೇವರ ಕೃಪೆಯಿಂದ ಎಲ್ಲವು ನಿರ್ಮೂಲವಾಗುವುದು. ಕಾರ್ಯಗಳು  ಪೂರ್ಣಗೊಳ್ಳಲಿವೆ.
  • ವೃಷಭ
  • ವ್ಯವಹಾರಸ್ಥರಿಗೆ  ಲಾಭ ಸಿಗಲಾರದು . ನಷ್ಟವೂ ಇರಲಾರದು. ಅರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಇರಲಿದೆ. ನಿರುದ್ಯೋಗಿಗಳಿಗೆ  ಉದ್ಯೋಗಾ ವಕಾಶ ದೊರಕುತ್ತದೆ. ನರಸಿಂಹ ದೇವರ ಸೇವೆಯಿಂದ ಉತ್ತಮ ಫಲ.
  • ಮಿಥುನ
  • ಎಣಿಕೆಯ ಕಾರ್ಯಗಳೆಲ್ಲ ದೈಹಿಕ ಶ್ರಮವಿಲ್ಲದೆ ಪೂರ್ಣಗೊಳ್ಳುವುದರಿಂದ  ಸಮಯವನ್ನು ಸಂತೋಷದಿಂದ ಕಳೆಯಲಿದ್ದೀರಿ. ಪರಸ್ಪರ ಕಾಳಜಿಗಳ ಬಗ್ಗೆ ಪಾಲುದಾರರು ಸಂತಸದ ಒಪ್ಪಿಗೆ ನೀಡುತ್ತಾರೆ.
  • ಕರ್ಕಾಟಕ
  • ಹಿರಿಯರ ಪ್ರಭಾವ ಹಾಗೂ ಗುರುವಿನ ಕೃಪೆಯಿಂದ ಜನೋಪಕಾರಿ ಕೆಲಸಗಳು ಕೈಗೂಡಲಿವೆ. ಗೌರವ ಸಿಗಲಿದೆ. ಪತ್ನಿ ಮಕ್ಕಳೊಂದಿಗೆ ಸಂತಸದ ವಾತಾವರಣವಿರುವುದು.
  • ಸಿಂಹ
  • ಮಿತ್ರರಲ್ಲಿ, ಬಂಧು-ಬಾಂಧವರ ವಿಚಾರದಲ್ಲೂ ವಿರೋಧವನ್ನು ವ್ಯಕ್ತಪಡಿಸಬೇಡಿ. ಕಾರ್ಯಕ್ಷೇತ್ರದಲ್ಲಿ ಶಾಂತಚಿತ್ತದಿಂದ ಕಾರ್ಮಿಕರ ಮಾತುಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳಿ.
  • ಕನ್ಯಾ
  • ಧನಾಗಮನಕ್ಕೇನೂ ಕೊರತೆಯಿರದು. ಹೆಜ್ಜೆ ಹೆಜ್ಜೆಗೂ ಎಚ್ಚರಿಕೆ ಅಗತ್ಯವಿದೆ. ಶೀತ, ಕಫದಂತಹ ಬೇನೆಯನ್ನು ನಿರ್ಲಕ್ಷಿಸಬೇಡಿ.  ಸ್ವಂತ ಕಾರ್ಯಗಳೆಲ್ಲವೊ ಜಯಪ್ರದವಾಗಲಿವೆ.
  • ತುಲಾ
  • ಕತ್ತಲೆಯ ಪ್ರಪಂಚದಲ್ಲಿರುವ ಜೀವನಕ್ಕೆ ದೂರದಲ್ಲೊಂದು  ಜ್ಯೋತಿ ಕಾಣಲಿದೆ. ಮೇಲಧಿಕಾರಿಗಳ ಕಿರುಕುಳದಿಂದ ಹೊರಬರುವ ಕಾಲ ಸಮೀಪದಲ್ಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗದಿರಬಹುದು.
  • ವೃಶ್ಚಿಕ
  • ಆನುವಂಶಿಕ ಬೇಡಿಕೆಯೊಂದು ಈಡೇರುವುದರಿಂದ ಕೊಂಚ ನೆಮ್ಮದಿ ಸಿಗಲಿದೆ. ಪ್ರಯಾಣದಲ್ಲಿ ವಂಚನೆ,  ನಷ್ಟದ ಪ್ರಸಂಗಗಳಿವೆ. ಎಚ್ಚರಿಕೆಯಿಂದಿರಿ. ಇಟ್ಟಿಗೆ, ಕಬ್ಬಿಣ, ಯಂತ್ರಸಾಮಗ್ರಿಗಳ ಮಾರಾಟ ಏರುಗತಿಯಲ್ಲಿ ನಡೆದೀತು.
  • ಧನು
  • ವಾಹನ ಖರೀದಿಯ ಆಲೋಚನೆ ನಿಮ್ಮಿಷ್ಟದಂತೆಯೇ ನೆರವೇರಲಿದೆ.ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಿದರೆ ಲೇಸು. ರಕ್ತಸಂಬಂಧಿ ಕಾಯಿಲೆಯ ಲಕ್ಷಣ ಕಾಣಿಸೀತು. ದೈವ ಆರಾಧನೆ ಬಿಡದಿರಿ.
  • ಮಕರ
  • ಕೆಲಸಕ್ಕೆ ದುಪ್ಪಟ್ಟು ಸಂಪಾದನೆಯಾಗುವ ಯೋಗವಿದೆ. ಮಾತುಗಾರರಿಗೆ, ವಾಗ್ಮಿಗಳಿಗೆ, ಬೋಧಕ ವರ್ಗದವರಿಗೆ ವೃತ್ತಿಯಲ್ಲಿ ಬಡ್ತಿ ಅಥವಾ ಸನ್ಮಾನಗಳು ದೊರಕಲಿವೆ.
  • ಕುಂಭ
  • ತಂದೆ-ತಾಯಿಯ ಆರೋಗ್ಯದ ಕಡೆಗೆ ಗಮನ ಕೊಡುವುದು ಅನಿವಾರ್ಯ. ವಿದ್ಯಾರ್ಥಿಗಳಿಗೆ ಶ್ರೇಯಸ್ಸು, ಮೇಧಾಶಕ್ತಿ ಹೆಚ್ಚಲಿದೆ. ಸರ್ವತೋಮುಖ ಅಭಿವೃದ್ಧಿಗೆ ಸೋದರವರ್ಗದವರ ಬೆಂಬಲ ಸಿಗಲಿದೆ.
  • ಮೀನ
  • ಸುಖಾಸುಮ್ಮನೆ ಅಪವಾದದ ಆರೋಪ ಹೊತ್ತಿರುವ ನಿಮಗೆ ನ್ಯಾಯ ಸಿಗಲಿದೆ. ವ್ಯಾಪಾರಿಗಳಿಗೆ ಲಾಭದಾಯಕ ಬೆಳವಣಿಗೆ. ಸೇವಕ ವರ್ಗದವರಿಗೆ, ಆರಕ್ಷಕರಿಗೆ, ತಾಂತ್ರಿಕರಿಗೆ ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ದೊರಕಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.