ADVERTISEMENT

ದಿನ ಭವಿಷ್ಯ: ಔಷಧ ಖರೀದಿಗೆ ಯೋಚಿಸಬೇಡಿ, ಹಣಕ್ಕಿಂತ ಆರೋಗ್ಯವೇ ಮುಖ್ಯ.

ದಿನ ಭವಿಷ್ಯ: ಮಂಗಳವಾರ, 15 ಏಪ್ರಿಲ್ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 14 ಏಪ್ರಿಲ್ 2025, 23:42 IST
Last Updated 14 ಏಪ್ರಿಲ್ 2025, 23:42 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸಹಚರರಲ್ಲಿ, ಸಹೋದ್ಯೋಗಿಗಳಲ್ಲಿ ಮೃದು ಧೋರಣೆ ಸಿಬ್ಬಂದಿ ವರ್ಗಕ್ಕೆ ಸಂತೋಷವೆನಿಸುವುದು. ಹೊಸ ವ್ಯವಹಾರದಲ್ಲಿ ಸ್ನೇಹಿತರ ಸಹಕಾರ ದೊರೆಯಲಿದೆ.
  • ವೃಷಭ
  • ನಿಗೂಢ ಸಂಗತಿಗಳನ್ನು ಬಯಲಿಗೆ ತರುವ ಪ್ರಯತ್ನ ನಡೆಯಲಿದೆ. ಕೆಲಸಗಳಿಗೆ ಆತ್ಮಸ್ಥೈರ್ಯ ಅಗತ್ಯ. ಕಾನೂನಿಗೆ ವಿರುದ್ಧವಾದ ಕೆಲಸ ಸಂಭವಿಸಬಹುದು.
  • ಮಿಥುನ
  • ಕಠಿಣಶ್ರಮದ ಜತೆಯಲ್ಲಿ ಎಷ್ಟೇ ಪ್ರಯತ್ನವಿದ್ದರೂ ಮೊದಲನೇ ಬಾರಿ ವಿಘ್ನವೇ ಸಂಭವಿಸಲಿದೆ. ನಂತರ ಗುರಿ ಸಾಧಿಸಬೇಕಿದ್ದಲ್ಲಿ ಅನುಭವಸ್ಥರ ಅಥವಾ ಅಕ್ಕಪಕ್ಕದವರೊಂದಿಗೆ ಸಂಪರ್ಕ ಬೆಳೆಸಿಕೊಳ್ಳುವುದು ಉತ್ತಮ.
  • ಕರ್ಕಾಟಕ
  • ಹೊಸ ಮನೆಯ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಓಡಾಟ ನಡೆಸಬೇಕಾಗುವುದು. ನೆಚ್ಚಿನ ಕ್ಷೇತ್ರದಲ್ಲಿ ಸ್ಪರ್ಧೆಗಳನ್ನು ಎದುರಿಸುವ ಕಾಲ ಈ ದಿನ. ಆದಾಯ ವೆಚ್ಚಗಳು ಎರಡೂ ಸರಿ ಸಮವಾಗಿರುವುದು.
  • ಸಿಂಹ
  • ಕೆಲಸ ಕಾರ್ಯದಲ್ಲಿ ತೋರಿ ಬರುತ್ತಿದ್ದ ಅಡ್ಡಿ ಆತಂಕಗಳು ದೂರಾಗಲಿವೆ. ಸಂಸ್ಥೆಯ ಆಂತರಿಕ ವಿಷಯಗಳಿಗೆ ಗಮನ ಕೊಡದಿರುವುದು ಒಳ್ಳೆಯದು. ಮಗನ ವಿದ್ಯಾಭ್ಯಾಸದ ವಿಚಾರಕ್ಕಾಗಿ ತಾಯಿ ಶಾರದಾಂಬೆಯನ್ನು ಪ್ರಾರ್ಥಿಸಿ.
  • ಕನ್ಯಾ
  • ರಿಯಲ್ ಎಸ್ಟೇಟುದಾರರಿಗೆ ಉತ್ತಮ ಧನಲಾಭದಿಂದ ವ್ಯವಹಾರಗಳು ವೃದ್ಧಿಗೊಳ್ಳಲಿವೆ. ಕುಲದೇವರ ದರ್ಶನದಿಂದ ವ್ಯವಹಾರಗಳಲ್ಲಿ ಅಭಿವೃದ್ಧಿ ಸಾಧಿಸಬಲ್ಲಿರಿ. ಶಸ್ತ್ರವೈದ್ಯ ವೃತ್ತಿಯವರಿಗೆ ಸೌಲಭ್ಯಗಳು ಹೆಚ್ಚಲಿವೆ.
  • ತುಲಾ
  • ಲಭ್ಯವಿರುವ ಅವಕಾಶಗಳ ಬಗ್ಗೆ ಯೋಚಿಸುವುದು ಉತ್ತಮವೇ ಹೊರತು ಕೈಗೆ ಸಿಗದ ಅಂಶಗಳ ಬಗ್ಗೆ ಯೋಚಿಸುವುದು ಸಮಯವ್ಯರ್ಥಕ್ಕೆ ಕಾರಣವಾಗಲಿದೆ. ನಿಶ್ಚಿತ ಕಾರ್ಯಗಳಿಗೆ ಹಣದ ಹರಿವು ಸರಾಗವಾಗಿರುವುದು
  • ವೃಶ್ಚಿಕ
  • ದೈನಂದಿನ ಬದುಕಿನಲ್ಲಿ ಮತ್ತೊಬ್ಬರನ್ನು ಗೌರವಿಸುವುದರಿಂದ ಗೌರವವು ಕೂಡ ಹೆಚ್ಚುವುದು. ಕಾರ್ಯಗಳ ಒತ್ತಡದ ನಡುವೆಯೂ ಕುಟುಂಬದ ಸಮಸ್ಯೆಯತ್ತ ಗಮನ ನೀಡುವುದನ್ನು ಮರೆಯದಿರಿ.
  • ಧನು
  • ವೃತ್ತಿ ತರಬೇತಿ ಹೊಂದಿರುವವರಿಗೆ ಕೆಲಸ ಸಿಗುವ ಸೂಚನೆ ದೊರೆಯಲಿದೆ. ಕ್ರೀಡಾಸಕ್ತರಿಗೆ ಅಥವಾ ಕ್ರೀಡಾಪಟುಗಳಿಗೆ ಶುಭದಾಯಕ ದಿನ. ಧಾರ್ಮಿಕ ವ್ಯಕ್ತಿಗಳನ್ನು ಭೇಟಿ ಮಾಡುವಿರಿ, ಸಂತಸ ಉಂಟಾಗಲಿದೆ.
  • ಮಕರ
  • ಪತ್ರಕರ್ತರಿಗೆ ಗಣ್ಯ ವ್ಯಕ್ತಿಗಳ ಭೇಟಿ ಹಾಗೂ ಅವರ ಸಂದರ್ಶನ ನಡೆಸುವ ಅವಕಾಶ ದೊರೆಯಲಿದೆ. ದಿನಕ್ಕಿಂತ ಕಾರ್ಯಭಾರದ ಒತ್ತಡ ಕಡಿಮೆಯಾಗುವುದು. ಚಿತ್ರ ವಿತರಕರಿಗೆ ವರಮಾನದ ಸಾಧ್ಯತೆ ಇದೆ.
  • ಕುಂಭ
  • ಶೀತಬಾಧೆಯನ್ನು ಹೋಗಲಾಡಿಸಿಕೊಳ್ಳಲು ಆಯುರ್ವೇದದ ಮೊರೆಹೋಗುವುದು ಉತ್ತಮ. ಮಾನಸಿಕ ಸಮತೋಲನದಿಂದ ಶುಭ ಮತ್ತು ಉತ್ತಮ ಅಭಿವೃದ್ಧಿದಾಯಕವಾಗಲಿದೆ. ಜವಳಿ ವ್ಯಾಪಾರಿಗಳಿಗೆ ಲಾಭ.
  • ಮೀನ
  • ಅಪೇಕ್ಷಿಸಿದ ಪ್ರಗತಿ ಸಾಧಿಸುವಿರಿ. ಯಶಸ್ಸಿನ ಹೊಸ ಮಾರ್ಗಗಳು ಅರಿವಾಗುವುದು. ಔಷಧ ಖರೀದಿಗೆ ಯೋಚಿಸಬೇಡಿ, ಹಣಕ್ಕಿಂತ ಆರೋಗ್ಯವೇ ಮುಖ್ಯ ಎಂಬುದನ್ನು ಅರಿತುಕೊಳ್ಳಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.