ADVERTISEMENT

ದಿನ ಭವಿಷ್ಯ: ಫೆಬ್ರುವರಿ 24 ಶನಿವಾರ 2024– ಎಲ್ಲವೂ ನಿಮ್ಮ ಇಚ್ಛೆಯಂತೆ ನಡೆಯುವುದು

ದಿನ ಭವಿಷ್ಯ: ಫೆಬ್ರುವರಿ 24 ಶನಿವಾರ 2024

ಪ್ರಜಾವಾಣಿ ವಿಶೇಷ
Published 23 ಫೆಬ್ರುವರಿ 2024, 19:06 IST
Last Updated 23 ಫೆಬ್ರುವರಿ 2024, 19:06 IST
<div class="paragraphs"><p>ದಿನ ಭವಿಷ್ಯ: ಫೆಬ್ರುವರಿ 24 ಶನಿವಾರ 2024– ಎಲ್ಲವೂ ನಿಮ್ಮ ಇಚ್ಛೆಯಂತೆ ನಡೆಯುವುದು</p></div>

ದಿನ ಭವಿಷ್ಯ: ಫೆಬ್ರುವರಿ 24 ಶನಿವಾರ 2024– ಎಲ್ಲವೂ ನಿಮ್ಮ ಇಚ್ಛೆಯಂತೆ ನಡೆಯುವುದು

   
ಮೇಷ
  • ಕಾರ್ಯದೊತ್ತಡ ಜತೆಯಲ್ಲಿ ಮನೆಯ ವಿಚಾರಗಳತ್ತಲೂ ಗಮನಹರಿಸುವುದು ಮುಖ್ಯ. ಅಗ್ನಿಯಿಂದ ಅವಘಡ ಸಂಭವಿಸಬಹುದು ಎಚ್ಚರ ವಹಿಸಿ. ಹೊಸ ಜವಾಬ್ದಾರಿಗಳು ಅರಸಿ ಬರಲಿದೆ.
  • ವೃಷಭ
  • ಕೋರ್ಟ್ ಕೆಲಸಗಳಿಗಾಗಿ ಹಿರಿಯ ಅಧಿಕಾರಿಗಳ ಸಲಹೆ ಪಡೆಯುವುದು ಅವಶ್ಯಕ. ಮಕ್ಕಳ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗುವುದು. ಮಂಗಳ ಕಾರ್ಯಗಳ ಶುಭ ಸೂಚನೆಗಳು ಕಂಡುಬರುತ್ತದೆ.
  • ಮಿಥುನ
  • ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಅರ್ಧದಷ್ಟು ಕಳೆಯುವುದು. ದೃಢ ನಿರ್ಧಾರದಿಂದ ಕೆಲಸಕಾರ್ಯಗಳೆಲ್ಲವು ಪೂರ್ಣಗೊಳ್ಳಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
  • ಕರ್ಕಾಟಕ
  • ಜವಾಬ್ದಾರಿಯುತ ಸ್ಥಾನವನ್ನು ನಿಭಾಯಿಸಲು ತೀರ್ಮಾನಿಸುವುದು ಸರಿಯಲ್ಲ. ಮಾತೃ ಸಂಬಂಧಿಗಳ ಸಹಾಯದಿಂದ ಉತ್ತಮ ನೌಕರಿ ದೊರೆಯುವುದು. ಮನೆ ದೇವರಿಗೆ ಹರಕೆ ಸಲ್ಲಿಸುವ ಬಗ್ಗೆ ಯೋಚಿಸಿ.
  • ಸಿಂಹ
  • ಬರುವ ಅವಕಾಶಗಳನ್ನು ನಿಮ್ಮತ್ತ ತಿರುಗಿಸಿಕೊಂಡು ಸದುಪಯೋಗ ಪಡೆದುಕೊಳ್ಳಿ. ದೇಹದಲ್ಲಿ ಉಂಟಾಗಿದ್ದಂಥ ಪಿತ್ತ, ಉಷ್ಣ ಪ್ರಕೋಪ ದೂರಾಗುವವು.
  • ಕನ್ಯಾ
  • ಕರ್ತವ್ಯ ನಿಷ್ಠೆಯಿಂದ ಉತ್ತಮ ಹೆಸರು ಸಂಪಾದನೆಯಾಗುವುದು. ಪ್ರಯತ್ನಿಸಿದ ಕಾರ್ಯಗಳು ಆಪ್ತರ ಸಕಾಲಿಕ ನೆರವಿನಿಂದ ಕೈಗೂಡುವುದು. ಜನಬಲದ ಕೊರತೆಯು ಯಶಸ್ಸಿಗೆ ಅಡ್ಡಿಯನ್ನು ಉಂಟುಮಾಡಲಿದೆ.
  • ತುಲಾ
  • ವಾಹನಚಾಲನಾ ವೃತ್ತಿಯವರಿಗೆ ಶುಭವಿದೆ. ರಾಸಾಯನಿಕ ವಸ್ತುಗಳಲ್ಲಿ ಕೆಲಸ ಮಾಡುವವರು ಜಾಗ್ರತರಾಗಿರಿ. ಸ್ವಪ್ರತಿಷ್ಠೆಯನ್ನು ಕಾಪಾಡಲು ವಾದ ಮಾಡಬೇಕಾಗಬಹುದು.
  • ವೃಶ್ಚಿಕ
  • ವಿವಾಹ ವಯಸ್ಕ ಯೋಗ್ಯರಿಗೆ ನೂತನ ಸಂಬಂಧಗಳು ಕಂಡು ಬರಲಿವೆ. ವರ್ಗಾವಣೆಯಿಂದ ದೂರ ವಾಸಿಸುವ ಸಂದರ್ಭ ಬರಲಿದೆ. ಹೆಚ್ಚಿನ ವಿದ್ಯಾಭ್ಯಾಸದ ಬಗ್ಗೆ ಚಿಂತನೆ ನಡೆಯುವುದು.
  • ಧನು
  • ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಅರ್ಧದಷ್ಟು ಕಳೆಯುವುದು. ಆಸ್ತಿ ಕೊಳ್ಳುವ ನಿರ್ಧಾರದಲ್ಲಿ ಲಾಭ-ನಷ್ಟವನ್ನು ಪುನಃ ಇನ್ನೊಮ್ಮೆ ಯೋಚಿಸುವುದು ಉತ್ತಮ.
  • ಮಕರ
  • ಹೊಸ ಪುಸ್ತಕಗಳ ಪ್ರಕಾಶನ ಮಾಡುವವರಿಗೆ ಶುಭದಿನ. ಪತ್ರಕರ್ತರಿಗೆ ರಹಸ್ಯ ವಿಷಯ ತಿಳಿಯುವುದು. ಆಸೆ ಆಕಾಂಕ್ಷೆಗಳು ಈಡೇರಿ ಎಲ್ಲವೂ ನಿಮ್ಮ ಇಚ್ಛೆಯಂತೆ ನಡೆಯುವುದು.
  • ಕುಂಭ
  • ಎದುರಾಗಿರುವ ಸಮಸ್ಯೆಗೆ ಸಂಬಂಧಿಸಿದ ವ್ಯಕ್ತಿಯಲ್ಲಿ ಮಾತನಾಡುವುದರಿಂದ ಸಂಪೂರ್ಣವಾಗಿ ಉತ್ತರ ಸಿಗುವುದು. ಬರಬೇಕಾಗಿದ್ದ ಹಣಕ್ಕಾಗಿ ಹೆಚ್ಚು ಓಡಾಡಬೇಕಾಗುವುದು. ಕಾರ್ಮಿಕ ವರ್ಗದವರ ಬಗ್ಗೆ ಗಮನವಿರಲಿ.
  • ಮೀನ
  • ಜಾಣ್ಮೆಯಿಂದ ಅವಕಾಶ ಬಳಸಿಕೊಂಡಲ್ಲಿ ಅಧಿಕಾರ ಪಡೆದು ಕೊಳ್ಳು ವುದು ಕಷ್ಟದ ಕೆಲಸವೇನಲ್ಲ. ಹಣಕಾಸಿನ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸೂಕ್ತ ಕಾಲವಾಗಿದೆ. ಉಷ್ಣ ವ್ಯಾಧಿ ಉಪಶಮನಕ್ಕೆ ಔಷಧಿಯನ್ನು ಸ್ವೀಕರಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.