ADVERTISEMENT

ದಿನ ಭವಿಷ್ಯ: ಸಮಾಧಾನದಿಂದ ಯೋಚಿಸಿದರೆ ಸಮಸ್ಯೆ ಉಪಶಮನವಾಗುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 25 ಜೂನ್ 2025, 1:05 IST
Last Updated 25 ಜೂನ್ 2025, 1:05 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕೆಲಸದ ಒತ್ತಡದಿಂದ ದೂರಾಗಿ ಮಿತ್ರರೊಡನೆ ಉಲ್ಲಾಸದಿಂದ ಕಾಲ ಕಳೆಯುವಿರಿ. ಸಂಸಾರದಲ್ಲಿ ಸುಖವನ್ನು ಕಾಣಲಿರುವಿರಿ. ಅರ್ಧದಲ್ಲಿ ಕೈಬಿಟ್ಟಿದ್ದ ಕಾರ್ಯಗಳಿಗೆ ಮರುಚಾಲನೆ ನೀಡುವ ಬಗ್ಗೆ ಗಮನಹರಿಸಿ.
  • ವೃಷಭ
  • ನಿರುದ್ಯೋಗಿ ಯುವಕರಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಪ್ರಯತ್ನ ಪಡಬಹುದು. ಧನಾಗಮನ ಹೆಚ್ಚಿದ್ದರೂ ಸಂಪಾದನೆಯ ಬಹುಪಾಲು ವೆಚ್ಚವಾಗಲಿದೆ. ಮಕ್ಕಳ ಜೀವನದ ಹಾದಿ ಬದಲಾಗಲಿದೆ.
  • ಮಿಥುನ
  • ಆತ್ಮಸ್ಥೈರ್ಯದಿಂದ ಯೋಚಿಸಿದ ಎಲ್ಲಾ ಕೆಲಸದಲ್ಲಿಯೂ ಜಯ ಕಾಣುವಿರಿ. ವಾಯುಸಂಬಂಧ ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳಬಹುದು. ಷೇರು ಮಾರಾಟಗಳಿಂದ ಲಾಭ ಹೊಂದುವಿರಿ.
  • ಕರ್ಕಾಟಕ
  • ವೈಯಕ್ತಿಕ ಸಮಸ್ಯೆಗಳ ಇತ್ಯರ್ಥಕ್ಕೆ ಬಂಧುಗಳ ಸಹಕಾರ ಪಡೆಯಲು ನಿರ್ಧರಿಸಿ. ಸಮಾಧಾನದಿಂದ ಯೋಚಿಸಿದರೆ ಸಮಸ್ಯೆ ಉಪಶಮನವಾಗುವುದು. ತಂದೆಯವರ ಆರೋಗ್ಯ ಸುಧಾರಣೆಯಿಂದ ನೆಮ್ಮದಿ.
  • ಸಿಂಹ
  • ವೈದ್ಯ ವೃತ್ತಿಯವರಿಗೆ ವಿಶೇಷ ಅನುಭವ ಸಿಗಲಿದೆ. ಉನ್ನತ ಅಧಿಕಾರಿಗಳ ಮೇಲೆ ಇದ್ದ ತಪ್ಪು ತಿಳಿವಳಿಕೆಗಳು ದೂರಾಗಲಿವೆ. ಸತತ ಪ್ರಯತದಿಂದ ಕೆಲಸ ಕಾರ್ಯ ಆರಂಭಿಸುವಿರಿ.
  • ಕನ್ಯಾ
  • ವಿದ್ಯುತ್ ಸಂಬಂಧಿ ವಸ್ತುಗಳ ಬಳಕೆಯನ್ನು ಮಾಡುವಾಗ ಮುಂಜಾಗ್ರತಾ ಕ್ರಮ ವಹಿಸಿ. ಗೃಹಿಣಿಯರು ಉತ್ತಮ ಶಿಫಾರಸ್ಸಿನ, ಹೊಗಳಿಕೆಯ ಮಾತುಗಳನ್ನು ಎದುರು ನೋಡಬಹುದು.
  • ತುಲಾ
  • ಬಾಡಿಗೆ ಮನೆ ಹುಡುಕುವ ಕೆಲಸದಲ್ಲಿ ಸಹೋದ್ಯೋಗಿಯೊಬ್ಬರು ನೆರವಿಗೆ ಬರುವರು. ಕೋರ್ಟು ಕಚೇರಿ ವ್ಯವಹಾರ ನಿರ್ವಹಣೆ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳಿರಿ. ಕಚೇರಿ ಕೆಲಸಗಳಿಗೆ ಅಲೆದಾಟ ಇರುತ್ತದೆ.
  • ವೃಶ್ಚಿಕ
  • ವೈದ್ಯ ವೃತ್ತಿಯಲ್ಲಿರುವವರಿಗೆ ವಿಕ್ಷಿಪ್ತ ರೋಗಿಯೊಬ್ಬರನ್ನು ಭೇಟಿಯಾಗುವ ಸಾಧ್ಯತೆ ‌. ಸೂಕ್ಷ್ಮಗ್ರಾಹಿಯಾದ ನೀವು ಮುಂದಿನ ಆತಂಕಗಳನ್ನು ಕಂಡುಕೊಳ್ಳಲಿದ್ದೀರಿ. ಪ್ರತಿಭೆ ಸಾಮರ್ಥ್ಯ ಈ ದಿನ ಬೆಳಕಿಗೆ ಬರಲಿದೆ.
  • ಧನು
  • ರಾಸಾಯನಿಕ ವಸ್ತುಗಳ ಉತ್ಪಾದನೆಯಲ್ಲಿ ಕೆಲಸ ನಡೆಸುತ್ತಿರುವವರು ಅವಗಢಗಳಿಂದ ಜಾಗರೂಕರಾಗಿ ಇರಿ. ಓಡುತ್ತಿರುವ ಪ್ರಪಂಚದೊಂದಿಗೆ ಓಡಲು ಪ್ರಯತ್ನಿಸುವುದು ಉತ್ತಮ. ವಾಹನ ಚಾಲನೆಯಲ್ಲಿ ಎಚ್ಚರಿಕೆ ವಹಿಸಿ.
  • ಮಕರ
  • ಬೆಳವಣಿಗೆಯ ಹಾದಿಯಲ್ಲಿ ದಿಕ್ಕು ತಪ್ಪಿಸುವವರೇ ಹೆಚ್ಚಿರುವುದರಿಂದ ನಿಮ್ಮತನ ಪ್ರದರ್ಶಿಸುವುದು ಸ್ವಲ್ಪ ಕಷ್ಟ. ದುರ್ಜನರಿಂದ ದೂರವಿದ್ದು ಸಜ್ಜನರಲ್ಲಿ ಸ್ನೇಹ ಮತ್ತು ವ್ಯವಹಾರ ಮಾಡಿ.
  • ಕುಂಭ
  • ಸುತ್ತಣ ಪರಿಸರದಲ್ಲಿರುವ ಬುದ್ಧಿವಂತ ವ್ಯಕ್ತಿಗಳಿಂದ ಲಾಭ ಉಂಟಾಗುವುದು. ನಿಯಮಿತ ಆಹಾರದಿಂದ ದೇಹದಲ್ಲಿ ವಾತದ ಬಾಧೆ ಕಡಿಮೆಯಾಗಲಿದೆ. ಹಣದ ಹರಿವು ನಿಧಾನವಾಗಿ ಅನುಭವಕ್ಕೆ ಬರಲಿದೆ.
  • ಮೀನ
  • ಉನ್ನತ ಅಧಿಕಾರಿಗಳ ಜತೆಗಿನ ಸಂಬಂಧವನ್ನು ಉತ್ತಮವಾಗಿ ಇಟ್ಟುಕೊಳ್ಳುವುದರಿಂದ ಲಾಭವಾಗುತ್ತದೆ. ಕರ್ತವ್ಯ ಕೊರತೆಯಿಂದಾಗಿ ಜೀವನದಲ್ಲಿ ಉಲ್ಲಾಸವನ್ನು ಕಳೆದುಕೊಳ್ಳಲಿದ್ದೀರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.