ADVERTISEMENT

ದಿನ ಭವಿಷ್ಯ: ಈ ರಾಶಿಯವರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 1 ಜೂನ್ 2025, 23:30 IST
Last Updated 1 ಜೂನ್ 2025, 23:30 IST
   
ಮೇಷ
  • ಯಾವುದೇ ರೀತಿಯ ಒಪ್ಪಂದಗಳನ್ನು ಮಾಡಿಕೊಳ್ಳದಿರಲು ತೀರ್ಮಾನಿಸುವುದು ಲೇಸು. ದೇವರಲ್ಲಿನ ಶ್ರದ್ಧಾ ಭಕ್ತಿ ಅಧಿಕಗೊಳ್ಳಲಿದೆ. ವ್ಯವಹಾರಗಳಲ್ಲಿ ನುರಿತವರ ಸಲಹೆಗಳನ್ನು ಪಡೆದುಕೊಳ್ಳುವಿರಿ.
  • ವೃಷಭ
  • ಹೆಚ್ಚಿನ ಹೊಣೆಗಾರಿಕೆಯನ್ನು ಹೊರಲು ಸಿದ್ಧರಾಗಿರುವಿರಿ ಮತ್ತು ಶಕ್ತರಾಗಿರುವಿರಿ. ಕೌಶಲವನ್ನು ತೋರಲು ಹೆಚ್ಚಿನ ಅವಕಾಶಗಳು ಸಿಗಲಿವೆ. ತೆರಿಗೆಗೆ ಸಂಬಂಧಿತ ಕೆಲಸಗಳೆಲ್ಲವನ್ನೂ ಪೂರ್ಣಗೊಳಿಸಲು ಪ್ರಯತ್ನಿಸಿ.
  • ಮಿಥುನ
  • ಆಫೀಸಿನಲ್ಲಿಂದು ‌ಕೆಲಸದ ವೇಗವನ್ನು ಹೆಚ್ಚಿಸಿಕೊಳ್ಳುವಿರಿ. ಸಮಯ ಮತ್ತು ಅನುಕೂಲತೆಯ ಮೇಲೆ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುವಿರಿ. ಉತ್ಸಾಹದಿಂದ ಕಾರ್ಯ ಪ್ರವೃತ್ತರಾಗುವಿರಿ.
  • ಕರ್ಕಾಟಕ
  • ಸುಗಂಧ ದ್ರವ್ಯಗಳ ವ್ಯಾಪಾರದಿಂದ ಲಾಭ ಪಡೆಯುವಿರಿ. ಧೈರ್ಯದಿಂದ ಮುನ್ನಡೆದಲ್ಲಿ ಕಾರ್ಯಸಾಧನೆಯಾಗುತ್ತದೆ. ರಾಜಕೀಯ ದಲ್ಲಿರುವ ಮಹಿಳೆಯರು ಬಲಾಢ್ಯರಾಗಿ ಅಧಿಕಾರ ಪಡೆಯುವಂತಾಗಲಿದೆ.
  • ಸಿಂಹ
  • ಧಾರ್ಮಿಕವಾಗಿ ಇರುವವರಿಗೆ, ವೇದಾಧ್ಯಯನದಲ್ಲಿ ತೊಡಗಿರು‌ವವರಿಗೆ ಇಂದು ಮಂತ್ರಸಿದ್ಧಿ ಆಗಬಹುದು. ಬೆಳ್ಳಿ ವಸ್ತುಗಳ ಮಾರಾಟಗಾರರು ಹೆಚ್ಚಿನ ಆದಾಯ ಗಳಿಸುವಿರಿ. ಮಕ್ಕಳಿಂದ ಅನಾವಶ್ಯಕ ಖರ್ಚು ಸಂಭವಿಸಲಿದೆ.
  • ಕನ್ಯಾ
  • ಮನೆಯಲ್ಲಿ ಸಂತೋಷ ತರುವಂತಹ ಶುಭ ಸಮಾರಂಭಗಳು ನಡೆಯುವುದು. ಎಲ್ಲವನ್ನೂ ಕಷ್ಟಪಟ್ಟು ಅಥವಾ ಇತರರ ಸಹಾಯದಿಂದ ಸಂಪಾದಿಸಿಕೊಳ್ಳಬೇಕಾಗುತ್ತದೆ. ಮಾನಸಿಕ ಖಿನ್ನತೆಯನ್ನು ದೂರಮಾಡಿ.
  • ತುಲಾ
  • ಹೊರ ದೇಶದಲ್ಲಿ ಉದ್ಯೋಗದ ಅನ್ವೇಷಣೆ ಮಾಡುವುದಕ್ಕೆ ಒಳ್ಳೆಯ ದಿನ. ರಾಜಕೀಯ ವ್ಯಕ್ತಿಗಳು ಇಂದು ಸಾಮಾಜಿಕ ಕಾರ್ಯಕ್ರಮದಿಂದ ಮತ್ತು ಮಾಧ್ಯಮದಿಂದ ದೂರ ಉಳಿಯುವ ಬಗ್ಗೆ ತೀರ್ಮಾನಿಸುವುದು ಒಳ್ಳೆಯದು.
  • ವೃಶ್ಚಿಕ
  • ಪ್ರಯಾಣ ಅಂದುಕೊ‌ಂಡಂತೆ ಸುಗಮವಾಗಿರುವುದಿಲ್ಲ, ಜೋಪಾನವಾಗಿರಿ. ಹಿಡಿತಕ್ಕೆ ಸಿಕ್ಕದೆ ಇರುವ ಕೆಲಸ ಗಳನ್ನು ಸಮರ್ಥವಾಗಿ ಅರ್ಥೈಸಿಕೊಂಡು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗುವಿರಿ.
  • ಧನು
  • ಯಾವುದೇ ಕಾರಣಕ್ಕೂ ಸಾಲದ ರೂಪದಲ್ಲಿ ಹಣ ತೆಗೆದುಕೊಳ್ಳುವುದು ಸರಿಯಲ್ಲ. ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳ. ರೈತರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವಿರಿ.
  • ಮಕರ
  • ಸ್ವಂತ ಪ್ರಯತ್ನದಿಂದ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುವ ಸದವಕಾಶ ಈ ದಿನ ಪ್ರಾಪ್ತಿಯಾಗಲಿದೆ. ಸದಾ ಕಾಲ ನಿಮ್ಮ ಸಕಾರಾತ್ಮಕ ನಡವಳಿಕೆಗಳಿಂದಾಗಿ ಲಾಭ ಕಂಡುಕೊಳ್ಳಲಿದ್ದೀರಿ.
  • ಕುಂಭ
  • ನಿಮ್ಮ ಅಭಿವೃದ್ಧಿಯನ್ನು ಸಹಿಸಲಾಗದ ಜನರ ಮಧ್ಯದಲ್ಲಿ ಜೀವನ ನಡೆಸಬೇಕಾಗುತ್ತದೆ. ಕೃಷಿಗೆ ಹೆಚ್ಚಿನ ಬಂಡವಾಳ ಹೂಡುವಂತೆ ಮಗನಿಂದ ಒತ್ತಾಯ ಹೆಚ್ಚಲಿದೆ. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
  • ಮೀನ
  • ಹೊಸ ಕಟ್ಟಡ ನಿರ್ಮಾಣ ಕಾರ್ಯಗಳ ಒಪ್ಪಂದ ಏರ್ಪಟ್ಟು ಬಹಳ ಸಂತೋಷವಾಗುವುದು. ಮಾರ್ಗದರ್ಶನಕ್ಕೆ ಕೊರತೆ ಇರುವುದಿಲ್ಲ. ಮನೆಯಲ್ಲಿ ಹಣಕಾಸಿನ ವಿಷಯದಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.