ADVERTISEMENT

ದಿನ ಭವಿಷ್ಯ: ಈ ರಾಶಿಯವರ ದಾಂಪತ್ಯ ಜೀವನ ಸುಖಮಯವಾಗಿರುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 5 ಜೂನ್ 2025, 23:30 IST
Last Updated 5 ಜೂನ್ 2025, 23:30 IST
   
ಮೇಷ
  • ಹೊಸದಾಗಿ ಲೇವಾದೇವಿ ವ್ಯವಹಾರವನ್ನು ಆರಂಭಿಸುವ ಆಲೋಚನೆ ಹೊಂದಿದವರಿಗೆ ಅಧಿಕೃತ ಆರಂಭ ದಿನ. ಆರ್ಥಿಕ ವ್ಯವಸ್ಥೆ ನೋಡಿಕೊಳ್ಳುವವರಿಗೆ ಅಧಿಕಾರಿಗಳಿಂದ ಆದೇಶವಾಗುವುದು.
  • ವೃಷಭ
  • ಸಾಂಸಾರಿಕವಾಗಿ ಹಾಗೂ ಸಾಮಾಜಿಕವಾಗಿ ವರ್ತನೆಯಲ್ಲಿ ಸಮತೋಲನವನ್ನು ಹಾಗೂ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಉತ್ತಮವೆಂದು ಅನಿಸುವುದು. ಸಣ್ಣ ವ್ಯಾಪಾರಿಗಳಿಗೆ ಉತ್ತಮ ಆದಾಯ.
  • ಮಿಥುನ
  • ಸಕಾರಾತ್ಮಕ ಭಾವನೆಗಳ ಕುರಿತು ಮಡದಿಯೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಪರಿಹಾರವಾಗುತ್ತದೆ. ಮನೋಬಲದಿಂದ ನಡೆಯಬೇಕಾದ ಕೆಲಸ ಕಾರ್ಯಗಳು ಚುರುಕಾಗಿ ಮತ್ತು ಅಚ್ಚುಕಟ್ಟಾಗಿ ನಡೆಯುವುದು.
  • ಕರ್ಕಾಟಕ
  • ವಿಪರೀತ ಭಿನ್ನಾಭಿಪ್ರಾಯಗಳಿಂದ ಮುಂದೂಡಿದ್ದ ಸ್ವತ್ತು ವಿವಾದಗಳು ನಿರ್ಣಯವಾಗುವುದು. ಹಲವು ಕಾರ್ಯಗಳಲ್ಲಿ ಆಪ್ತೇಷ್ಟರ ಸಹಕಾರವಿರುವುದು. ವಿವಾಹ ಸಂಬಂಧದ ಮಾತುಕತೆ ತೃಪ್ತಿಕರ.
  • ಸಿಂಹ
  • ದೈಹಿಕವಾಗಿ ಕೆಲಸ ಮಾಡುವವರಿಗೆ ಅಧಿಕ ದೇಹಾಯಾಸವಾಗುವ ಸಂಭವವಿದೆ. ಸರ್ಕಾರಿ ನೌಕರರಿಗೆ ಇತರೆ ಕಾರ್ಯಗಳಿಂದ ಅಧಿಕ ಒತ್ತಡ ಉಂಟಾಗಬಹುದು. ಗಮನವಿಟ್ಟು ಕೆಲಸ ಮಾಡಿದರೆ ಯಶಸ್ಸನ್ನು ಸಾಧಿಸುವಿರಿ.
  • ಕನ್ಯಾ
  • ಬಹುಕಾಲ ನೆನಪಿನಲ್ಲಿ ಉಳಿಯುವಂಥ ಮಧುರ ಘಟನೆ ಜೀವನದಲ್ಲಿ ನಡೆಯಲಿದೆ. ಧರ್ಮಕಾರ್ಯಗಳಿಗಾಗಿ ಧನ ವಿನಿಯೋಗಿಸುವ ಬಗ್ಗೆ ಯೋಚಿಸಿ. ಬುದ್ಧಿವಂತಿಕೆಯಿಂದ ಬದುಕಬೇಕಾದ ದಿನ.
  • ತುಲಾ
  • ಪರಿಶ್ರಮದ ಜತೆ ಅಧಿಕ ಸಮಯವನ್ನು ವೃತ್ತಿಗೆ ಮೀಸಲಿಡಿ. ಪ್ರೇಮ ವಿವಾಹಕ್ಕಾಗಿ ಕಾಯುತ್ತಿರುವವರು ಕಾಯಬೇಕಾಗಬಹುದು. ಮನೆಯ ಸಮೀಪದ ಶಿವಾಲಯಕ್ಕೆ ಭೇಟಿ ನೀಡಿ ಶುಭವಾಗುತ್ತದೆ.
  • ವೃಶ್ಚಿಕ
  • ಯೋಜನೆಗಳ ಕುರಿತು ಸ್ಪಷ್ಟ ಮಾಹಿತಿಗಳನ್ನು ಕಲೆಹಾಕಿರುವುದರಿಂದ ಮಾರ್ಗಮಧ್ಯದ ಅಡೆತಡೆಗಳು ನಿವಾರಣೆಯಾಗಲಿವೆ. ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವುದರಿಂದ ನಕಾರಾತ್ಮಕ ಅಂಶಗಳು ದೂರ.
  • ಧನು
  • ಪ್ರಶ್ನೆಗಳಿಗೆ ವೃತ್ತಿರಂಗದ ಸ್ನೇಹಿತರಿಂದ ಉತ್ತಮ ಸಲಹೆಗಳು ದೊರಕಲಿವೆ. ಹಿರಿಯರ ಆರೋಗ್ಯದ ಬಗ್ಗೆ ಗಮನ ಇಡುವುದು ಉತ್ತಮ. ಶಸ್ತ್ರಚಿಕಿತ್ಸರಿಗೆ ಅಪರೂಪದ ಅನುಭವ ಸಿಗುವುದು.
  • ಮಕರ
  • ನೌಕರಿ ಬದಲಾವಣೆಯಿಂದ ಆಧಿಕ ಲಾಭ ಪಡೆಯುವ ಸಂಭವವಿದೆ. ಹೊರದೇಶದಲ್ಲಿರುವ ಮಗನ ಯಶಸ್ಸಿನಿಂದ ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ. ವಾದ ವಿವಾದಗಳು ದೂರಾಗಲಿವೆ.
  • ಕುಂಭ
  • ದವಸ ಧಾನ್ಯಗಳ ಸಗಟು ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ಅನುಕೂಲವನ್ನು ಪಡೆಯುವರು. ವೈದ್ಯಕೀಯ ರಂಗದವರ ಪ್ರಗತಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ದಾಂಪತ್ಯ ಜೀವನ ಸುಖಮಯವಾಗಿರುವುದು.
  • ಮೀನ
  • ಅಧ್ಯಾಪಕರು, ರಂಗಕರ್ಮಿಗಳಿಗೆ ಒಳ್ಳೆಯ ಅವಕಾಶಗಳು ದೊರೆಯಲಿವೆ. ಅನಿರೀಕ್ಷಿತವಾಗಿ ಎದುರಾಗುವ ಎಡರು ತೊಡರುಗಳಿಂದ ಧೈರ್ಯ ಹೆಚ್ಚುತ್ತದೆ. ಮಾತೃವರ್ಗದವರ ನೆರವಿನಿಂದ ಸಂತೋಷವಾಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.