ADVERTISEMENT

ದಿನ ಭವಿಷ್ಯ: ಈ ರಾಶಿಯವರ ಆಸೆಗಳು ಈಡೇರಿ ಜೀವನದಲ್ಲಿ ನೆಮ್ಮದಿ ಕಾಣಲಿದ್ದೀರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 6 ಜೂನ್ 2025, 23:30 IST
Last Updated 6 ಜೂನ್ 2025, 23:30 IST
   
ಮೇಷ
  • ಕೃಷಿಗೆ ಸಂಬಂಧಿಸಿದ ಆರ್ಥಿಕತೆಯಲ್ಲಿ ಪಡೆದ ಸಾಲವನ್ನು ಹಿಂದಿರುಗಿಸುವ ಶಕ್ತಿ ದೊರಕಲಿದೆ. ಅನೇಕ ಕಾಲದಿಂದ ಕಾಡುತ್ತಿರುವ ದೇಹಬಾಧೆಯನ್ನು ನಿವಾರಿಸಿಕೊಳ್ಳಲು ವೈದ್ಯರನ್ನು ಬದಲಾಯಿಸಿ.
  • ವೃಷಭ
  • ಸಮಯದ ಗಡುವಿರುವ ಕೆಲಸಗಳನ್ನು ಕಡೆಯ ತನಕ ಉಳಿಸಿಕೊಳ್ಳುವ ಬದಲು ಮುಗಿಸಿಕೊಳ್ಳಿ. ವೃದ್ಧರಾದ ತಂದೆಯ ಆರೋಗ್ಯವು ಕ್ಷೀಣಿಸಬಹುದು, ಎಚ್ಚರವಹಿಸಿ.
  • ಮಿಥುನ
  • ಎಷ್ಟು ಜಾಗರೂಕತೆಯಿಂದ ಕೆಲಸ ಮಾಡಿದರೂ ಮೇಲಿನ ಅಧಿಕಾರಿಗಳ ಹದ್ದಿನಕಣ್ಣಿಗೆ ಕೆಲವು ದೋಷಗಳು ಕಾಣುತ್ತವೆ. ಸ್ನೇಹಿತನಿಗಾದ ವಾಹನ ಅಪಘಾತವು ಖೇದವಾಗಿಸುವುದು.
  • ಕರ್ಕಾಟಕ
  • ವ್ಯಕ್ತಿಯನ್ನು ಅವರ ಮೊದಲ ಭೇಟಿಯಲ್ಲಿ ನೋಡಿದ ಸ್ವಭಾವವೆಂದು ತೂಕಹಾಕಿ ತೀರ್ಮಾನಿಸಬೇಡಿ. ಸ್ನೇಹಿತರಲ್ಲಿ ಅನಗತ್ಯ ಮಾತನಾಡುವುದಕ್ಕಿಂತ ಮೌನವಾಗಿ ಇರುವುದು ಲೇಸು. ಗೌರವದಿಂದ ನೋಡಿ.
  • ಸಿಂಹ
  • ನ್ಯಾಯಯುತವಾಗಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುವ ಯೋಚನೆಯನ್ನು ಮಾಡಿ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಗುರುತಿಸಿಕೊಡಿರುವ ಯೋಗಪಟುಗಳಿಗೆ ಉತ್ತಮ ಅವಕಾಶಗಳು ಬರಲಿವೆ.
  • ಕನ್ಯಾ
  • ವಿವಿಧ ಕಾರ್ಯಗಳ ಜವಾಬ್ದಾರಿಗಳ ಭಾರ ಬೀಳುವುದರಿಂದ ಕೆಲಸದ ಒತ್ತಡ ಹೆಚ್ಚಿರುವ ಸಾಧ್ಯತೆ ಇರುತ್ತದೆ. ಆಸೆಗಳು ಈಡೇರಿ ಜೀವನದಲ್ಲಿ ನೆಮ್ಮದಿ ಕಾಣಲಿದ್ದೀರಿ.
  • ತುಲಾ
  • ಪ್ರಶ್ನಿಸಿಕೊಳ್ಳುವ ಸಮಯ ಎದುರಾಗುವುದು. ಅವಿವೇಕಿಗಳ ನಡುವೆ ವಾದಿಸಲು ಹೋಗಬೇಡಿ. ವಿವೇಕಯುತ ನಡವಳಿಕೆಯು ಪ್ರಯೋಜನಗಳನ್ನು ನೀಡುತ್ತದೆ. ಅಸಹಾಯಕರಿಗೆ ಸಹಾಯ ಮಾಡಿ, ಪುಣ್ಯ ಸಂಪಾದಿಸಬಹುದು.
  • ವೃಶ್ಚಿಕ
  • ಪ್ರಯೋಜನ ಪಡೆದ ವ್ಯಕ್ತಿಗಳು ದೂಷಿಸುವರು. ಪರಿಸ್ಥಿತಿ ಭಾವುಕರನ್ನಾಗಿ ಮಾಡಲಿದೆ. ಮಾನಸಿಕ ನೋವನ್ನು ಮರೆಯಲು ಪ್ರೀತಿಪಾತ್ರರೊಂದಿಗೆ ಮಾತನಾಡುವಿರಿ. ವಾಹನಚಾಲನೆಯಲ್ಲಿ ಮುತುವರ್ಜಿ ವಹಿಸಿ.
  • ಧನು
  • ಲೆಕ್ಕಪತ್ರಗಳನ್ನು ಸರಿಯಾಗಿ ಪರಿಶೀಲಿಸಿ ಸಹಿ ಮಾಡಿ. ಆಭರಣವನ್ನು ಕೊಳ್ಳುವ ಬಗ್ಗೆ ಯೋಚಿಸಿ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಕೊಳ್ಳುವಿರಿ. ಸಿದ್ಧ ಉಡುಪು ಮಾರಾಟಗಾರರಿಗೆ ವಿಶೇಷ ಲಾಭ .
  • ಮಕರ
  • ಎಷ್ಟೇ ಪ್ರಯತ್ನವಿದ್ದರೂ ಮೊದಲನೇ ಬಾರಿ ವಿಘ್ನವೇ ಸಂಭವಿಸಲಿದೆ. ನಂತರ ಗುರಿ ಸಾಧಿಸಬೇಕಿದ್ದಲ್ಲಿ ಜನರೊಂದಿಗೆ ಹೆಚ್ಚಿನ ಸಂಪರ್ಕ ಬೆಳೆಸಿಕೊಳ್ಳುವುದು ಉತ್ತಮ. ಅಗ್ನಿಯಿಂದ ಅಪಾಯವಾಗುವ ಭೀತಿ ಇದೆ. ಜಾಗ್ರತೆವಹಿಸಿ.
  • ಕುಂಭ
  • ಹವ್ಯಾಸಿ ಕಲಾವಿದರಾದ ನೀವು ಕತೆ, ಕವನಗಳ ಬರವಣಿಗೆಯಲ್ಲಿ ಸಮಯ ಕಳೆಯುವಿರಿ. ಉನ್ನತ ಅಧಿಕಾರಿಗಳ ಮೇಲೆ ಇದ್ದ ತಪ್ಪು ತಿಳಿವಳಿಕೆಗಳು ದೂರಾಗಲಿವೆ. ಪ್ರಶಸ್ತಿ ಗೆಲ್ಲುವಂಥ ಚಿತ್ರ ಸೆರೆಹಿಡಿಯುವ ಅವಕಾಶ ಸಿಗಲಿದೆ.
  • ಮೀನ
  • ಧನಾಗಮನಕ್ಕೆ ಹಲವು ರೀತಿಯ ಅವಕಾಶಗಳು ಇದ್ದರೂ ಪರಿಶ್ರಮ, ಆತ್ಮವಿಶ್ವಾಸದ ಅಗತ್ಯವಿರುತ್ತದೆ. ಸಹಾಯಕರಲ್ಲಿ ಕೆಲಸ ಮಾಡಿಸಿಕೊಳ್ಳುವ ಬದಲು ಸ್ವಂತವಾಗಿ ಕೆಲಸ ಮಾಡುವುದು ಉತ್ತಮವೆಂದು ಅನಿಸಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.