ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗಕ್ಕಾಗಿ ನಡೆಸಿದ ಪ್ರಯತ್ನ ಈ ದಿನ ಫಲ ನೀಡಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 26 ಜುಲೈ 2025, 23:30 IST
Last Updated 26 ಜುಲೈ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಉದ್ಯೋಗಕ್ಕಾಗಿ ನಡೆಸಿದ ಪ್ರಯತ್ನ ಈ ದಿನ ಫಲ ನೀಡಲಿದೆ. ಕೃಷಿಕರಿಗೆ ಹೆಚ್ಚಿನ ಬೆಳೆ ಕೈ ಸೇರುವ ನಿರೀಕ್ಷೆ ಇದೆ. ಸಹೋದರರಲ್ಲಿನ ಕೋರ್ಟು ವ್ಯವಹಾರಗಳನ್ನು ರಾಜಿ ಸಂಧಾನ ಮೂಲಕ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿ.
  • ವೃಷಭ
  • ಕಿರಿಯರಿಗಾಗಿ ಹೆಚ್ಚಿನ ಖರ್ಚು– ವೆಚ್ಚಗಳು ಮಾಡುವಿರಿ. ಈ ದಿನ ಒಂದು ವಿಚಾರವನ್ನು ಆಳವಾದ ಅಧ್ಯಯನ ನಡೆಸಿ, ನಂತರದಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ರೋಗಬಾಧೆಯಿಂದ ಮುಕ್ತಿ ಸಿಗಲಿದೆ.
  • ಮಿಥುನ
  • ನಿಮ್ಮ ಕರ್ತವ್ಯದಲ್ಲಿ ಜವಾಬ್ದಾರಿಯ ಕೊರತೆ ಮೇಲಧಿಕಾರಿಗಳಿಗೆ ಎದ್ದು ಕಾಣಲಿದೆ. ವ್ಯಾಪಾರದ ವಿಚಾರದಲ್ಲಿ ಗಂಭೀರ ಚರ್ಚೆ ನಡೆಯುವುದು. ವಸ್ತ್ರ ವಿನ್ಯಾಸಗಾರರಿಗೆ ವಿಶೇಷವಾದ ಪರಿಣಿತಿಯು ಅಗತ್ಯವೆನಿಸಲಿದೆ.
  • ಕರ್ಕಾಟಕ
  • ಪೆಟ್ರೋಲಿಯಂ ಉತ್ಪನ್ನಗಳಿಂದ ಹೆಚ್ಚಿನ ಆದಾಯವಿದೆ. ಕೌಟುಂಬಿಕ ವಿಷಯಗಳತ್ತ, ಅದರಲ್ಲೂ ಮಡದಿಯ ಆರೋಗ್ಯದ ವಿಚಾರದಲ್ಲಿ ಹೆಚ್ಚು ಗಮನ‌ ನೀಡಿ. ಮಾನಸಿಕವಾಗಿ ಕುಗ್ಗದೇ ಧೈರ್ಯವಾಗಿರಿ.
  • ಸಿಂಹ
  • ಸಮಸ್ಯೆಗಳು ಬಗೆಹರಿಯುವುದು. ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿರುವವರಿಗೆ ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಆದಾಯವಿದೆ. ಹೆಚ್ಚಿನ ಪರಿಶ್ರಮದಿಂದ ಕೊರತೆಯನ್ನು ಹೋಗಲಾಡಿಸಿಕೊಳ್ಳಬಹುದು.
  • ಕನ್ಯಾ
  • ಮದುವೆ ಮುಂತಾದ ವಿಷಯಗಳತ್ತ ಗಮನಹರಿಸುವಂತೆ ಒತ್ತಡ ಬರಲಿದೆ. ಅಲಂಕಾರಿಕ ವಸ್ತುಗಳಿಗಾಗಿ ಹೆಚ್ಚು ಹಣ ವಿನಿಯೋಗಿಸುವಿರಿ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಉತ್ತೇಜನ ದೊರೆಯುವುದು.
  • ತುಲಾ
  • ಪ್ರಾಚಾರ್ಯರಿಗೆ ಮತ್ತು ಸಲಹೆಗಾರರಿಗೆ ಹೆಚ್ಚಿನ ಅವಕಾಶಗಳು ಬರುವವು. ಸಹೋದರನ ವ್ಯಾಪಾರ ವಹಿವಾಟುಗಳ ವಿಚಾರಗಳಿಗೆ ಅಡ್ಡಿ ಮಾಡುವ ಬದಲು ಉತ್ತಮ ಸಲಹೆಗಳನ್ನು ನೀಡಿ.
  • ವೃಶ್ಚಿಕ
  • ಹೂಡಿಕೆ ವಿಚಾರದಲ್ಲಿ ಆಳವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಮಿತ್ರರಿಂದ ಸಲಹೆ ಬರುವುದು. ವೈವಾಹಿಕ ಜೀವನದಲ್ಲಿ ನೆಮ್ಮದಿ ಕಂಡು ಬರಲಿದೆ. ನವ ದಂಪತಿಗಳಿಗೆ ಸಂತಾನ ಫಲ.
  • ಧನು
  • ದೈವಾನುಗ್ರಹದಿಂದ ಸಾಹಸ ಕಾರ್ಯಗಳು ಕೈಗೂಡಿ ಬಹುಮಟ್ಟಿಗೆ ನಿರೀಕ್ಷಿತ ಫಲ ಲಭಿಸಲಿದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮೇಲುಗೈ ಸಾಧಿಸುವಿರಿ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಉಂಟಾಗಬಹುದು.
  • ಮಕರ
  • ಪ್ರಿಯ ವ್ಯಕ್ತಿಯೊಂದಿಗೆ ವಿಚಾರ ವಿನಿಮಯ ಸೂಕ್ತ ರೀತಿಯಲ್ಲಿ ಮಾಡಿಕೊಳ್ಳುವಿರಿ. ಭೂ ವ್ಯವಹಾರಗಳಿಂದ ಲಾಭ. ಇಂದು ಪಾಲುದಾರಿಕೆಯಂತಹ ವ್ಯವಹಾರದಲ್ಲಿ ತೀರ್ಮಾನ, ಒಪ್ಪಂದ ಕಾರ್ಯಗಳು ಸರಿಯಲ್ಲ.
  • ಕುಂಭ
  • ವೈಯಕ್ತಿಕ ವಿಚಾರಗಳಲ್ಲಿ ಸಣ್ಣ ಪುಟ್ಟ ಬದಲಾವಣೆಯಿಂದ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಗುರುಗಳ ಅನುಗ್ರಹದಿಂದ, ಹಿರಿಯರ ಉತ್ತೇಜನದಿಂದಾಗಿ ಕೆಲಸ ಕಾರ್ಯಗಳಲ್ಲಿ ಜಯ ಲಭಿಸುವುದು.
  • ಮೀನ
  • ನಿರುದ್ಯೋಗಿಗಳು ಹಂಗಾಮಿ ನೌಕರಿಯ ಬಗ್ಗೆ ಅಲೋಚಿಸುವುದು ಉತ್ತಮ. ಧನ ಆದಾಯಕ್ಕೆ ಯಾವುದೇ ಅಡ್ದಿಗಳು ಇರುವುದಿಲ್ಲ ಹಾಗೆಯೇ ವ್ಯಯವೂ ಸಹ ಅನಿವಾರ್ಯವಾಗುವುದು. ಮಹಾಲಕ್ಷ್ಮಿಯನ್ನು ಆರಾಧಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.