ADVERTISEMENT

ದಿನ ಭವಿಷ್ಯ: ಹಿಂದೆ ಆರಂಭ ಮಾಡಿದ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ

ಶುಕ್ರವಾರ, 26 ಜನವರಿ 2024

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 25 ಜನವರಿ 2024, 19:30 IST
Last Updated 25 ಜನವರಿ 2024, 19:30 IST
   
ಮೇಷ
  • ಹಿಂದೆ ಆರಂಭ ಮಾಡಿದ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಪಾಠದ ರೂಪದಲ್ಲಿ ಮಗನಿಗೆ ಹೇಳುವ ಅನಿವಾರ್ಯತೆ ಸನ್ನಿವೇಶ ಎದುರಾಗುವುದು.
  • ವೃಷಭ
  • ಉದ್ಯೋಗದ ಸಂದರ್ಶನದಲ್ಲಿ ಧೈರ್ಯದಿಂದ ಮುನ್ನುಗಿ, ಶುಭಫಲವನ್ನು ಹೊಂದುವಿರಿ. ಗುಣಾತ್ಮಕ ಕಾರ್ಯಗಳಿಗೆ ಮಹತ್ವ ನೀಡುವುದು ಉತ್ತಮ ಈ ದಿನ ನಿಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬೇಡಿ.
  • ಮಿಥುನ
  • ರಕ್ತದ ಒತ್ತಡ, ಮೂತ್ರ ಸಂಬಂಧದ ದೋಷಗಳ ಬಗ್ಗೆ ಜಾಗ್ರತೆ ವಹಿಸಿ. ಅನಿರೀಕ್ಷಿತ ಪ್ರಯಾಣವು ಬದುಕಿನ ಹೊಸ ದಾರಿಗೆ ಕಾರಣವಾಗಲಿದೆ. ಸಂಜೆ ಅಚ್ಚರಿಯ ಸುದ್ದಿಯೊಂದನ್ನು ಕೇಳಲಿರುವಿರಿ.
  • ಕರ್ಕಾಟಕ
  • ಕೋರ್ಟಿನ ಕೆಲಸಗಳನ್ನು ತ್ವರಿತಗತಿಯಲ್ಲಿ ನಡೆಸಿಕೊಡುವಂತೆ ವಕೀಲರಲ್ಲಿ ಕೇಳಿಕೊಳ್ಳುವುದು ಉತ್ತಮ. ಸಾಫ್ಟ್‌ವೇರ್‌ ಕ್ಷೇತ್ರದ ಉದ್ಯೋಗಿಗಳಿಗೆ ಉನ್ನತಸ್ಥಾನ ಸಿಗಲಿದೆ. ಬಿಳಿ, ಕೆಂಪು ಬಣ್ಣ ಶುಭ ತರಲಿದೆ.
  • ಸಿಂಹ
  • ದೇಹಕ್ಕೆ ಅವಶ್ಯಕತೆ ಇರುವಷ್ಟು ನಿದ್ದೆಯನ್ನು, ವಿಶ್ರಾಂತಿಯನ್ನು ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸ್ನೇಹ ಸಂಬಂಧಗಳು ಗಟ್ಟಿಯಾಗಿ ಸಹಕಾರಗಳು ನಿರೀಕ್ಷೆಗೆ ಮೀರಿ ಬರಲಿದೆ.
  • ಕನ್ಯಾ
  • ಅಭಿವೃದ್ಧಿಗೆ ಪೂರಕವಾದ ಹೊಸ ಅವಕಾಶಗಳ ಬಾಗಿಲು ತೆರೆಯಲಿದೆ, ಈ ದಿನ ನಿಯೋಜಿತ ಕೆಲಸಗಳನ್ನು ಅಕ್ಕರೆಯಿಂದ ಒಪ್ಪಿಕೊಳ್ಳಿ, ಮತ್ತೊಂದು ಹೊಸ ಕೆಲಸ ನಿಮಗಾಗಿ ಕಾದಿರುವುದು. ಹಣದ ಚಿಂತೆ ಇರುವುದಿಲ್ಲ.
  • ತುಲಾ
  • ಹೊಲದ ಅಥವಾ ಜಮೀನಿನ ಕೆಲಸಕ್ಕೆ ಆಳನ್ನು ಗೊತ್ತು ಮಾಡಿಕೊಳ್ಳುವುದು ಉತ್ತಮ. ಪೊಲೀಸ್‌ ಅಧಿಕಾರಿಗಳಿಗೆ ಅಧಿಕ ಕೆಲಸದ ಒತ್ತಡ ಇರಲಿದೆ. ಕಾರ್ಯಸಾಧನೆಗಾಗಿ ವಾಮಮಾರ್ಗವನ್ನು ಬಳಸಬೇಡಿ.
  • ವೃಶ್ಚಿಕ
  • ವಾದ ಮಾಡುವ ಅಭ್ಯಾಸದಿಂದ ಸಂಬಂಧಗಳನ್ನು ಹಾಳುಮಾಡಿಕೊಳ್ಳುವ ಲಕ್ಷಣಗಳು ಕಂಡುಬರಲಿದೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಏಕಾಗ್ರತೆ ಅನಿವಾರ್ಯ. ಕಬ್ಬಿಣ ಹಾಗೂ ಸಿಮೆಂಟ್ ವ್ಯಾಪಾರಸ್ಥರಿಗೆ ಲಾಭ.
  • ಧನು
  • ಅಮೂಲ್ಯ ವಸ್ತುವಿನ ಅಗಲಿಕೆಯು ಅಥವಾ ಕಾಣೆಯಾಗುವಿಕೆಯು ನಿಮ್ಮ ಮನಸ್ಸಿಗೆ ದೊಡ್ಡ ಗಾಯವನ್ನು ಮಾಡುತ್ತದೆ. ಆತಂಕ ತುಂಬಿದ ಕೆಲಸಕಾರ್ಯದಲ್ಲಿರುವವರ ಮನೆಯಲ್ಲಿ ನೆಮ್ಮದಿ ತುಂಬುವುದು.
  • ಮಕರ
  • ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ ಷೇರು ಕೊಳ್ಳವ ಯೋಜನೆಗೆ ಮುಂದಾಗಿ. ಜಮೀನಿನ ಕೆಲಸಗಳು ಯಾವುದೇ ತೊಂದರೆ ಇಲ್ಲದೆ ನೆರವೇರಲಿವೆ. ಮಾನಸಿಕವಾಗಿ ಗೊಂದಲಗಳಿರುವುದು.
  • ಕುಂಭ
  • ರಾಜಕಾರಣಿಗಳಿಗೆ ಮತ್ತು ಸರ್ಕಾರಿ ನೌಕರರಿಗೆ ಈ ದಿನ ಸುಯೋಗವೆಂದು ಹೇಳಬಹುದು. ಆಹಾರ ಪದಾರ್ಥದ ಬೆಳೆಯನ್ನು ಬೆಳೆದ ಕೃಷಿಕರಿಗೆ ಉತ್ತಮ ಲಾಭ ಸಿಗುವುದು. ಮಕ್ಕಳು ನಿಮಗೆ ಸಂತಸ ತರಲಿದ್ದಾರೆ.
  • ಮೀನ
  • ಪ್ರೀತಿಯ ವಿಷಯವನ್ನು ಸಂಬಂಧಪಟ್ಟವರ ಮುಂದಿಡುವುದು ಲೇಸು, ನಾಳೆ ಎನ್ನುವುದು ಈ ವಿಷಯದಲ್ಲಿ ಸೂಕ್ತವಲ್ಲ. ಮೀನ-ಮೇಷ ಎಣಿಸದೆ ನಿಮ್ಮ ಕಾರ್ಯ ತಂತ್ರಗಳನ್ನು ರೂಪಿಸಿಕೊಳ್ಳಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.