ADVERTISEMENT

ದಿನ ಭವಿಷ್ಯ: ನಿರುದ್ಯೋಗಿಗಳಿಗೆ ಉತ್ತಮ ಕೆಲಸ ದೊರೆಯಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 9 ಜೂನ್ 2025, 0:11 IST
Last Updated 9 ಜೂನ್ 2025, 0:11 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಮನುಷ್ಯ ಪ್ರಯತ್ನದ ಜತೆ ದೇವರ ಮೊರೆ ಹೋಗುವುದರಿಂದ ಕಾರ್ಯ ಸಿದ್ಧಿಯಾಗಲಿದೆ. ಎದುರಾಳಿಗಳು ಮರುಪ್ರಶ್ನೆಯನ್ನು ಮಾಡಲಾಗದಂಥ ಮಾತುಗಳನ್ನು ಆಡುವಿರಿ. ಉದ್ಯೋಗದ ಗೆಲುವು ನಿಮ್ಮದೆ ಆಗಿರುತ್ತದೆ.
  • ವೃಷಭ
  • ಕೆಲ ಯೋಜನೆಗಳನ್ನು ಹೊರತುಪಡಿಸಿದರೆ ಎಲ್ಲವೂ ಸಾಂಗವಾಗಿ ನೆರವೇರುತ್ತವೆ. ನಿಮ್ಮ ವಾಕ್ಪಟುತ್ವವು ಸರಿಯಾದ ಸಮಯಕ್ಕೆ ಸಹಾಯಕ್ಕೆ ಬರಲಿದೆ.
  • ಮಿಥುನ
  • ಮನೆಯನ್ನು ನಿರ್ಮಾಣ ಮಾಡುವ ಅಥವಾ ನವೀಕರಿಸುವಂತಹ ಆಲೋಚನೆಯಲ್ಲಿ ತೊಡಗುವಿರಿ. ಅಂತರಾತ್ಮದ ಮಾತನ್ನು ಕೇಳುವುದರಿಂದ ಶ್ರೇಯಸ್ಸು ಉಂಟಾಗುತ್ತದೆ. ಸಣ್ಣ ಕೈಗಾರಿಕೆ ಉದ್ಯಮಿಗಳಿಗೆ ಲಾಭವಿದೆ.
  • ಕರ್ಕಾಟಕ
  • ಮೇಲಧಿಕಾರಿಗಳಲ್ಲಿ ವೇತನ ಹೆಚ್ಚಳದ ಬಗ್ಗೆ ಮನೋಭಿಲಾಷೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ. ಪುಸ್ತಕ ಮುದ್ರಣಾಲಯದವರಿಗೆ ಅಥವಾ ಪುಸ್ತಕದ ವ್ಯಾಪಾರಿಗಳಿಗೆ ಒಳ್ಳೆಯ ಲಾಭ.
  • ಸಿಂಹ
  • ಸ್ವ ಉದ್ಯೋಗಿಗಳಿಂದ ಅಪೇಕ್ಷೆಯ ರೀತಿಯಾಗಿ ಧನಸಹಾಯ ಸಿಗಲಿದೆ. ಕಾನೂನಿನ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುವ ಅವಕಾಶ ಒದಗಲಿದೆ. ಪ್ರಯಾಣದಲ್ಲಿ ವಿಳಂಬವಾಗುತ್ತದೆ.
  • ಕನ್ಯಾ
  • ಆಡಳಿತ ಕೆಲಸಗಳಿಗೆ ಸೂಕ್ತ ವ್ಯಕ್ತಿಯನ್ನು ತಿಳಿಸುವಂತೆ ಪರಿಚಿತರಲ್ಲಿ ಕೇಳಿಕೊಳ್ಳುವುದರಿಂದ ಸುಲಭವಾಗಿ ಫಲ ಸಿಗುವುದು. ರಾಜಕೀಯ ವ್ಯಕ್ತಿಗಳಿಗೆ ಓಡಾಟ ಹೆಚ್ಚಲಿದೆ. ಶುಭಕ್ಕಾಗಿ ದುರ್ಗಾಪರಮೇಶ್ವರಿಯನ್ನು ಆರಾಧಿಸಿ.
  • ತುಲಾ
  • ವ್ಯವಸ್ಥಿತವಾಗಿ ದಿನಚರಿ ರೂಪಿಸಿಕೊಂಡರೆ ಈಗಾಗಲೇ ಆರಂಭಿಸಿರುವ ಯೋಜನೆಗಳು ಸಂಪೂರ್ಣ ಶುಭಫಲದೊಂದಿಗೆ ಪೂರ್ಣಗೊಳ್ಳಲಿವೆ. ಚಲನಚಿತ್ರ ಯಶಸ್ವಿಗೊಂಡು ಲಾಭ ಗಳಿಸುವಂತೆ ಆಗುವುದು.
  • ವೃಶ್ಚಿಕ
  • ಅಭಿಪ್ರಾಯಗಳಿಗೆ ಮನ್ನಣೆ ಇದೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಂಡು ಹಿತವಚನಗಳನ್ನು ಹೇಳಲು ಮುಂದುವರಿಯಿರಿ. ನ್ಯಾಯಾಧೀಶರಿಗೆ ಅನಿವಾರ್ಯದ ಸಂದರ್ಭ ಎದುರಾಗಲಿದೆ.
  • ಧನು
  • ಮನೆಯಲ್ಲಿ ಶಾಂತ ವಾತಾವರಣವಿದ್ದು , ನಿಧಾನಗತಿಯ ಕಾರ್ಯಗಳು ಚುರುಕಾಗಿ ಮನಸ್ಸಿಗೆ ತುಸು ನೆಮ್ಮದಿ ಬರುವುದು. ಜಮೀನು ಕೊಡು ಕೊಳ್ಳುವಿಕೆ ವ್ಯವಹಾರಗಳು ಹೆಚ್ಚಲಿವೆ. ಅದರಲ್ಲಿ ಲಾಭವಾಗುವುದು.
  • ಮಕರ
  • ಕೌಟುಂಬಿಕವಾಗಿ ತೀರ್ಮಾನ ತೆಗೆದುಕೊಳ್ಳುವ ವಿಚಾರದಲ್ಲಿ ಏಕಮುಖವಾದ ನಿರ್ಧಾರವಾಗಲಿ, ಆತುರವಾಗಲಿ ಬೇಡ. ಸಿಹಿತಿಂಡಿ ವ್ಯಾಪಾರಿಗಳಿಗೆ ಲಾಭದ, ನಷ್ಟದ ಮಿಶ್ರಫಲ ಅನುಭವಕ್ಕೆ ಬರಲಿದೆ.
  • ಕುಂಭ
  • ಬರಬೇಕಾಗಿದ್ದ ಹಣಕ್ಕೆ ತುಸು ಅಡಚಣೆಗಳನ್ನು ನಿವಾರಿಸಿಕೊಳ್ಳಬೇಕಾಗುವುದು. ಉದ್ಯೋಗದಲ್ಲಿ ಸಮಾಧಾನ ಸಿಗದಿದ್ದರೂ ಆರ್ಥಿಕವಾಗಿ ತೊಂದರೆಗಳಾಗುವುದಿಲ್ಲ. ನಿರುದ್ಯೋಗಿಗಳಿಗೆ ಉತ್ತಮ ಕೆಲಸ ದೊರೆಯಲಿದೆ.
  • ಮೀನ
  • ಬಂಧುಮಿತ್ರರೊಂದಿಗೆ ಸಂತೋಷ ವಿಷಯಗಳನ್ನು ಹಂಚಿ ಕೊಳ್ಳುವುದು ಸರಿಯಲ್ಲ. ದಿನಗೂಲಿ ಕಾರ್ಮಿಕ ವರ್ಗದವರಿಗೆ ಪರಿಶ್ರಮದಿಂದ ಆದಾಯ ಸಿಗಲಿದೆ. ಸರ್ಕಾರಿ ಕೆಲಸಗಳಲ್ಲಿ ಅಡೆತಡೆ ಎದುರಾಗಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.