ADVERTISEMENT

ದಿನ ಭವಿಷ್ಯ: ಜೀವನ ಶೈಲಿಯಲ್ಲಿ ಸಮತೋಲಿತ ದಿನಚರಿಯನ್ನು ಅನುಸರಿಸುವುದು ಒಳ್ಳೆಯದು

ಪ್ರಜಾವಾಣಿ ವಿಶೇಷ
Published 14 ಅಕ್ಟೋಬರ್ 2023, 23:00 IST
Last Updated 14 ಅಕ್ಟೋಬರ್ 2023, 23:00 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಮಿತ್ರರೊಡಗೂಡಿ ಸಣ್ಣಮಟ್ಟದ ಉತ್ಪಾದನಾ ಘಟಕ ಪ್ರಾರಂಭಿಸುವ ಯೋಚನೆ ಬರಲಿದೆ. ಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹ ಯೋಗ. ಕುಟುಂಬದಲ್ಲಿ ಸಂತೋಷದ ವಾತಾವರಣ ನಿಮ್ಮಿಂದ ಸೃಷ್ಟಿಯಾಗಲಿದೆ.
  • ವೃಷಭ
  • ನಿಮ್ಮ ನಿಲುವನ್ನು ಬದಲಿಸಿಕೊಳ್ಳುವುದರಿಂದ ಎಲ್ಲರ ಪ್ರೀತಿಗೆ ಪಾತ್ರರಾಗುತ್ತೀರಿ. ಮದುವೆಗೆ ಇರುವ ಅಡಚಣೆ, ಸಮಸ್ಯೆ ಬಗೆಹರಿಸಿಕೊಳ್ಳುವ ಬಗ್ಗೆ ಗಮನಹರಿಸಿ. ನಿಮ್ಮ ತಂಡವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುತ್ತೀರಿ.
  • ಮಿಥುನ
  • ಬೇರೆಯವರ ಸಹಾಯ ಪಡೆಯದೇ ನಿಮ್ಮ ಶ್ರಮದಿಂದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಲಾಭದಾಯಕ. ಪ್ರಾಮಾಣಿಕ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ ಇರಲಿದೆ.
  • ಕರ್ಕಾಟಕ
  • ಜೀವನ ಶೈಲಿಯಲ್ಲಿ ಸಮತೋಲಿತ ದಿನಚರಿಯನ್ನು ಅನುಸರಿಸುವುದು ಒಳ್ಳೆಯದು. ಜಟಿಲವಾದ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಕ್ತ ಸಲಹೆಯನ್ನು ಮಾರ್ಗದರ್ಶಕರಲ್ಲಿ ಕೇಳಿ ತಿಳಿಯುವುದು ಉತ್ತಮ.
  • ಸಿಂಹ
  • ಬಹುಕಾಲದಿಂದ ಅನುಭವಿಸುತ್ತಿರುವ ರೋಗಬಾಧೆ ಹಂತಹಂತವಾಗಿ ಚೇತರಿಕೆಯ ಮೆಟ್ಟಿಲನ್ನು ನೋಡಲಿದೆ. ಸಿಹಿ ಪದಾರ್ಥಗಳ ತಯಾರಿಕರಿಗೆ ಹೆಸರಾಂತ ಸಂಸ್ಥೆಯಲ್ಲಿ ಕೆಲಸ ಮಾಡುವ ಕಾಲ ಒದಗಿಬರಲಿದೆ.
  • ಕನ್ಯಾ
  • ನಿಮ್ಮ ಪ್ರಿಯಕರನಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು ಸೂಕ್ತವಾದ ಸಮಯ. ನಿಮ್ಮ ಯೋಜನೆಗಳು ಕಾರ್ಯಗತಗೊಳ್ಳುವುದರ ಬಗ್ಗೆ ಶನೈಶ್ಚರನಲ್ಲಿ ಪೂಜೆ ಪ್ರಾರ್ಥನೆ ನೆಡೆಸಿ. ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳುವುದು.
  • ತುಲಾ
  • ಸಮಾರಂಭದಲ್ಲಿ ಭಾಗವಹಿಸುವುದರಿಂದ ಮಗನ ಮದುವೆಯ ವಿಚಾರದಲ್ಲಿ ಅನುಕೂಲವಾಗುವುದು. ರಾಜಕೀಯ ವ್ಯಕ್ತಿಗಳಿಂದ ವೈಯಕ್ತಿಕ ಅನುಕೂಲ ಆಗುವ ಲಕ್ಷಣಗಳಿದೆ. ನಿಮ್ಮಲ್ಲಿ ಸಾಮಾಜಿಕವಾದ ಕಳಕಳಿ ಹೆಚ್ಚಲಿದೆ.
  • ವೃಶ್ಚಿಕ
  • ಮನೆಯಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಆದರಿಂದಾಗಿ ಮನೆಯ ವಾತಾವರಣ ಸರಿಯಾಗಿರುವುದು. ನಿಮ್ಮ ಶ್ರಮದ ದುಡಿಮೆಗೆ ಉತ್ತಮ ಫಲ ದೊರೆಕುವುದು.
  • ಧನು
  • ಕೆಲವೊಂದು ಸಮಸ್ಯೆಗಳಿಗೆ ಪೊಲೀಸರಿಂದ ಪರಿಹಾರ ತೆಗೆದುಕೊಳ್ಳುವುದು ಉತ್ತಮ ಮತ್ತು ಅನಿವಾರ್ಯ ಎಂದು ಅನಿಸಲಿದೆ. ಸಹಕಾರಿ ರಂಗದಲ್ಲಿನ ವ್ಯಕ್ತಿಗಳಿಗೆ ಶುಭ ದಿನ. ಸಂತಾನದ ಸುದ್ದಿ ಆನಂದ ತರಲಿದೆ.
  • ಮಕರ
  • ಹಲವು ದಿನದ ಬಿಡುವಿಲ್ಲದ ಕೆಲಸದಿಂದ ಬಳಲಿರುವ ನೀವು ವಿಶ್ರಾಂತಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡುವುದು ಉತ್ತಮ. ಸ್ಥಗಿತಗೊಂಡ ಕಟ್ಟಡದ ಕೆಲಸಗಳು ಪೂರ್ತಿಗೊಂಡು ಮನಸ್ಸಿಗೆ ಸಮಾಧಾನ ಆಗುವುದು.
  • ಕುಂಭ
  • ಅಚ್ಚರಿಯ ಸುದ್ದಿ ಅನ್ಯರ ಮೂಲಕ ತಿಳಿಯಲಿದೆ. ಅದನ್ನು ಯಾರಲ್ಲೂ ಹೇಳಿಕೊಳ್ಳದೇ ಇರುವುದು ಉತ್ತಮ. ಕೆಲಸದ ನಿಮಿತ್ತ ದೂರದ ಊರಿಗೆ ತೆರಳಬೇಕಾಗಬಹುದು. ಆಸೆ ನಿರಾಸೆಯಾಗುವ ಲಕ್ಷಣಗಳಿವೆ.
  • ಮೀನ
  • ಗೆಲುವು ಸಾಧಿಸಲು ವಿವೇಚನೆ ಅಗತ್ಯವೆನ್ನುವುದನ್ನು ಮರೆಯದಿರಿ. ಇಷ್ಟದ ಕೆಲಸ ಈಡೇರಿಸಿಕೊಳ್ಳಲು ಹಿರಿಯರ ಮನ ಒಲಿಸಬೇಕಾಗುವುದು. ವಿದ್ಯುತ್ ಉಪಕರಣಗಳ ಮಾರಾಟಗಾರರಿಗೆ ಹೆಚ್ಚಿನ ವ್ಯಾಪಾರ ಇರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.