ADVERTISEMENT

ದಿನ ಭವಿಷ್ಯ: ಜೂನ್ 20 ಶುಕ್ರವಾರ 2025– ವಿಮಾ ಏಜೆಂಟ್‌ಗಳಿಗೆ ಸಂತಸದ ಸುದ್ದಿ

ದಿನ ಭವಿಷ್ಯ: ಜೂನ್ 20 ಶುಕ್ರವಾರ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ಜೂನ್ 2025, 18:31 IST
Last Updated 19 ಜೂನ್ 2025, 18:31 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಆಪ್ತ ವಲಯದಲ್ಲಿಟ್ಟ ನಂಬಿಕೆಯು ಸುಳ್ಳಾಗುವ ಸಂದರ್ಭ ಬರಬಹುದು. ಎಚ್ಚರಿಕೆಯಿಂದಿರಿ. ಸೌಂದರ್ಯವರ್ಧಕ ವಸ್ತುಗಳ ತಯಾರಕರಿಗೆ ಮತ್ತು ಮಾರಟಗಾರರಿಗೆ ಲಾಭ ಉಂಟಾಗುತ್ತದೆ.
  • ವೃಷಭ
  • ಹೊಸ ವೃತ್ತಿಯಲ್ಲಿ ಓಡಾಟದ ಕೆಲಸವು ದೇಹಕ್ಕೆ ಆಯಾಸ ಉಂಟುಮಾಡುತ್ತದೆ. ಆರಂಭದ ಅಭ್ಯಾಸದ ಹಂತದಲ್ಲಿರುವ ವೈದ್ಯರು ತಪ್ಪುಗಳು ಸಂಭವಿಸದಂತೆ ಜಾಗ್ರತೆವಹಿಸಿ.
  • ಮಿಥುನ
  • ಹಳಿ ತಪ್ಪಿದ ಕಾರ್ಯಗಳನ್ನು ಪುನಃ ಸರಿಯಾದ ಮಾರ್ಗಕ್ಕೆ ತರುವ ಪ್ರಯತ್ನ ನಡೆಸಿದರೆ ಶುಭಫಲ ಪ್ರಾಪ್ತಿ. ವಿಶೇಷ ವ್ಯಕ್ತಿಗಳ ಭೇಟಿ ಸಂತೋಷ ತರುವುದಲ್ಲದೆ, ಯೋಜನೆಗಳಿಗೆ ಚೈತನ್ಯ ತುಂಬುವುದು.
  • ಕರ್ಕಾಟಕ
  • ಭಾವನಾತ್ಮಕ ಸಂಬಂಧಗಳ ಬೆಳವಣಿಗೆ ಉತ್ತಮವಾಗಿ ಕೂಡಿಬರಲಿದೆ. ವ್ಯವಹಾರದಲ್ಲಿ ಕಾರ್ಮಿಕರೊಂದಿಗೆ ಅನುಸರಣೆ ಅಗತ್ಯ. ವ್ಯಾಪಾರದ ಮೂಲ ವಿಚಾರದಲ್ಲಿ, ವ್ಯವಹಾರದಲ್ಲಿ ಗೌಪ್ಯತೆ ಕಾಪಾಡಿ.
  • ಸಿಂಹ
  • ಇಷ್ಟಾರ್ಥಗಳು ಸಿದ್ಧಿಸಲಿವೆ. ಪ್ರಯತ್ನಗಳು ವ್ಯರ್ಥವಾಗದೆ ಸರಿಯಾಗಿ ಫಲಿಸಲು ಮನೆದೇವರ ಹಾಗೂ ಗುರುಹಿರಿಯರ ಆರ್ಶೀವಾದಗಳು ಕಾರಣವಾಗಲಿವೆ. ಸರ್ಕಾರಿ ಹರಾಜಿನಲ್ಲಿ ಲಾಭ ಹೊಂದುವಿರಿ.
  • ಕನ್ಯಾ
  • ಆತ್ಮವಿಶ್ವಾಸವೇ ಶ್ರೀರಕ್ಷೆ. ಜನಸಂಪರ್ಕದಿಂದ ಅದೃಷ್ಟ ಹಾಗೂ ಖ್ಯಾತಿ ಇಮ್ಮಡಿಗೊಳ್ಳುವುದು. ಹಣಕಾಸಿನ ವಿಷಯದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲೇ ಮತ್ತೊಮ್ಮೆ ಯೋಚಿಸುವುದು ಸೂಕ್ತ.
  • ತುಲಾ
  • ದಿನ ಶ್ರಮ ದಿಂದ ಕೂಡಿದ್ದರೂ ವಿರಾಮ ದೊರೆಯುವುದು. ರಕ್ಷಣಾ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಅರ್ಹತೆ ಮತ್ತು ಆಸಕ್ತಿ ಇದ್ದವರಿಗೆ ಆಯ್ಕೆಗೊಳ್ಳುವ ಅವಕಾಶ ಸಿಗಲಿದೆ.
  • ವೃಶ್ಚಿಕ
  • ಬಹಳ ಬೇಗ ಗುರಿ ತಲುಪಬೇಕು ಎಂಬ ಹಂಬಲವು ಸೋಲನ್ನು ತಂದೊಡ್ಡಬಹುದು. ಯೋಚಿಸಿ ಸಾವಕಾಶವಾಗಿ ಕಾರ್ಯಮಗ್ನರಾಗಿ. ಮಾತನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ.
  • ಧನು
  • ವೃತ್ತಿಯಲ್ಲಿ ಸಾಕಷ್ಟು ಪೈಪೋಟಿ ಎದುರಿಸಬೇಕಾಗಬಹುದು. ಜಯಕ್ಕಾಗಿ ಕಠಿಣ ಪರಿಶ್ರಮ ಅಗತ್ಯ. ಜವಳಿ ವ್ಯಾಪಾರಕ್ಕೆ ಪ್ರಚಾರ ಅಗತ್ಯ. ವಿಮಾ ಏಜೆಂಟ್‌ಗಳಿಗೆ ಸಂತಸದ ಸುದ್ದಿ ಬರುವುದು.
  • ಮಕರ
  • ಲಾಭಕ್ಕಾಗಿ ವೃತ್ತಿನಿಷ್ಠೆಯನ್ನು ಬಿಡುವ ತೀರ್ಮಾನ ತೆಗೆದುಕೊಳ್ಳಬೇಡಿ. ಕಲ್ಪನಾಲೋಕದಲ್ಲಿ ವಿಹರಿಸುವುದನ್ನು ಬಿಟ್ಟು ವಾಸ್ತವದ ವಿಚಾರದಲ್ಲಿರಿ. ಈ ದಿನ ಕೈಗಾರಿಕೋದ್ಯಮಿಗಳಿಗೆ ರಫ್ತು ವ್ಯವಹಾರಗಳಿಂದ ಲಾಭ ಬರಲಿದೆ.
  • ಕುಂಭ
  • ಒಡಹುಟ್ಟಿದವರ ನೆರವಿನಿಂದ ಸಾಲ ಮರುಪಾವತಿ ಸಾಧ್ಯ. ಕಾರ್ಯಕ್ಕೆ ಇದ್ದ ಆಡಚಣೆಗಳ ಕಾರಣಗಳು ತಿಳಿದುಬರುವುದು. ಸಂಕಲ್ಪಿತ ಕಾರ್ಯ ನಿರ್ಭೀತಿಯಿಂದ ಮುಂದುವರಿಯಲು ಮಹಾಗಣಪತಿಯನ್ನು ಆರಾಧಿಸಿ.
  • ಮೀನ
  • ತಾಂತ್ರಿಕ ವಿದ್ಯೆಯಲ್ಲಿ ಯಶಸ್ಸು ಲಭಿಸುವುದು. ಕೋರ್ಟು ವ್ಯವಹಾರಗಳು ನಿಮ್ಮದಾಗಲಿವೆ. ತಾನಾಗಿ ಬಂದ ಅವಕಾಶವನ್ನು ಕಳೆದುಕೊಳ್ಳಬೇಡಿ. ಔದ್ಯೋಗಿಕ ಜೀವನದಲ್ಲಿ ಪ್ರಮುಖ ಘಟ್ಟ ಪ್ರವೇಶಿಸುವ ಸಾಧ್ಯತೆ ಇದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.