ADVERTISEMENT

ದಿನ ಭವಿಷ್ಯ: ಜೂನ್ 21 ಶನಿವಾರ 2025– ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳಲಿದೆ

ದಿನ ಭವಿಷ್ಯ: ಜೂನ್ 21 ಶನಿವಾರ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 20 ಜೂನ್ 2025, 18:33 IST
Last Updated 20 ಜೂನ್ 2025, 18:33 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಘಟನೆಯಿಂದಾಗಿ ಸಂಸಾರದ ಜವಾಬ್ದಾರಿ ಹೆಚ್ಚಲಿದೆ. ತೆಂಗಿನಕಾಯಿ, ತೆಂಗಿನ ಎಣ್ಣೆ ವ್ಯಾಪಾರಿಗಳು ಲಾಭ ಪಡೆಯಬಹುದು. ಧಾರ್ಮಿಕ ಗ್ರಂಥಗಳ ಅಧ್ಯಯನ ನಡೆಸುವ ಬಗ್ಗೆ ಆಸಕ್ತಿ ಮೂಡುವುದು.
  • ವೃಷಭ
  • ಮಾಧ್ಯಮ, ಪತ್ರಿಕಾ ವೃತ್ತಿಯಲ್ಲಿರುವವರಿಗೆ ಹೆಸರು ಹಾಗೂ ಕೀರ್ತಿ ಸಂಪಾದಿಸಲು ವೇದಿಕೆ ಸಿಗುತ್ತದೆ. ಕೆಲಸಕ್ಕೆ ಇನ್ನೊಬ್ಬರನ್ನು ಅವಲಂಬಿಸುವ ನಿಮಗೆ ಮಿತ್ರರೊಂದಿಗೆ ಒಡನಾಟ ಹೆಚ್ಚಲಿದೆ.
  • ಮಿಥುನ
  • ಒತ್ತಡ ತರುವ ಕೆಲಸಗಳಿಂದ ದೂರ ಉಳಿದು, ಯೋಜನಾ ಬದ್ಧ ಕೆಲಸ ಹಾಕಿಕೊಳ್ಳಿರಿ. ಪ್ರೀತಿ ವಿಷಯದಲ್ಲಿ ನಿಸ್ಸಂಕೋಚವಾಗಿ ಮಾತನಾಡಿ. ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳಲಿದೆ.
  • ಕರ್ಕಾಟಕ
  • ಸಾಂಸಾರಿಕ ವಿಚಾರದಲ್ಲಿ ಬೇರೆಯವರ ಸಲಹೆಗಳನ್ನು ಕಡೆಗಣಿಸುವುದು. ಬೇರೆಯವರ ಕುಟುಂಬದ ಹೋಲಿಕೆಯನ್ನು ನಿಮ್ಮ ಕುಟುಂಬಕ್ಕೆ ತೆಗೆದುಕೊಳ್ಳದೇ ಇರುವುದು ಒಳ್ಳೆಯದು.
  • ಸಿಂಹ
  • ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಸಂಭವವಿದೆ. ಹೊಸ ವ್ಯವಹಾರದಲ್ಲಿ ಹಣ ತೊಡಗಿಸುವ ತೀರ್ಮಾನಕ್ಕೆ ಬಂದವರಿಗೆ ಮತ್ತೆ ಈ ದಿನ ಗೊಂದಲ ಉಂಟಾಗಲಿದೆ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
  • ಕನ್ಯಾ
  • ಅತ್ಯಾಪ್ತರಿಗಾಗಿ ಉಡುಗೊರೆ ಕೊಡುವ ಸಲುವಾಗಿ ಹುಡುಕುತ್ತಿರುವ ವಸ್ತುವು ಲಭ್ಯವಾಗುವುದು. ಜಾಹೀರಾತುಗಳ ಮೂಲಕ ವಹಿವಾಟನ್ನುಹೆಚ್ಚಿಸಿಕೊಳ್ಳಲು ಪ್ರಯತ್ನವನ್ನು ಮಾಡಬಹುದು.
  • ತುಲಾ
  • ವಿವಾಹದ ಭಾವನೆಗಳನ್ನು ತಂದೆ ತಾಯಿಯ ಬಳಿ ವ್ಯಕ್ತಪಡಿಸಲು ಇದು ಸುಸಮಯ. ಆಭರಣಗಳಿಗಾಗಿ ಹಣ ಖರ್ಚು ಮಾಡುವಿರಿ. ಸಹೋದ್ಯೋಗಿಗಳ ಬೆಂಬಲ ಚೆನ್ನಾಗಿರುತ್ತದೆ.
  • ವೃಶ್ಚಿಕ
  • ಕೆಲಸವನ್ನು ಪೂರೈಸಲು ಮಾಡಿದ ಪ್ರಯತ್ನವು ನೀರಿನಲ್ಲಿ ಹೋಮ ಮಾಡಿದಂತೆ ಆಗದಿರಲು ಮುನ್ನೆಚ್ಚರಿಕೆ ವಹಿಸಿ. ವಾರದ ಸಂಪಾದನೆಯು ಮಕ್ಕಳಿಂದ ಒಂದೇ ದಿನದಲ್ಲಿ ನೀರಿನಂತೆ ಖರ್ಚಾಗಬಹುದು.
  • ಧನು
  • ಬದುಕಿನ ಗತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ವೃತ್ತಿಯಲ್ಲಿ ಕಾರ್ಯನಿರ್ವಹಣೆ ಮೆಚ್ಚುಗೆಗೆ ಪಾತ್ರವಾಗುವುದು. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದೀರಿ.
  • ಮಕರ
  • ಆಸ್ತಿ ಪಾಲುದಾರಿಕೆಯಂಥ ಮಹತ್ತರ ಕಾರ್ಯಗಳಲ್ಲಿ ತಾಳ್ಮೆ ವಹಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ. ಜಾಣನಡೆಯಿಂದಾಗಿ ಬಂಧುಮಿತ್ರರಲ್ಲಿ ವೈಮನಸ್ಸು ಉಂಟಾಗುವುದನ್ನು ತಪ್ಪಿಸಬಹುದು.
  • ಕುಂಭ
  • ಮನೆ ಬದಲಾವಣೆ ವಿಚಾರಗಳು ಚರ್ಚೆಗೆ ಬಂದು ಹಿರಿಯರ ಮಾತಿನಂತೆಯೇ ನಡೆದರೆ ಉತ್ತಮ. ದುಗುಡಗಳು, ಬಿಕ್ಕಟ್ಟಿನ ಪರಿಸ್ಥಿತಿಗಳನ್ನು ಎದುರಿಸುವ ಸಾಮರ್ಥ್ಯಕ್ಕೆ ಕೆಟ್ಟದೃಷ್ಟಿ ತಗುಲಿ ಗೊಂದಲಕ್ಕೆ ಒಳಗಾಗಬಹುದು.
  • ಮೀನ
  • ಉನ್ನತ ವಿದ್ಯಾಭ್ಯಾಸ ನಡೆಸಲು ವಿದೇಶಕ್ಕೆ ಹೋಗಬೇಕೆಂದುಕೊಂಡಿರುವವರಿಗೆ ವಿವಿಧ ರೀತಿಯ ಆಡಚಣೆಗಳು ಉಂಟಾಗುವ ಸಾಧ್ಯತೆ ಇದೆ. ರೇಷ್ಮೆ ವಸ್ತುಗಳ ಮಾರಾಟದಿಂದ ಲಾಭ ಹೊಂದುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.