ADVERTISEMENT

ದಿನ ಭವಿಷ್ಯ: ಜನವರಿ 8 ಸೋಮವಾರ 2024- ಈ ರಾಶಿಯವರಿಗೆ ಇಂದು ಆತಂಕ ದೂರವಾಗುವುದು

ದಿನ ಭವಿಷ್ಯ: ಜನವರಿ 8 ಸೋಮವಾರ 2024

ಪ್ರಜಾವಾಣಿ ವಿಶೇಷ
Published 7 ಜನವರಿ 2024, 18:39 IST
Last Updated 7 ಜನವರಿ 2024, 18:39 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಕಾರ್ಯ ಸಾಧನೆಗೆ ಅನುಕೂಲಕರ ಹಾಗೂ ಲಾಭದಾಯಕವಾದ ವಾತಾವರಣ ಸಿಗುವುದು. ಜಾಹೀರಾತುಗಳ ಮೂಲಕ ವಹಿವಾಟನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಫಲ ಕೊಡಲಿದೆ.
  • ವೃಷಭ
  • ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಅನುಕೂಲ ಗಳಾಗುವ ಸಾಧ್ಯತೆ ಇದೆ. ಮಾನಸಿಕ ಕೊರಗು ನಿಮ್ಮ ಸಂತೋಷಕ್ಕೆ ಭಂಗ ಉಂಟುಮಾಡುವುದು. ಸಂಬಂಧಿಕರಲ್ಲಿ ಹಣದ ವ್ಯವಹಾರ ನಡೆಸಬೇಡಿ.
  • ಮಿಥುನ
  • ದಿನದ ಮೊದಲಾರ್ಧ ನಿಮಗೆ ಸ್ವಲ್ಪಮಟ್ಟಿಗಿನ ಬೇಸರವನ್ನು ತರಬಹುದು. ಆದರೆ ದಿನದ ಕೊನೆಯನ್ನು ಸಂತೋಷದಲ್ಲಿ ಕಳೆಯುತ್ತೀರಿ. ನಿಮ್ಮ ಸಂಪಾದನೆಯನ್ನು ನೋಡಿದ ಕೆಲವರು ಮತ್ಸರಪಡುವಂತಾಗುತ್ತದೆ.
  • ಕರ್ಕಾಟಕ
  • ಸಾಮಾಜಿಕ ವಲಯದಲ್ಲಿ ಬರುವ ಅವಕಾಶಗಳನ್ನು ನಿಮ್ಮತ್ತ ತಿರುಗಿಸಿಕೊಂಡು ಸದುಪಯೋಗಪಡಿಸಿಕೊಳ್ಳುವುದು ನಿಮ್ಮ ಕೈಗೆ ಬಿಟ್ಟ ವಿಷಯ ವಾಗಿರುತ್ತದೆ. ತಲೆ ನೋವಿನಂತಹ ಸಮಸ್ಯೆ ಎದುರಾಗಬಹುದು.
  • ಸಿಂಹ
  • ಪ್ರತಿಷ್ಟಿತ ಮತ್ತು ಪ್ರಭಾವಿ ವ್ಯಕ್ತಿಗಳ ಪರಿಚಯವು ನಿಮ್ಮ ಭವಿಷ್ಯದ ಆಲೋಚನೆಗಳನ್ನು ಉತ್ತಮಗೊಳಿಸಲು ಕಾರಣವಾಗುವುದು. ನಿಮ್ಮ ಕೆಲಸ ಕಾರ್ಯಗಳು ಯಾವುದೇ ಆತಂಕವಿಲ್ಲದೆ ನಡೆಯುವುದು.
  • ಕನ್ಯಾ
  • ಸಾಂಸ್ಕೃತಿಕವಾಗಿ ಅದರಲ್ಲೂ ಮುಖ್ಯವಾಗಿ ನಟನಾ ವೃತ್ತಿಯವರಿಗೆ ಖ್ಯಾತಿ ಮತ್ತು ಸಂಪತ್ತು ಹರಿದು ಬರಲಿದೆ. ಮೋಜು ಮಸ್ತಿಯ ಆಲೋಚನೆಯಿಂದ ದೂರವಿರುವ ಪ್ರಯತ್ನ ಒಳ್ಳೆಯದು. ಅಧ್ಯಾಪಕರಿಗೆ ಹೆಚ್ಚಿನ ಕೆಲಸಗಳು ಇರಲಿವೆ.
  • ತುಲಾ
  • ನೀವೇ ಸ್ವಂತವಾಗಿ ಶುರು ಮಾಡಿದಂತಹ ವ್ಯವಹಾರದಲ್ಲಿ ಲಾಭಗಳಿಸುವ ವಿಚಾರದಲ್ಲಿ ಸ್ವಲ್ಪ ದಿನಗಳ ಮಟ್ಟಿಗೆ ಕಾಯಬೇಕಾಗುವುದು. ಉದ್ಯೋಗದಲ್ಲಿ ಉತ್ತಮ ಹೆಸರು ಗಳಿಸುವ ಪ್ರಯತ್ನಕ್ಕೆ ಶುಭವಾಗುತ್ತದೆ.
  • ವೃಶ್ಚಿಕ
  • ಸದ್ಯದ ಪರಿಸ್ಥಿತಿಯಲ್ಲಿ ಇರುವ ಕೆಲಸ ಬಿಡುವ ಯೋಚನೆ ಸರಿಯಲ್ಲ. ವೈಯಕ್ತಿಕವಾದ ಕಷ್ಟಗಳನ್ನು ಯಾರಲ್ಲಿಯೂ ಹೇಳಿಕೊಳ್ಳಬೇಡಿ. ನಿಮ್ಮ ಈ ದಿನದ ಸಾಧನೆಗೆ ತಾಯಿಯ ಬೆಂಬಲ, ಪ್ರೋತ್ಸಾಹ ಸಿಗುವುದು.
  • ಧನು
  • ಕೆಲಸ ಕಾರ್ಯಗಳ ಬಗ್ಗೆ ಹೆಚ್ಚಿನ ನಿಗಾ ಕೊಡುವಂತೆ ಅಧಿಕಾರಿಗಳಿಂದ ಸಂದೇಶ ಬರಲಿದೆ. ಗೋವಿನ ಉತ್ಪನ್ನಗಳ ಮಾರಾಟಗಾರರಿಗೆ ಹೆಚ್ಚಿನ ಲಾಭ ಬರುವುದು. ಮಗನಿಗಾಗಿ ವೈದ್ಯಕೀಯ ಖರ್ಚು ಸಂಭವಿಸಬಹುದು.
  • ಮಕರ
  • ಆಪ್ತ ಸ್ನೇಹಿತರು ಮತ್ತು ನೆರೆಯವರೊಂದಿಗೆ ಬಾಂಧವ್ಯ ಉತ್ತಮಗೊಳ್ಳುವುದು. ಕೈ ಬಿಟ್ಟಿರುವ ಯೋಜನೆಗಳನ್ನು ಮತ್ತೆ ಮುಂದುವರೆಸಲು ಒತ್ತಡ ಬರಬಹುದು. ಶ್ರೀಮಂತ ಜೀವನವನ್ನು ಮನಸ್ಸು ಹಂಬಲಿಸಲಿದೆ.
  • ಕುಂಭ
  • ಸರ್ಕಾರಿ ವೃತ್ತಿಯವರಿಗೆ ಸ್ಥಾನ ಪಲ್ಲಟನೆಯ ಯೋಗ ಅಥವಾ ನೂತನ ಕ್ಷೇತ್ರದ ಹೊಣೆಗಾರಿಕೆಯನ್ನು ವಹಿಸಬೇಕಾದ ಸ್ಥಿತಿ ಎದುರಾಗಲಿದೆ. ವೃತ್ತಿ ನಿಮಿತ್ತದಲ್ಲಿ ಜೀವನ ಮುನ್ನಡೆಸುವ ಚಿಂತೆ, ಆತಂಕ ದೂರವಾಗುವುದು.
  • ಮೀನ
  • ರಾಜಕೀಯ ಜೀವನದಲ್ಲಿ ನಿಮ್ಮ ಪರಿಸ್ಥಿತಿ ಸುಧಾರಿಸಿಕೊಳ್ಳಲು ಅನುಕೂಲವಾಗುವ ಅವಕಾಶಗಳು ದೊರೆಯಲಿದೆ. ನಿಮ್ಮ ಪ್ರಯತ್ನಕ್ಕೆ ಸರಿಯಾಗಿ ನಿಮ್ಮ ಸಂಪಾದನೆಯನ್ನು ಉಳಿಸಿಕೊಳ್ಳಲು ಅಸಾಧ್ಯವಾಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.