ADVERTISEMENT

ವಾರ ಭವಿಷ್ಯ: ಈ ರಾಶಿಯವರಿಗೆ ಸಂಗಾತಿಯ ಸಹಕಾರ ಬಹಳ ಉತ್ತಮವಾಗಿರುತ್ತದೆ

2025 ಜೂನ್ 29 ರಿಂದ ಜುಲೈ 06ರವರೆಗೆ

ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 28 ಜೂನ್ 2025, 23:30 IST
Last Updated 28 ಜೂನ್ 2025, 23:30 IST
<div class="paragraphs"><p>ವಾರ ಭವಿಷ್ಯ</p><p></p></div>

ವಾರ ಭವಿಷ್ಯ

   
ಮೇಷ
  • ಹಣ ಸಂಪಾದನೆಯ ವಿಷಯದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳುವಿರಿ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಮಧ್ಯವರ್ತಿಗಳಾಗಿ ಕೆಲಸವನ್ನು ಮಾಡುವವರಿಗೆ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಕಾಲ. ಕಾಡುತ್ತಿದ್ದ ರೋಗಗಳು ಈಗ ದೂರವಾಗುತ್ತವೆ. ನೀವು ಅಪೇಕ್ಷೆ‍ಪಡದಿದ್ದರೂ ಸಂಗಾತಿಯ ಸಹಕಾರ ದೊರೆಯುತ್ತದೆ. ಕೃಷಿಯಿಂದ ನಿರೀಕ್ಷೆ ಮಾಡಿದಷ್ಟು ಆದಾಯವಿರುವುದಿಲ್ಲ. ಉದ್ಯೋಗದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ. (ಅಶ್ವಿನಿ ಭರಣಿ ಕೃತಿಕ 1)
  • ವೃಷಭ
  • ಕೆಲವು ವಿಷಯಗಳಲ್ಲಿ ನಿರುತ್ಸಾಹಿಗಳಾಗಿರುವಿರಿ. ಆದಾಯವು ಉತ್ತಮವಾಗಿರುತ್ತದೆ. ಕೃಷಿಭೂಮಿಯನ್ನು ಕೊಳ್ಳುವ ಯೋಗವಿದೆ. ಮಕ್ಕಳಿಂದ ನಿಮ್ಮ ಕೆಲಸಗಳಿಗೆ ಸಹಕಾರ ದೊರೆಯುತ್ತದೆ. ದೇಹದ ಆರೋಗ್ಯದ ಕಡೆಗೆ ಗಮನವಿರಲಿ. ಸೌಂದರ್ಯವರ್ಧಕಗಳಿಂದ ಹಾನಿಯಾಗುವ ಸಾಧ್ಯತೆಗಳಿವೆ. ಸಂಸಾರದಲ್ಲಿ ಕಾವೇರಿದ ಮಾತುಗಳು ಬರಬಹುದು. ಸರ್ಕಾರದಿಂದ ಅನಿರೀಕ್ಷಿತ ಸಹಾಯ ಸಿಗಬಹುದು. ವಿದೇಶದಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
  • ಮಿಥುನ
  • ನೀವು ಎಲ್ಲರಿಂದಲೂ ಗೌರವವನ್ನು ಬಯಸುತ್ತೀರಿ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುವಷ್ಟಿರುತ್ತದೆ. ನಿಮ್ಮ ಮಾತಿನಲ್ಲಿ ಹೆಚ್ಚು ವ್ಯಾವಹಾರಿಕತೆ ಇರುತ್ತದೆ. ಸಹೋದರಿಯರು ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸಬಹುದು. ವ್ಯಾಪಾರದಲ್ಲಿ ಲಾಭವನ್ನು ನಿರೀಕ್ಷೆ ಮಾಡಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ನಿಮ್ಮದೇ ಆದ ತಪ್ಪುಗಳಿಂದ ಶರೀರಕ್ಕೆ ಗಾಯವಾಗಬಹುದು. ನಿಮ್ಮ ಸಂಗಾತಿಯ ಸಹಕಾರ ಬಹಳ ಉತ್ತಮವಾಗಿರುತ್ತದೆ. (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
  • ಕರ್ಕಾಟಕ
  • ಬಹಳ ಬುದ್ಧಿವಂತಿಕೆಯಿಂದ ಮಾತನಾಡಿ ಎಲ್ಲರನ್ನೂ ಸೆಳೆಯುವಿರಿ. ಆದಾಯವು ಕಡಿಮೆ ಇರುತ್ತದೆ. ಭೂ ಸಂಬಂಧಿ ವ್ಯಾಪಾರಗಳಲ್ಲಿ ಅಷ್ಟು ಪ್ರಗತಿ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗುವುದು ಕಡಿಮೆ. ಪಿತ್ತ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಆರೋಗ್ಯಕ್ಕಾಗಿ ಸ್ವಲ್ಪ ಹಣ ಖರ್ಚಾಗುತ್ತದೆ. ಸಂಗಾತಿಯ ಕಡೆಯ ಹಿರಿಯರಿಂದ ನಿಮಗೆ ಹೆಚ್ಚು ಅನುಕೂಲವಾಗುತ್ತದೆ. ಕೆಲವರಿಗೆ ಅನಿರೀಕ್ಷಿತ ವಿದೇಶ ಪ್ರಯಾಣ ಯೋಗವಿದೆ. ಸಾಂಪ್ರದಾಯಿಕ ಕೃಷಿಯಿಂದ ನಿಮಗೆ ಹೆಚ್ಚು ಲಾಭವಿರುತ್ತದೆ. (ಪುನರ್ವಸು 4 ಪುಷ್ಯ ಆಶ್ಲೇಷ)
  • ಸಿಂಹ
  • ಮನಸ್ಸು ಗೊಂದಲದ ಗೂಡಾಗಿರುತ್ತದೆ. ಆದಾಯವು ಕಡಿಮೆ ಇದ್ದು, ಖರ್ಚು ಹೆಚ್ಚಿರುತ್ತದೆ. ಕೆಲ ಯೋಜನೆಗಳು ಈಗ ಫಲ ಕೊಡಲಾರಂಭಿಸುತ್ತವೆ. ಬಂಧುಗಳ ವಿರೋಧವನ್ನು ಎದುರಿಸಬೇಕಾಗಬಹುದು. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಸಿಗುವ ಸಾಧ್ಯತೆಗಳಿವೆ. ಕೆಲವರಿಗೆ ನರ ದೌರ್ಬಲ್ಯ ಕಾಡಬಹುದು. ಈಗ ನೀವು ವಿದೇಶದಲ್ಲಿರುವ ನಿಮ್ಮ ಸಂಗಾತಿಯನ್ನು ಹೋಗಿ ಕೂಡಿಕೊಳ್ಳಬಹುದು. ರಾಜಕಾರಣಿಗಳು ತಮ್ಮ ಮಾತಿನಮೇಲೆ ಹೆಚ್ಚು ನಿಗಾವಹಿಸುವುದು ಒಳ್ಳೆಯದು. (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
  • ಕನ್ಯಾ
  • ಬೇರೆಯವರನ್ನು ಮಣಿಸಲು ನೀವು ಬಳಸುತ್ತಿದ್ದ ಮಾರ್ಗಗಳನ್ನೇ ಇತರರು ನಿಮ್ಮ ಮೇಲೆ ಬಳಸುತ್ತಾರೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ಮಾತಿನಿಂದಲೇ ಬಂಧುಗಳ ವೈರತ್ವವನ್ನು ಕಟ್ಟಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ಸಂಗಾತಿಯ ಉದಾಸೀನ ಮನೋಭಾವ ಮುಜುಗರವನ್ನು ಉಂಟು ಮಾಡುತ್ತದೆ. ಬೆಳ್ಳಿಯ ಆಭರಣ ವ್ಯಾಪಾರಿಗಳಿಗೆ ವ್ಯವಹಾರ ಕಡಿಮೆ ಇರುತ್ತದೆ. ವೃತ್ತಿಯ ಸ್ಥಳದಲ್ಲಿ ಹಿರಿಯ ಅಧಿಕಾರಿಗಳ ಸಹಕಾರ ದೊರೆಯುತ್ತದೆ. (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
  • ತುಲಾ
  • ಹೆಚ್ಚು ಹಣ ಮಾಡುವ ಬಗ್ಗೆ ಸಾಕಷ್ಟು ಆಲೋಚನೆ ಮಾಡುವಿರಿ. ಆದಾಯ ಕಡಿಮೆ ಇರುತ್ತದೆ. ಗುರು ಹಿರಿಯರ ಸಹಕಾರ ಕಡಿಮೆಯಾಗಬಹುದು. ವಿದೇಶದಲ್ಲಿ ಓದಬೇಕೆನ್ನುವವರಿಗೆ ಅನುಕೂಲಕರ ವಾತಾವರಣವಿದೆ. ಮಕ್ಕಳಿಂದ ಯಾವುದೇ ರೀತಿಯ ಸಹಾಯ ದೊರೆಯುವುದಿಲ್ಲ. ರಾಜಕಾರಣಿಗಳಿಗ ಜನಬೆಂಬಲ ಕಡಿಮೆಯಾಗುವ ಸಾಧ್ಯತೆಗಳಿವೆ. ಸಂಗಾತಿಯಿಂದ ಆರ್ಥಿಕ ಸಹಕಾರ ದೊರೆಯುತ್ತದೆ. ಸಂಗಾತಿಯ ಖರ್ಚು ಹೆಚ್ಚಾಗುತ್ತದೆ. ಗಣಿಗಾರಿಕೆಯಿಂದ ಲಾಭವಿದೆ. (ಚಿತ್ತಾ 3 4 ಸ್ವಾತಿ ವಿಶಾಖ 1 2 3)
  • ವೃಶ್ಚಿಕ
  • ಅತಿಯಾದ ಆಲಸಿತನ ವಾರದ ಆರಂಭದಲ್ಲಿ ಇರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ವಿದೇಶದಲ್ಲಿ ರಿಯಲ್ ಎಸ್ಟೇಟ್‌ ವ್ಯವಹಾರ ನಡೆಸುತ್ತಿರುವವರಿಗೆ ಲಾಭವಿರುತ್ತದೆ. ಸ್ತ್ರೀಯರ ಅಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ಬೇಡಿಕೆ ಕಡಿಮೆಯಾಗಬಹುದು. ಸಂಗಾತಿಯ ಗಳಿಕೆ ಕಡಿಮೆಯಾಗುವ ಸಾಧ್ಯತೆಗಳಿವೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳಿರುತ್ತವೆ. ಹಿರಿಯರ ವ್ಯವಹಾರಗಳಲ್ಲಿ ನಿಮಗೆ ಅವಕಾಶ ದೊರೆತು, ಲಾಭ ಹೆಚ್ಚುತ್ತದೆ. (ವಿಶಾಖಾ 4 ಅನುರಾಧ ಜೇಷ್ಠ)
  • ಧನು
  • ಗಂಭೀರವಾದ ನಡವಳಿಕೆ ಇರುತ್ತದೆ. ಆದಾಯವು ಕಡಿಮೆ ಇರುತ್ತದೆ. ಆಸ್ತಿ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆಯಿರಲಿ, ದಾಖಲಾತಿಗಳಲ್ಲಿ ಮೋಸವಾಗುವ ಸಾಧ್ಯತೆಗಳಿವೆ. ಹಳೆಯ ಸಾಲಗಳು ಈಗ ವಸೂಲಾಗಬಹುದು. ಬಹುಕಾಲದ ಆರೋಗ್ಯ ಸಮಸ್ಯೆಗಳು ಈಗ ಪರಿಹಾರವಾಗುತ್ತವೆ. ಸಂಗಾತಿಯಿಂದ ಸ್ವಲ್ಪ ಮಟ್ಟಿನ ಸಹಕಾರ ದೊರೆಯುತ್ತದೆ. ಗಣಿಗಾರಿಕೆ ಮಾಡುವವರಿಗೆ ಹೆಚ್ಚು ಲಾಭವಿದೆ. ಹೈನುಗಾರಿಕೆಯಿಂದ ಲಾಭ ಇರುವುದಿಲ್ಲ. (ಮೂಲ ಪೂರ್ವಾಷಾಢ ಉತ್ತರಾಷಾಢ 1)
  • ಮಕರ
  • ಬೃಹತ್ತಾದ ಯೋಜನೆಗಳನ್ನು ಜಾರಿಗೊಳಿಸಲು ಯೋಚನೆ ಮಾಡುವಿರಿ. ಆದಾಯವು ಕಡಿಮೆ ಇದ್ದು, ಶ್ರಮಪಟ್ಟು ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ಮಹಿಳೆಯರ ಸಹಕಾರ ದೊರೆಯುತ್ತದೆ. ಕೇಶಾಲಂಕಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಕಟ್ಟಡ ನಿರ್ಮಾಣಕಾರರಿಗೆ ಆದಾಯ ಕಡಿಮೆಯಾಗುತ್ತದೆ. ಜೀರ್ಣ ಕ್ರಿಯೆ ಸಮಸ್ಯೆ ಇದ್ದವರು ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳಿ. ಕಲ್ಲು ಗಣಿಗಾರಿಕೆ ಮಾಡುವವರಿಗೆ ಲಾಭ ಹೆಚ್ಚುತ್ತದೆ. ವೃತ್ತಿಯಲ್ಲಿ ಅಭಿವೃದ್ಧಿ ನಿಧಾನ. (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
  • ಕುಂಭ
  • ಯುವಕರಿಗೆ ವಿದೇಶಿ ವ್ಯಾಮೋಹ ಹೆಚ್ಚಾಗುತ್ತದೆ. ಆದಾಯವು ಕಡಿಮೆ ಇದ್ದು, ಸ್ವಲ್ಪ ಆರ್ಥಿಕ ಸಮಸ್ಯೆಗಳು ಎದುರಾಗಬಹುದು. ಸಿನಿಮಾ ನಟರಿಗೆ ಆದಾಯ ಹೆಚ್ಚುವ ಸಾಧ್ಯತೆಗಳಿವೆ. ಮೇಕಪ್ ಮಾಡುವವರ ಆದಾಯ ಹೆಚ್ಚುತ್ತದೆ. ಆಸ್ತಿ ವ್ಯವಹಾರಗಳಲ್ಲಿ ಅತಿಯಾದ ಆತುರಬೇಡ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವುದರ ಜತೆಗೆ ಬಯಸಿದ ಕೋರ್ಸ್‌ ದೊರೆಯುತ್ತದೆ. ನರ ಸಂಬಂಧಿ ದೋಷಗಳಿರುವವರು ಎಚ್ಚರವಹಿಸಿ. ವೃತ್ತಿಯಲ್ಲಿದ್ದ ತೊಂದರೆಗಳು ಸ್ವಲ್ಪ ಮಟ್ಟಿಗೆ ಪರಿಹಾರವಾಗುತ್ತವೆ. (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
  • ಮೀನ
  • ಒಂದು ರೀತಿ ನಿಷ್ಕ್ರಿಯರಾದಂತೆ ಇರುವಿರಿ. ಆದಾಯ ಉತ್ತಮವಾಗಿದ್ದು ಅನವಶ್ಯ ಖರ್ಚುಗಳು ಹೆಚ್ಚಾಗುತ್ತವೆ. ನಿಮ್ಮ ನಡವಳಿಕೆಯಲ್ಲಿ ಹಣದ ಮದ ಕಾಣುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಕಾಲ. ತೆರಿಗೆ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ಆಯುಧಗಳಿಂದ ಗಾಯವಾಗಬಹುದು ಎಚ್ಚರ ವಹಿಸಿ. ಸಂಗಾತಿಯಿಂದ ಸಾಕಷ್ಟು ಸಹಕಾರ ದೊರೆಯುತ್ತದೆ. ಆಭರಣ ವ್ಯಾಪಾರಿಗಳಿಗೆ ಅನಿರೀಕ್ಷಿತ ಧನ ಲಾಭವಿರುತ್ತದೆ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸಗಳಾಗಬಹುದು. ವೃತ್ತಿಯಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

    ADVERTISEMENT