ತುಮಕೂರು ತಾಲ್ಲೂಕಿನ ಕೈದಾಳ ಚೆನ್ನಕೇಶವ ದೇವಾಲಯಕ್ಕೆ ಬೇಲೂರಿನಷ್ಟೇ ಐತಿಹಾಸಿಕ ಮಹತ್ವವಿದೆ. ಹೊಯ್ಸಳರ ಕಾಲದಲ್ಲಿ ಬೇಲೂರಿನಲ್ಲಿ ಚೆನ್ನಕೇಶವ ದೇವಾಲಯ ನಿರ್ಮಾಣವಾಯಿತು. ಅದೇ ರೀತಿ ಇದೂ ಜಕಣಾಚಾರಿಯ ಸೃಷ್ಟಿ ಎನ್ನಲಾಗುತ್ತಿದೆ.
ಸಾಮಾನ್ಯ ನಂಬಿಕೆಯ ಪ್ರಕಾರ ಅಮರಶಿಲ್ಪಿ ಜಕಣಾಚಾರಿ ಕೊನೆ ದಿನಗಳನ್ನು ಕೈದಾಳದಲ್ಲಿಯೇ ಕಳೆದರು. ಆಗಲೇ ಇಲ್ಲಿನ ಚೆನ್ನಕೇಶವ ದೇವಾಲಯ ನಿರ್ಮಾಣವಾಯಿತು.
ಬೇಲೂರು ದೇವಾಲಯ ನಿರ್ಮಾಣ ಸಂದರ್ಭದಲ್ಲಿ ಕೈ ಕಳೆದುಕೊಂಡಿದ್ದ ಅವರಿಗೆ ಕೈದಾಳದಲ್ಲಿ ಚೆನ್ನಕೇಶವನ ಮೂರ್ತಿ ಕೆತ್ತಿದ ನಂತರ ಕೈ ಬಂತು. ಇದು ಮೂಲತಃ ಕ್ರೀಡಾನಗರ. ಜಕಣಾಚಾರಿಗೆ ಕೈಬಂದ ಕಾರಣಕ್ಕೆ `ಕೈದಾಳ~ ಎಂಬ ಹೆಸರು ಬಂದಿದೆ ಎನ್ನುತ್ತಾರೆ ಗ್ರಾಮಸ್ಥರು.
ಬೇಲೂರಿನ ಚೆನ್ನಕೇಶವಮೂರ್ತಿ 14.5 ಅಡಿ ಎತ್ತರವಿದ್ದರೆ, ಇಲ್ಲಿನ ಚೆನ್ನಕೇಶವನ ಎತ್ತರ 8.5 ಅಡಿ. ಬೇಲೂರು ದೇವಾಲಯ ಪೂರ್ವಾಭಿಮುಖ, ಕೈದಾಳ ಪಶ್ಚಿಮಾಭಿಮುಖವಾಗಿದೆ. ಕಮಲಪೀಠದ ಮೇಲೆ ಶಂಕ, ಚಕ್ರ, ಗದೆ, ಪದ್ಮ ಹಸ್ತದ ಚೆನ್ನಕೇಶವ, ಆತನ ಅಕ್ಕಪಕ್ಕ ಬ್ರಹ್ಮ, ಈಶ್ವರಿದ್ದಾರೆ. ಪೀಠದ ಸುತ್ತಲೂ ದಶಾವತಾರಗಳ ಕೆತ್ತನೆಯಿದೆ. ಹೀಗೆ ಬ್ರಹ್ಮ, ವಿಷ್ಣು, ಮಹೇಶ್ವರ ಸಾಮರಸ್ಯ ಅಪರೂಪ ಎನ್ನುತ್ತಾರೆ ದೇವಾಲಯದ ಅರ್ಚಕ ಕೆ.ವಿ.ಪಾರ್ಥಸಾರಥಿ.
ಸೇವೆ |
ದೇವಾಲಯದ ಸುತ್ತಲೂ ಕಲ್ಲಿನ ಗೋಡೆ, ಮುಂಭಾಗದಲ್ಲಿ ಗೋಪುರವಿದೆ. ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಲಾಗಿದೆ. ಸಮೀಪದಲ್ಲಿಯೇ 2 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.