ಮಾಸ್ಪಾರ್ ಬಗೆಬಗೆ ಉಡುಗೊರೆ
ತಂದೆಯ ಪ್ರೀತಿ, ಕಾಳಜಿಗೆ ಚೆಂದದ ಉಡುಗೊರೆ ನೀಡುವ ಮನಸ್ಸಾದರೆ ಮಾಸ್ಪರ್ ಅವರ ಉಡುಗೊರೆ ಶ್ರೇಣಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕೈಗಡಿಯಾರ, ಮನಕ್ಕೊಪ್ಪುವ ಕನ್ನಡಕ ಪೆಟ್ಟಿಗೆ, ಆಕರ್ಷಕ ಬಾತ್‌ರೂಂ ಟ್ರಾವೆಲ್ ಕಿಟ್, ಮೆತ್ತನೆಯ ಹಾಗೂ ಬೆಚ್ಚನೆಯ ಹೌಸ್ ಗೌನ್ ಹಾಗೂ ಟವೆಲ್ ಲಭ್ಯ. ಟವೆಲ್ ಮೇಲೆ ಮೊನೊಗ್ರಾಮಿಂಗ್ ಸೌಲಭ್ಯವನ್ನೂ ಮಾಸ್ಪಾರ್ ನೀಡಿದೆ. ಇದಕ್ಕಾಗಿ ಮುಂಗಡವಾಗಿ ನೋಂದಣಿ ಮಾಡಿಸುವುದು ಉತ್ತಮ. ಇವುಗಳ ಬೆಲೆ ರೂ195ರಿಂದ ಆರಂಭ.
ಮಕ್ಕಳಿಗೆ ಅಡುಗೆ ತರಬೇತಿ
ಅಪ್ಪಂದಿರ ದಿನಕ್ಕಾಗಿ ಅಪ್ಪನ ಅಚ್ಚುಮೆಚ್ಚಿನ ತಿನಿಸು ತಯಾರಿಸುವ ಮನಸ್ಸಾಗಿದ್ದರೆ 6-14ರ ವಯೋಮಾನದ ಮಕ್ಕಳಿಗಾಗಿ ಅಡುಗೆ ಕಲಿಕಾ ತರಗತಿಯನ್ನು ಗೋದ್ರೆಜ್ ಅವರ ನೇಚರ್ಸ್ ಬಾಸ್ಕೆಟ್ ಆಯೋಜಿಸಿದೆ. ಮಕ್ಕಳಿಗೆ ವಿನೂತನ ಮಾದರಿಯಲ್ಲಿ ಹಾಗೂ ಆಸಕ್ತಿದಾಯಕವಾಗಿ ಅಡುಗೆ ಕಲಿಸುವುದು, `ಫನ್ ವಿತ್ ಮ್ಯಾಂಗೋಸ್' ಎಂಬ ವಿಷಯವನ್ನಿಟ್ಟುಕೊಂಡು ಆ ಮೂಲಕ ಅಪ್ಪನಿಗೆ ವಿಶೇಷ ಔತಣ ಏರ್ಪಡಿಸುವ ಅವಕಾಶವನ್ನು ಕಲ್ಪಿಸಲಾಗಿದೆ.
ಈ ಅಡುಗೆ ಕಲಿಕಾ ತರಗತಿಯು ವರ್ಷ ಪೂರ್ತಿ ನಡೆಯಲಿದ್ದು, ಪಾಕ ಪರಿಣತೆ ಮೋನಿಕಾ ಮಾಂಚಂಡಾ ಅವರು ತರಬೇತಿ ನೀಡಲಿದ್ದಾರೆ. ಜತೆಗೆ ಲಿಟ್ಲ್ ಶೆಫ್ ಮಾಸ್ಟರ್‌ಗಳಾಗುವ ಮಕ್ಕಳಿಗೆ ತರಗತಿಯ ಕೊನೆಯಲ್ಲಿ ತರಗತಿಯಲ್ಲಿ ಕಲಿಸಲಾದ ವಿಶೇಷ ರೆಸಿಪಿಗಳ ಉಡುಗೊರೆ ನೀಡಲಾಗುವುದು. `ಫನ್ ವಿತ್ ಮ್ಯಾಂಗೋಸ್' ಜೂನ್ 29ರಂದು ನಡೆಯಲಿದೆ. ಅಡುಗೆ ತರಬೇತಿ ಶುಲ್ಕ ರೂ 750.ಸ್ಥಳ: ಕೋರಮಂಗಲದಲ್ಲಿರುವ ಗೋದ್ರೆಜ್ ನೇಚರ್ಸ್ ಬಾಸ್ಕೆಟ್. ಸಮಯ: ಮಧ್ಯಾಹ್ನ 3ರಿಂದ ಸಂಜೆ 4.30.
ಸತ್ಯಾ ಪಾಲ್ ಟೈ
ಅಪ್ಪನಿಗೊಂದು ಅಚ್ಚರಿ ನೀಡಬೇಕೆಂದಿದ್ದರೆ ಸತ್ಯಾ ಪಾಲ್ ಅವರ ಕೈಮಗ್ಗದಲ್ಲಿ ಸಿದ್ಧಗೊಂಡ ಅಪ್ಪಟ ರೇಷ್ಮೆಯ ಸಿಗ್ನೇಚರ್ ಟೈ ನೀಡಬಹುದಾಗಿದೆ. ಡಿಜಿಟಲ್ ಮುದ್ರಣದಲ್ಲಿ ಅಚ್ಚೊತ್ತಿದ್ದ ಇದರ ಬೆಲೆ ಒಂದಕ್ಕೆರೂ 2495, ಟೈ, ಹ್ಯಾಂಕಿ, ಕಫ್‌ಲಿಂಕ್ ಒಳಗೊಂಡ ಉಡುಗೊರೆ ಪೆಟ್ಟಿಗೆಗೆರೂ 5995.
ಬಹುಬಣ್ಣದ ಟೈಗಳು ಒಂದಕ್ಕೆರೂ 799, ಬಿಳಿ ಬಣ್ಣದ ಬೋಗೆರೂ 799. ಈ ಟೈಗಳು ಎಲ್ಲಾ ಸತ್ಯಾ ಪಾಲ್ ಮಳಿಗೆಗಳಲ್ಲಿ ಲಭ್ಯ.
ಆ್ಯರೋ ಪ್ರೆಸಿಡೆಂಟ್ಸ್ ಕಲೆಕ್ಷನ್
ಅಪ್ಪಂದಿರ ದಿನಕ್ಕಾಗಿ ಆ್ಯರೋ ಆಕರ್ಷಕ ಸಂಗ್ರಹವನ್ನು ಹೊರತಂದಿದೆ. ಪ್ರೀತಿಯ ಅಪ್ಪನಿಗೆ ಇಲ್ಲಿರುವ `ಪ್ರೆಸಿಡೆಂಟ್ಸ್ ಕಲೆಕ್ಷನ್'ನಲ್ಲಿ ತಮಗಿಷ್ಟವಾದುದನ್ನು ಆಯ್ದುಕೊಳ್ಳುವ ಅವಕಾಶ ಮಕ್ಕಳದ್ದು.
ಆಫೀಸ್‌ಗೆ ತೆರೆಳುವ ಅಪ್ಪಂದಿರ ಅವಶ್ಯಕತೆಯನ್ನು ಗಮನದಲ್ಲಿರಿಸಿಕೊಂಡು ಈ ಸಂಗ್ರಹ ಹೊರತರಲಾಗಿದೆಯಂತೆ. ಮೈಗೆ ಮುದ ನೀಡುವ ಈ ಉಡುಪುಗಳು ಅಂತರರಾಷ್ಟ್ರೀಯ ದರ್ಜೆಯ ಲುಕ್ ನೀಡಲಿವೆ ಎಂದಿದೆ ಕಂಪೆನಿ. ಅಪ್ಪಂದಿರ ದಿನದ ವಿಶೇಷಕ್ಕಾಗಿ ಆ್ಯರೋ ತನ್ನ ಸಂಗ್ರಹದ ಉಡುಪುಗಳನ್ನು ಆಕರ್ಷಕ ಗಿಫ್ಟ್‌ಬಾಕ್ಸ್‌ನಲ್ಲಿ ನೀಡುತ್ತಿದೆ. ಬೆಲೆ ರೂ 1799.ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಇಂದಿರಾನಗರ, ಗರುಡಾ ಮಾಲ್, ಫಿನಿಕ್ಸ್ ಮಾರ್ಕೆಟ್ ಸಿಟಿ ಮಳಿಗೆಗಳಲ್ಲಿ ಇವು ಲಭ್ಯ.
ಲಾರೆಲ್‌ನಿಂದ ಸೌಂದರ್ಯವರ್ಧಕ
ಸೌಂದರ್ಯವರ್ಧಕಗಳಿಂದ ಅಪ್ಪನನ್ನು ಮತ್ತಷ್ಟು ಯಂಗ್ ಆಗಿ ಕಾಣುವ ಬಯಕೆಗಾಗಿ ಲಾರೆಲ್ ಹಲವು ಬಗೆಯ ಸೌಂದರ್ಯವರ್ಧಕ ಉತ್ಪನ್ನಗಳನ್ನು ಪರಿಚಯಿಸಿದೆ. ಇವುಗಳಲ್ಲಿ ತಲೆಹೊಟ್ಟು ನಿವಾರಕ ಶಾಂಪೂನಿಂದ ಹಿಡಿದು ಬೇಕಾದ ವಿನ್ಯಾಸದ ಕೇಶ ವಿನ್ಯಾಸ ಮಾಡಿಕೊಳ್ಳಬಹುದಾದ ಜೆಲ್‌ಗಳನ್ನು ಅದು ಬಿಡುಗಡೆಗೊಳಿಸಿದೆ.
ಶಾಂಪೂಗಳಲ್ಲಿ ಹೋಂ ಕೇರ್ ಶ್ರೇಣಿಯ ಎನರ್ಜಿಕ್ ಶ್ಯಾಂಪು, ಹೋಂ ಕೂಲ್ ಕ್ಲಿಯರ್ ಶಾಂಪೂ, ಹೋಂ ಮ್ಯಾಟ್ ಹಾಗೂ ಹೋಂ ಸ್ಕಲ್ಪೆಟ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಈ ಸೌಂದರ್ಯವರ್ಧಕ ಶ್ರೇಣಿಗಳುರೂ 495ರಿಂದರೂ 550ರವರೆಗೆ ಲಭ್ಯ.
ಹೈಡಿಸೈನ್ ಉಡುಗೊರೆ
ಹೈಡಿಸೈನ್ ಅಪ್ಪಂದಿರಿಗೆ ವಿಶೇಷ ಉಡುಗೊರೆ ಶ್ರೇಣಿಯನ್ನು ಪರಿಚಯಿಸಿದೆ. ಶ್ರೇಷ್ಠ ಗುಣಮಟ್ಟದ ಚರ್ಮದಿಂದ ತಯಾರಿಸಿದ ಬ್ಯಾಗ್ ಖರೀದಿಸಿದರೆ ಪರ್ಸ್ ಉಚಿತ.ಅದೇ ರೀತಿ, ಕಾಂಬೊ-1 ಎಂಬ ಉಡುಗೊರೆ ಪೆಟ್ಟಿಗೆಯಲ್ಲಿ ಬ್ರೀಫ್‌ಕೇಸ್ ಜೊತೆಗೆ ವ್ಯಾಲೆಟ್ ಹಾಗೂ ಸುಂದರ ಬೆಲ್ಟ್ ಕೂಡಾ ಲಭ್ಯ. ಇದರ ಬೆಲೆ ರೂ 9185.
ಕಾಂಬೊ-2ರಲ್ಲಿ ಮೆಲ್‌ರೋಸ್ ಪ್ಲೇಸ್, ವ್ಯಾಲೆಟ್ ಹಾಗು ಬೆಲ್ಟ್ ಲಭ್ಯ. ಇದರ ಬೆಲೆರೂ 9685. ಕಾಂಬೊ-3ರಲ್ಲಿ ಪಿಕ್ಕಾಡಿಲ್ಲಿ ಆರ್ಕೆಡ್‌ನೊಂದಿಗೆ ವ್ಯಾಲೆಟ್ ಹಾಗೂ ಬೆಲ್ಟ್ ಲಭ್ಯ. ಇದರ ಬೆಲೆರೂ 10,585. ಈ ಕೊಡುಗೆ ಜೂನ್ 20ರವರೆಗೆ ಮಾತ್ರ.
ವಿಷಿ ತ್ವಚೆಯ ಆರೈಕೆ
ಬಾಲ್ಯದಲ್ಲಿ ಕಂಡ ಅಪ್ಪನ ಹೊಳೆವ ತುಂಬು ಕೆನ್ನೆಗಳನ್ನು ಮತ್ತೆ ಕಾಣಬಯಸುವ ಮಕ್ಕಳಿಗಾಗಿ ವಿಷಿ ಹೋಮ್ ವಿವಿಧ ಶ್ರೇಣಿಯ ತ್ವಚೆ ಆರೈಕೆಯ ಸಾಧನಗಳನ್ನು ಪರಿಚಯಿಸಿದೆ. ತ್ವಚೆಯ ಡೆಡ್ ಸೆಲ್‌ಗಳನ್ನು ತೆಗೆದುಹಾಕುವ ಕ್ಲೆನ್ಸಿಂಗ್ ಜೆಲ್ ಹೈಡ್ರಾ ಮ್ಯಾಗ್ `ಸಿ' ಹಾಗೂ ಎಂಟು ದಿನಗಳಲ್ಲಿ ನೆರಿಗೆಗಳನ್ನು ತೆಗೆದುಹಾಕುವ ವಿಷಿ ಹೋಮ್ ಲಿಫ್ಟ್‌ಆ್ಯಕ್ಟಿವ್ ಆ್ಯಂಟಿ ರಿಂಕಲ್ ಕ್ರೀಂಗಳನ್ನು ಉಡುಗೊರೆಯಾಗಿ ನೀಡಬಹುದಾಗಿದೆ.ಸೌಂದರ್ಯವರ್ಧಕ ಹಾಗೂ ಔಷಧ ಅಂಗಡಿಗಳಲ್ಲಿ ಲಭ್ಯವಿರುವ ವಿಷಿ ಉತ್ಪನ್ನಗಳ ಬೆಲೆರೂ 950ರಿಂದ 1590ರವರೆಗೆ ಲಭ್ಯ.
ಮದರ್ ಅರ್ಥ್‌ನೊಂದಿಗೆ ಅಪ್ಪನ ದಿನ
ಅಪ್ಪನ ಬೇಕುಗಳನ್ನು ಅರ್ಥ ಮಾಡಿಕೊಂಡ ಮಕ್ಕಳಿಗಾಗಿ ಮದರ್ ಅರ್ಥ್ ವಿಶೇಷ ಉಡುಗೊರೆಗಳನ್ನು ಹೊರತಂದಿದೆ. ಮರದಿಂದ ತಯಾರಿಸಿದ ಗಡಿಯಾರಗಳು, ಅಪ್ಪಟ ಹತ್ತಿಯ ಶರ್ಟ್‌ಗಳು, ಸೆರಾಮಿಕ್ ಕುಲ್ಲರ್ಸ್ ಹಾಗೂ ಮಗ್‌ಗಳು ಹಾಗೂ ಸ್ಟೈಲಿಶ್ ಫೋಟೊ ಫ್ರೇಮ್‌ಗಳನ್ನು ಪರಿಚಯಿಸಿದೆ.
ದೊಮ್ಮಲೂರಿನಲ್ಲಿರುವ ಮದರ್ ಅರ್ಥ್ ಮಳಿಗೆಯಲ್ಲಿ ಲಭ್ಯವಿರುವ ಈ ಉತ್ಪನ್ನಗಳ ಬೆಲೆ ರೂ 99ರಿಂದ ಆರಂಭ.
ರೂಷ್‌ನಲ್ಲಿ ವಿಶೇಷ ಸಂಗ್ರಹ
ಆಕರ್ಷಕ ಶೈಲಿ, ಅಂತರರಾಷ್ಟ್ರೀಯ ಗುಣಮಟ್ಟದ ಶೂ, ಚಪ್ಪಲಿ, ಬೆಲ್ಟ್ ಮಾರಾಟ ಮಳಿಗೆ ರೂಷ್ ಅಪ್ಪಂದಿರ ದಿನಕ್ಕಾಗಿ ವಿಶೇಷ ಸಂಗ್ರಹವನ್ನು ಹೊರತಂದಿದೆ.
ಕರಕುಶಲ ತಯಾರಿಕೆಯಲ್ಲಿ ಮೈದಳೆದ ಶೂಗಳ ಸಂಗ್ರಹ ಮನಸ್ಸಿಗೆ ಮುದ ನೀಡುವುದಷ್ಟೇ ಅಲ್ಲ, ಧರಿಸಿದಾಗ ಹಿತಾನುಭವನ್ನು ನೀಡುವಂತಿವೆ. ರೂಷ್ ಮಳಿಗೆಯು ಅಪ್ಪಂದಿರ ದಿನಕ್ಕಾಗಿ ಶೂಗಳ ಮೇಲೆ ವಿಶೇಷ ರಿಯಾಯಿತಿ ಪ್ರಕಟಿಸಿದೆ. ಅಲ್ಲದೇ ರೂ. 5 ಸಾವಿರಕ್ಕಿಂತ ಹೆಚ್ಚಿನ ಖರೀದಿ ಮೇಲೆ ಗ್ರಾಹಕರಿಗೆ 500 ರೂಪಾಯಿಯ ಗಿಫ್ಟ್ ಓಚರ್ ನೀಡುತ್ತಿದೆ.
ಉದ್ಯೋಗದಲ್ಲಿರುವ ಅಪ್ಪನಿಗಾಗಿ ಆಕರ್ಷಕ ಶೂಗಳ ದೊಡ್ಡ ಸಂಗ್ರಹ ಹೊರತಂದಿರುವುದರ ಜತೆಗೆ ಕ್ಲಬ್, ಕ್ಯಾಶುವಲ್, ಮದುವೆ ಮೊದಲಾದ ಸಮಾರಂಭಗಳಲ್ಲಿ ಧರಿಸುವ ವಿಭಿನ್ನ ಆಯ್ಕೆಗಳನ್ನು ಗ್ರಾಹಕರಿಗೆ ಒದಗಿಸಿದೆ.
ವೈಟ್‌ಫೀಲ್ಡ್, ಇಂದಿರಾನಗರ 80 ಅಡಿ ರಸ್ತೆ, ವಿಠ್ಠಲ್ ಮಲ್ಯ ರಸ್ತೆ ಹಾಗೂ ಕೋರಮಂಗಲದಲ್ಲಿರುವ ರೂಷ್ ಮಳಿಗೆಗಳಲ್ಲಿ ಈ ಸಂಗ್ರಹ ಲಭ್ಯವಿದೆ. ಬೆಲೆ ರೂ 2890ರಿಂದ ಪ್ರಾರಂಭ.
ಮದರ್ ಅರ್ಥ್‌ನಲ್ಲಿ ಬಗೆ ಬಗೆ ಉಡುಗೊರೆ
ಅಪ್ಪನ ಅಭಿರುಚಿಗೆ ಹೊಂದುವಂಥಹ ಆಕರ್ಷಕ ಕೊಡುಗೆಗಳ ದೊಡ್ಡ ಸಂಗ್ರಹವನ್ನು ಹೊರತಂದಿದೆ ದೊಮ್ಮಲೂರಿನಲ್ಲಿರುವ ಮದರ್ ಅರ್ಥ್ ಮಳಿಗೆ.
ಕಣ್ಮನ ಸೆಳೆವ ವುಡನ್ ಸ್ಕ್ರೀನ್ ವಾಲ್ ಕ್ಲಾಕ್, ಅಪ್ಪಟ ಖಾದಿ ಶರ್ಟ್‌ಗಳು, ಸ್ಟೈಲಿಶ್ ಫೋಟೊ ಫ್ರೇಂ ಹಾಗೂ ಮತ್ತಿತರ ಆಕರ್ಷಕ ಕೊಡುಗೆಗಳು ಇಲ್ಲಿವೆ. ಬೆಲೆ ರೂ 99ರಿಂದ ಪ್ರಾರಂಭ.
ಜಿಪ್ಪೊ ಲೈಟರ್
ಅಪ್ಪನ ಬಳಿ ಸದಾ ಇರುವ ಉಡುಗೊರೆ ನೀಡಬೇಕು ಎಂದು ಬಯಸುವವರಿಗಾಗಿ ಜಿಪ್ಪೊ ವಿಶೇಷ ಲೈಟರ್ ಬಿಡುಗಡೆ ಮಾಡಿದೆ. ಗಾಳಿ ನಿರೋಧಕ ಶಕ್ತಿ ಹೊಂದಿರುವ ಈ ಲೈಟರ್ ಅಪ್ಪನಿಗೆ ಕೊಡಲು ಅತ್ಯುತ್ತಮ ಆಯ್ಕೆ ಎಂದಿದೆ ಕಂಪೆನಿ.ನಾಲ್ಕು ವಿಶಿಷ್ಟ ಬಣ್ಣಗಳಲ್ಲಿ ಲಭ್ಯವಿರುವ ಈ ಲೈಟರ್‌ನ ಬೆಲೆರೂ 1355.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.