ADVERTISEMENT

ಆತ್ಮಕಥೆಯೂ ಅಧ್ಯಾತ್ಮವೂ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2013, 19:59 IST
Last Updated 13 ಜನವರಿ 2013, 19:59 IST
ಆತ್ಮಕಥೆಯೂ  ಅಧ್ಯಾತ್ಮವೂ
ಆತ್ಮಕಥೆಯೂ ಅಧ್ಯಾತ್ಮವೂ   

ಮನಿಷಾ ಕೊಯಿರಾಲಾ ಆತ್ಮಕಥೆ ಬರೆಯುವ ನಿರ್ಧಾರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಕಳೆದ ಡಿಸೆಂಬರ್ 10ರಂದು ಅಂಡಾಶಯ ಸಂಬಂಧಿ ಕ್ಯಾನ್ಸರ್‌ನಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ಅವರ `ಕೀಮೋಥೆರಪಿ' ಚಿಕಿತ್ಸಾ ಸರಣಿ ಪ್ರಾರಂಭವಾಗಿದೆ.

ಅವರು ನಂಬಿರುವ ಗುರು ನಮನ್ ಎಂಬುವರನ್ನು ಉದ್ದೇಶಿಸಿ ಮನಿಷಾ ಫೇಸ್‌ಬುಕ್ ಅಕೌಂಟ್‌ನಲ್ಲಿ ಕೆಲವು ಸಾಲುಗಳನ್ನು ಬರೆದಿದ್ದಾರೆ. ಶಾಪದಿಂದಲೋ, ತಾನೇ ತಾನಾಗಿಯೋ ಅಂತೂ ಆತ್ಮಕಥೆ ಬರೆಯುವ ಮನಸ್ಸಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ನಲವತ್ತೆರಡು ವಯಸ್ಸಿನ ನಟಿ ಬಾಲಿವುಡ್ ಚಿತ್ರಗಳಲ್ಲದೆ ನೇಪಾಳ, ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ. ರಾಮ್‌ಗೋಪಾಲ್ ವರ್ಮಾ ನಿರ್ದೇಶನದ `ಭೂತ್ ರಿಟರ್ನ್ಸ್' ನಂತರ ಅವರು ಮತ್ತೆ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ.
`ನಾನು ಕಷ್ಟ ಪಡುತ್ತಿದ್ದೇನೆ. ದೇವರಿಗಾಗಿ ಬದುಕುತ್ತಿದ್ದೇನೆ. ದೈವ ಶರಣಾಗತಿಯಿಂದಲೇ ಶಾಂತಿ ಸಿಗುತ್ತದೆ' ಎಂದಿರುವ ಮನಿಷಾ ಮನಸ್ಸು ಈಗ ಅಧ್ಯಾತ್ಮದತ್ತ ವಾಲಿದೆಯಂತೆ. ಆದಷ್ಟು ಬೇಗ ಅವರು ತಮ್ಮ ಆತ್ಮಕಥೆಯನ್ನು ಸಿದ್ಧಪಡಿಸುತ್ತಾರಂತೆ. ಅದರಲ್ಲಿ ಅವರ ಬದುಕಿನ ಹೋರಾಟದ ಕ್ಷಣಗಳು ದಾಖಲಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.