ADVERTISEMENT

ಆಭರಣ ವೈಭೋಗ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
ಆಭರಣ ವೈಭೋಗ
ಆಭರಣ ವೈಭೋಗ   

ಬಾಹುಬಲಿ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಸೌಂದರ್ಯವನ್ನು ಹೆಚ್ಚಿಸಿದ್ದು ಅವರು ಧರಿಸಿದ್ದ ಆಕರ್ಷಕ ಆಭರಣಗಳು. ಮಲ್ಲಿಗೆ ಚೆಲ್ಲಿದಂತೆ ಕಾಣುವ ಮುತ್ತಿನ ಹಾರಗಳು, ಹೂವಿನ ಸೊಗಸಿನ ಬೈತಲೆ ಬೊಟ್ಟು, ಅಲೆಅಲೆಯಾಗಿ ಸೆಳೆಯುವ ಕೆನ್ನೆ ಸರಪಳಿ, ಚೆಲುವು ಬೀರುವ ಉಂಗುರಗಳು, ಉದ್ದದ ಹಾರಗಳು, ವಿಭಿನ್ನ ಬಳೆಗಳು, ಸೊಂಟಪಟ್ಟಿ... ಬಾಹುಬಲಿ ಚಿತ್ರದಲ್ಲಿ ಒಬ್ಬೊಬ್ಬರು ಧರಿಸಿದ್ದ ಆಭರಣಗಳ ಚೆಲುವನ್ನು ವಿವರಿಸುವುದು ಕಷ್ಟ.

ಅದನ್ನು ನೋಡಿ ಖುಷಿ ಪಡುವುದರೊಟ್ಟಿಗೆ ಖರೀದಿಸಿ ಧರಿಸಬೇಕು ಎನ್ನುವ ಆಸೆಯೂ ನಿಮಗಿದ್ದರೆ ಕಸ್ತೂರಬಾ ರಸ್ತೆಯಲ್ಲಿರುವ ಆಮ್ರಪಾಲಿ ಮಳಿಗೆಗೆ ಭೇಟಿ ನೀಡಬಹುದು.

ಮುತ್ತು, ರತ್ನ, ವಜ್ರಗಳಿಂದ ಸಿಂಗಾರಗೊಂಡ ದೊಡ್ಡ ಗಾತ್ರದ ಆಭರಣಗಳು ಕಣ್ಸೆಳೆಯುತ್ತವೆ. ವಿಭಿನ್ನ ವಿನ್ಯಾಸ, ವಿಶಿಷ್ಟ ಶೈಲಿಯ ಆಭರಣಗಳು ರಾಜ ಮಹಾರಾಜರ ಕಾಲವನ್ನು ನೆನಪಿಸುತ್ತವೆ. ಮುಳ್ಳುಮುಳ್ಳಿನಂತಿರುವ ಈಯರ್‌ ಕಫ್‌ ಅಂತೂ ವಿಶಿಷ್ಟ ಚೆಲುವಿನಿಂದ ಮನಸೆಳೆಯುತ್ತದೆ. ಮೀನಿನಾಕಾರದಲ್ಲಿ ಮೈದಳೆದ ಕಿವಿಯೋಲೆ, ಅದರೊಂದಿಗೆ ಸೇರಿಕೊಂಡಿರುವ ಇಯರ್‌ ಕಫ್‌ ಕೂಡ ಮೊದಲ ನೋಟಕ್ಕೆ ಇಷ್ಟವಾಗುತ್ತದೆ. ದಕ್ಷಿಣ ಆಫ್ರಿಕಾದ ಕೆಂಪು ರೂಬಿಗಳಿಂದ ಮಾಡಿದ ಕಮಲದ ಹೂವಿನಿಂದ ಸ್ಫೂರ್ತಿಗೊಂಡ ನೆಕ್‌ಲೆಸ್‌ ಚೆಲುವಿಗಂತೂ ಸಾಟಿಯೇ ಇಲ್ಲ.

ADVERTISEMENT

ಒಂದೊಂದು ಆಭರಣವೂ ವಿನ್ಯಾಸ ವಿಶೇಷತೆಯಿಂದ ಕೂಡಿದೆ.. ಹೆಚ್ಚಿನ ಎಲ್ಲಾ ವಿನ್ಯಾಸಗಳಲ್ಲೂ ಹಾವು, ಮೀನು, ಹಕ್ಕಿಗಳು ಸ್ಥಾನ ಪಡೆದುಕೊಂಡಿವೆ. ಬೆಳ್ಳಿಯಿಂದ ಮಾಡಿದ ಚೀತಾ ಬ್ರೇಸ್‌ಲೆಟ್‌ ಕೂಡ ಆಕರ್ಷಣೀಯವಾಗಿದೆ.

ಆಭರಣಪ್ರಿಯರಿಗಾಗಿ ಕುತೂಹಲಕಾರಿ ಅನೇಕ ವಿನ್ಯಾಸಗಳು ಇಲ್ಲಿದ್ದು, ರಾಜಸ್ತಾನದ ಹಸ್ಲಿ ನೆಕ್ಲೆಸ್‌ ಅದರಲ್ಲೊಂದು. ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ಡೋಲ್ಕಿ ಬೀಟ್ಸ್‌ ಸರವೂ ಇಲ್ಲಿದೆ. ಮಳಿಗೆ ಸಿಬ್ಬಂದಿ ಪ್ರಕಾರ ಹೆಚ್ಚು ಚಾಲ್ತಿಯಲ್ಲಿರುವುದು ಇದೇ ಸರ.

ದೊಡ್ಡದಾದ ಆಭರಣಗಳನ್ನು ಯಾರು ತೊಡುತ್ತಾರೆ ಎಂದು ಮೂಗು ಮುರಿಯುತ್ತಿದ್ದಂತೆ, ‘ಈ ಆಭರಣಗಳೇ ಇಂದಿನ ಟ್ರೆಂಡ್‌. ಅದರಲ್ಲೂ ವಿದೇಶಿಯರಂತೂ ಇವುಗಳನ್ನೇ ಹೆಚ್ಚಾಗಿ ಖರೀದಿಸುತ್ತಾರೆ. ಒಂದು ಆಭರಣ ತೊಟ್ಟರೆ ಸಾಕು ಚೆಲುವಿನ ಖಣಿಯೇ ನೀವಾಗುತ್ತೀರಿ’ ಎಂದು ವಿವರಿಸಿದರು ಅಂಗಡಿಯವರು. ಜೊತೆಗಿದ್ದ ಗ್ಲಾಸ್‌ ವರ್ಕ್‌ ಆಭರಣ ಕೂಡ ಅಂಥ ಆಕರ್ಷಕ ಎನಿಸುವುದಿಲ್ಲ. ಆದರೆ ಉದ್ದದ ಹಾರವಾದ ಇದು ಆಭರಣ ಪ್ರಿಯರ ಪಟ್ಟಿಯಲ್ಲಿ ಇದ್ದೇ ಇರುತ್ತದೆಯಂತೆ.

ಇಲ್ಲಿಯ ಬ್ರೈಡಲ್‌ ಕಲೆಕ್ಷನ್‌ ಅಂತೂ ಮದುವಣಗಿತ್ತಿಯರನ್ನು ಆಕರ್ಷಿಸುತ್ತಲೇ ಇರುತ್ತದೆ. 2 ಇನ್‌ ಒನ್‌ ಮಾದರಿಯ ಅನೇಕ ಆಭರಣಗಳಿದ್ದು, ಬೈತಲೆ ಬೊಟ್ಟು, ಅಗತ್ಯ ಬಿದ್ದಾಗ ನೆಕ್ಲೆಸ್‌ನಂತೆಯೂ ಸಿಂಗರಿಸಿಕೊಳ್ಳಬಹುದು. ಕೆಲವು ಆಭರಣಗಳದ್ದು, ಉಂಗುರ ಹಾಗೂ ಪೆಂಡೆಂಟ್‌ ಆಗುವ ಯೋಗ. ಇನ್ನು ಮೀನಾಕರಿ ವಿನ್ಯಾಸದ ಚೋಕರ್‌ಗಳು ಕೂಡ ಆಕರ್ಷಕವಾಗಿವೆ. ಎದುರು ಹಾಗೂ ಹಿಂಭಾಗದಲ್ಲಿ ವಿನ್ಯಾಸ ಇರುವುದು ಹಾಗೂ 22, 24 ಕ್ಯಾರೆಟ್‌ ಚಿನ್ನದಿಂದ ವಿನ್ಯಾಸ ಮಾಡಲು ಸಾಧ್ಯವಿರುವುದು ಇದರ ವೈಶಿಷ್ಟ್ಯ.

‘ಆಭರಣಗಳೆಲ್ಲಾ ಜೈಪುರದಲ್ಲಿ ವಿನ್ಯಾಸವಾಗುತ್ತವೆ. ತರಂಗ್‌ ಅರೋರಾ ಹಾಗೂ ಆಕಾಂಕ್ಷಾ ಅರೋರಾ ಆಭರಣ ವಿನ್ಯಾಸದ ಬಗೆಗೆ ನಿರ್ಧರಿಸುತ್ತಾರೆ. ಅಲ್ಲದೆ ಅನೇಕ ವಿನ್ಯಾಸಕಾರರೂ ಅಲ್ಲಿ ಕೆಲಸ ಮಾಡುತ್ತಾರೆ. ಎಲ್ಲಾ ಬಗೆಯ ಆಭರಣಗಳಿಗೆ ಬೇಡಿಕೆ ಇದೆ. ಆದರೆ ಇತ್ತೀಚೆಗೆ ಬೆಳ್ಳಿಯ ಆಭರಣಗಳಿಗೆ, ಅದರಲ್ಲೂ ಆಕ್ಸಿಡೈಸ್ಡ್‌ ವಿನ್ಯಾಸವನ್ನು ಜನ ಹೆಚ್ಚು ಇಷ್ಟಪಡುತ್ತಿದ್ದಾರೆ. ಚಿನ್ನದ ಆಭರಣಗಳಿಗಂತೂ ಬೇಡಿಕೆ ಕಡಿಮೆ ಆಗುವುದೇ ಇಲ್ಲ’ ಎಂದು ಮಾಹಿತಿ ನೀಡುತ್ತಾರೆ ಹಿರಿಯ ಸೇಲ್ಸ್‌ ಎಕ್ಸಿಕ್ಯೂಟಿವ್‌ ಆದ ಪ್ರಮಿಳಾ.

ಲಕ್ಷ್ಮಿ ಮಾಲಾ, ಕಾಸಿನ ಸರ, ಮ್ಯಾಂಗೊ ಮಾಲಾ, ಹಸ್ಲಿ, ಗ್ಲಾಸ್‌ ವರ್ಕ್‌ ಸರಗಳು, ಆಕ್ಸಿಡೈಸ್ಡ್‌ ಆಭರಣ, ಬಾಹುಬಲಿ ಆಸಂಗ್ರಹ, ಆಭರಣದಲ್ಲಿ ಅರಳಿದ ಪ್ರಾಣಿ ಪ್ರಪಂಚ ಹೀಗೆ ಬೆರುಗು ಮೂಡಿಸುವ ಅನೇಕ ಆಭರಣಗಳು ಆಮ್ರಪಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.