ADVERTISEMENT

ಉತ್ಸವಕ್ಕೆ ಬಿಸಿಐಎಲ್ ಸಜ್ಜು

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಯಾಂತ್ರಿಕತೆಗೆ ತೆರೆದುಕೊಂಡ ಮನಸ್ಸಿಗೆ ಹಸಿರಿನ ಕಂಪು, ತಂಪು ಸೇರಿದರೆ ಒಂದಿಷ್ಟು ಹಿತವೆನಿಸುವುದು. ಬರೀ ಕಟ್ಟಡವೇ ತುಂಬಿರುವ ನಗರದಲ್ಲಿ ಮಕ್ಕಳಿಗೆ ಪ್ರಕೃತಿಯತ್ತ ಒಲುವು ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ ಬಿಸಿಐಎಲ್.

ಭಾರತದ ಪ್ರಮುಖ ಹಸಿರು ಮನೆಗಳ ನಿರ್ಮಾತೃ ಬಿಸಿಐಎಲ್ ಝಡ್ ಹೆಬಿಟ್ಯಾಟ್ ರಾಷ್ಟ್ರದಲ್ಲಿಯೇ  ಮೊಟ್ಟ ಮೊದಲ ಬಾರಿಗೆ ಹಸಿರು ಉತ್ಸವವನ್ನು ಆಯೋಜಿಸಿದೆ. ಸುತ್ತಮುತ್ತಲಿನ ಪರಿಸರದ ಅರಿವು ಮೂಡಿಸಲು ಇವರು ಆಯ್ಕೆ ಮಾಡಿದ್ದು ಮಕ್ಕಳನ್ನು. ಯಾಕೆಂದರೆ ಮಕ್ಕಳ ಮೂಲಕ ಸಮಾಜದ ಅಭಿವೃದ್ಧಿ ಸಾಧ್ಯ ಎಂಬ ನಂಬಿಕೆ ಇವರದ್ದು.
ಮನೆಮನೆಗಳಲ್ಲಿ ಸುಸ್ಥಿರ ತಂತ್ರಜ್ಞಾನ ಮತ್ತು ಪರಿಹಾರ ಮಾರ್ಗಗಳನ್ನು ಬಿಂಬಿಸುವುದು ಇವರ ಮೊದಲ ಉದ್ದೇಶ. ಈ ಪ್ರದರ್ಶನದ ಪ್ರಮುಖ ಆಕರ್ಷಣೆ `ಗುಬ್ಬಿಗೂಡು~.

ಕಣ್ಮರೆಯಾಗಿರುವ ಗುಬ್ಬಚ್ಚಿಗಳನ್ನು ಬೆಂಗಳೂರಿಗೆ ಮರಳುವಂತೆ ಮಾಡುವತ್ತ ಬಿಸಿಐಎಲ್‌ನ ಪ್ರಯತ್ನ ಸಾಗುತ್ತಿದೆ. ಮಳೆ ನೀರು ಕೊಯ್ಲುವಿನ ವಿಸ್ತೃತ ಮಾದರಿಗಳು, ಸೋಲಾರ್ ಗ್ಯಾಜೆಟ್‌ಗಳನ್ನು ಈ ಪ್ರದರ್ಶನದಲ್ಲಿ ಇಡಲಾಗುತ್ತದೆ. ಹಾಗೇ ದಿನನಿತ್ಯದ ಕಸಕಡ್ಡಿಗಳನ್ನು ಉಪಯುಕ್ತ ವಸ್ತುಗಳನ್ನಾಗಿ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ದೊರೆಯಲಿದೆ.

ಝಡ್-ಹಸಿರು ಉತ್ಸವ ಉಚಿತವಾಗಿದ್ದು, ವಾರಾಂತ್ಯಗಳಲ್ಲಿ ಇದು ಸಾರ್ವಜನಿಕರ ಭೇಟಿಗೆ ಮುಕ್ತವಾಗಿದೆ. ಇಲ್ಲಿ ವಿನೋದ ಪ್ರದರ್ಶನ, ವಿಡಿಯೋ ಪ್ರಸ್ತುತಿ ಮತ್ತು ಗೇಮ್ ಕೂಡ ಇದೆ. ಬೆಳಿಗ್ಗೆ 9ರಿಂದ 5ರ ತನಕ ಈ ಪ್ರದರ್ಶನ ತೆರೆದಿರುತ್ತದೆ.
ಸಂಪರ್ಕಿಸಿ: ರೋಶನ್ 9686192739. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.