ADVERTISEMENT

ಗಾಜಿನಲ್ಲಿ ಕಲಾಲೋಕ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ಗಾಜಿನಲ್ಲಿ ಕಲಾಕೃತಿಯನ್ನು ರೂಪುಗೊಳಿಸುವುದು ನಾಜೂಕಿನ ಕೆಲಸ. ಬಲು ಸೂಕ್ಷ್ಮ ವಾದ ಗಾಜಿನಲ್ಲಿ ಕಲೆ ಸಾಕಾರ ಗೊಳ್ಳಬೇಕಾದರೆ ಸಾಕಷ್ಟು ಏಕಾಗ್ರತೆ ಬೇಕು. ಕಲಾವಿದ ತಾನು ಮೂಡಿಸಬೇಕಾದ ಆಕೃತಿ ಯನ್ನು ಮೊದಲು ಮನಸ್ಸಿಗೆ ತಂದುಕೊಂಡು, ನಂತರ ಅದನ್ನು ಗಾಜಿನ ಮೇಲೆ ನಿಚ್ಚಳವಾಗಿ ಮೂಡಿಸಬೇಕೆಂದರೆ ಅಪಾರ ಶ್ರಮ ಸಹ ಬೇಕು. ಗಿದ್ದಾಗಲೇ ಅದೊಂದು ಅತ್ಯುತ್ತಮ ಕಲಾಕೃತಿಯಾಗಿ ಹೊರಹೊಮ್ಮಲು ಸಾಧ್ಯ.

ಗಾಜು ಕಲೆಯಲ್ಲಿ ಕಲಾವಿದರಾದ ಸಿಸಿರ್ ಸಹನಾ ಅವರದು ಬಹು ದೊಡ್ಡ ಹೆಸರು. ಅವರ ಸೃಜನಶೀಲತೆ ಮೂಸೆಯೊಳಗೆ ಸೃಜಿಸಿದ ಕಲಾಕೃತಿಗಳು ವೀಕ್ಷಕರಲ್ಲಿ ಬೆರಗು ಹುಟ್ಟಿಸುತ್ತವೆ. ಒಂದೊಂದು ಕಥೆ ಹೇಳುತ್ತವೆ. ನೋಡುಗರ ಮನಸ್ಸಿಗೆ ಆಪ್ತವೆನಿಸುತ್ತವೆ.
ಸ್ಥಳ: ಗ್ಯಾಲರಿ ಸುಮುಖ, ಡಿಪೋ ರಸ್ತೆ, ವಿಲ್ಸನ್‌ಗಾರ್ಡನ್. ಮಾಹಿತಿಗೆ: 2229 2230, 4120 7215 (ಪ್ರದರ್ಶನ ಅ. 31ರ ವರೆಗೆ ಮಾತ್ರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.