ADVERTISEMENT

ಜನಪರ ಸಂಸ್ಕೃತಿ ಉತ್ಸವ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2011, 19:30 IST
Last Updated 18 ಏಪ್ರಿಲ್ 2011, 19:30 IST
ಜನಪರ ಸಂಸ್ಕೃತಿ ಉತ್ಸವ
ಜನಪರ ಸಂಸ್ಕೃತಿ ಉತ್ಸವ   

ರಂಗಚೇತನ ಸಂಘಟನೆ ಬುಧವಾರದಿಂದ ಶನಿವಾರದ ವರೆಗೆ ಜನಪರ ಸಂಸ್ಕೃತಿ ಉತ್ಸವ ನಡೆಸುತ್ತಿದೆ. ರಂಗಚೇತನ ಕಳೆದ ಎರಡೂವರೆ ದಶಕಗಳಿಂದ ಕನ್ನಡ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿರುವ ಸಂಘಟನೆ. ಹೊಸ, ಹೊಸ ನಾಟಕ ಪ್ರಯೋಗ, ರಂಗ ಶಿಬಿರ, ರಕ್ತದಾನ ಶಿಬಿರ, ಅಸಹಾಯಕ ಕಲಾವಿದರಿಗೆ ಆರ್ಥಿಕ ನೆರವು... ಹೀಗೆ ಹತ್ತು ಹಲವು ಜನೋಪಯೋಗಿ ಕಾರ್ಯಕ್ರಮ ರೂಪಿಸಿ ಯಶಸ್ವಿಯಾಗಿದೆ.

ಇದು ಪ್ರತಿ ವರ್ಷ ಜನಪರ ಸಂಸ್ಕೃತಿ ಉತ್ಸವ ನಡೆಸಿ ನಾಟಕ ಪ್ರದರ್ಶನ, ವಿಚಾರ ಸಂಕಿರಣ, ಕವಿಗೋಷ್ಠಿ, ಮಹಿಳಾ ಗೋಷ್ಠಿಯ ಜೊತೆಗೆ ಸಮಾಜದ ಕೆಳವರ್ಗದ ಜನರ ಏಳಿಗೆಗಾಗಿ ಕಾರಣರಾದವರನ್ನು ಗುರುತಿಸಿ ನಾಡಚೇತನ ಮತ್ತು ರಂಗಕರ್ಮಿ ಸಿಜಿಕೆ ಪ್ರಶಸ್ತಿಗಳನ್ನು ನೀಡುತ್ತ ಬಂದಿದೆ.
 
ಪ್ರತಿವರ್ಷ ಹೊಸ ನಾಟಕವನ್ನು ರಂಗಕ್ಕೆ ತರುತ್ತಿದೆ. ಈ ಹಿಂದೆ ತ್ರಿಮೂರ್ತಿಗಳು, ಕಳ್ಳಿಯಲ್ಲಿ ಕೆಂಪುಹೂವು, ಗಾಂಧಿ ಸಂತಾನ, ಸ್ಮಶಾನ ಕಬ್ಬು, ರಾಮಣ್ಣನ ರಾದ್ಧಾಂತ, ಮಾದಾರ ಚೆನ್ನಯ್ಯ, ಕಪಿಲ, ಜೇನು ಹುಡುಗಿ, ಸಂಪತ್ತಿಗೆ ಸವಾಲ್ ಇತ್ಯಾದಿ ನಾಟಕಗಳನ್ನು ರಂಗಪ್ರಯೋಗಕ್ಕೆ ಆಯ್ಕೆ ಮಾಡಿಕೊಂಡಿತ್ತು.

ಉದ್ಘಾಟನೆ: ಸಚಿವ ಗೋವಿಂದ ಎಂ. ಕಾರಜೋಳ. ಸಾನ್ನಿಧ್ಯ: ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅತಿಥಿಗಳು: ಡಿ.ಕೆ. ಚೌಟ, ಡಾ. ಜಿ.ಟಿ. ಸುಭಾಷ್, ಲಕ್ಷ್ಮಣ್, ಕೆ.ಎಚ್. ಪುಟ್ಟಸ್ವಾಮಿಗೌಡ, ಶಶಿಧರ ಅಡಪ. ನಂತರ ‘ಭ್ರೂಣ’ (ರಚನೆ: ಶ್ರೀ ಆರ್ಯ. ನಿರ್ಮಾಣ: ತೊ. ನಂಜುಂಡಸ್ವಾಮಿ, ನಿರ್ದೇಶನ: ಕೆ.ಎಸ್.ಡಿ.ಎಲ್. ಚಂದ್ರು.
ಸ್ಥಳ: ರವೀಂದ್ರ ಕಲಾಕ್ಷೇತ್ರ. ಸಂಜೆ 6.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.