ADVERTISEMENT

ಜನ-ಮನ ಗೆದ್ದ ‘ಅಂತರಾಳ’ದ ಗೀತೆಗಳು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST
ರವೀಂದ್ರ ಕಲಾಕ್ಷೇತ್ರದಲ್ಲಿ ಈಚೆಗೆ 'ಅಂತರಾಳ' ಸಂಸ್ಥೆಯು ಆಯೋಜಿಸಿದ್ದ 'ನಿನ್ನ ರೂಪು ಎದೆಯ ಕಲಕಿ' ಕಾರ್ಯಕ್ರಮದಲ್ಲಿ ಡಾ.ದೊಡ್ಡರಂಗೇಗೌಡರನ್ನು ಅಭಿನಂದಿಸಲಾಯಿತು. ರಾಜಕೀಯ, ಸಂಗೀತ ಮತ್ತು ಸಿನಿಮಾ ಕ್ಷೇತ್ರದ ಹಲವರು ಈ ಸಂದರ್ಭ ಉಪಸ್ಥಿತರಿದ್ದರು
ರವೀಂದ್ರ ಕಲಾಕ್ಷೇತ್ರದಲ್ಲಿ ಈಚೆಗೆ 'ಅಂತರಾಳ' ಸಂಸ್ಥೆಯು ಆಯೋಜಿಸಿದ್ದ 'ನಿನ್ನ ರೂಪು ಎದೆಯ ಕಲಕಿ' ಕಾರ್ಯಕ್ರಮದಲ್ಲಿ ಡಾ.ದೊಡ್ಡರಂಗೇಗೌಡರನ್ನು ಅಭಿನಂದಿಸಲಾಯಿತು. ರಾಜಕೀಯ, ಸಂಗೀತ ಮತ್ತು ಸಿನಿಮಾ ಕ್ಷೇತ್ರದ ಹಲವರು ಈ ಸಂದರ್ಭ ಉಪಸ್ಥಿತರಿದ್ದರು   

'ಅಂತರಾಳ' ಸಂಸ್ಥೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಈಚೆಗೆ ಆಯೋಜಿಸಿದ್ದ ಡಾ.ದೊಡ್ಡರಂಗೇಗೌಡರ ಜನಪ್ರಿಯ ಗೀತೆಗಳ ಕಾರ್ಯಕ್ರಮ 'ನಿನ್ನ ರೂಪು ಎದೆಯ ಕಲಕಿ' ಪ್ರೇಕ್ಷಕರ ಮನಗೆಲ್ಲುವಲ್ಲಿ ಸಫಲವಾಯಿತು.

ಗೌಡರನ್ನು ಹೂಮಳೆಯೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ತುಂಬಿದ ಸಭೆಯ ಅಭಿಮಾನದ ಗೌರವಕ್ಕೆ, ಸ್ವಾಗತಕ್ಕೆ ದೊಡ್ಡರಂಗೇಗೌಡರು ಭಾವುಕರಾದರು. ತಮ್ಮ ಚಿತ್ರ ಸಾಹಿತ್ಯ ಪಯಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಸಿನಿಕ್ಷೇತ್ರದ ದಿಗ್ಗಜರಾದ ಚಿನ್ನೇಗೌಡರು, ಸಂಗೀತ ನಿರ್ದೇಶಕ ರಾಜನ್, ನಟ ಸಂಚಾರಿ ವಿಜಯ್ ದೀಪ ಬೆಳಗುವ ಮೂಲಕ ಹಾಗೂ ಶಶಿಧರ್ ಕೋಟೆ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಚಾಲನೆ ನೀಡಿದರು.

ADVERTISEMENT

ರಾಮಚಂದ್ರ ಹಡಪದ್ ಮತ್ತು ಶ್ವೇತಾ ಪ್ರಭು ಅವರ ಭಾವಪೂರ್ಣ ಗಾಯನ ಪ್ರೇಕ್ಷಕರ ಮನಸೂರೆಗೊಂಡವು.

ಸಿ.ಅಶ್ವಥ್ ಅವರ ಜೊತೆ ನಿಕಟ ಸಂಪರ್ಕವಿದ್ದ ದೊಡ್ಡರಂಗೇಗೌಡರು, ಹಡಪದ್ ಅವರ ಸಂಗೀತಕ್ಕೆ ಮನಸೋತು 'ಅಭಿನವ ಅಶ್ವಥ್' ಎಂದು ಶ್ಲಾಘಿಸಿದರು. 

ಸಿನಿಕ್ಷೇತ್ರದ ದಿಗ್ಗಜರಾದ ಚಿನ್ನೇಗೌಡರು, ಸಂಗೀತ ನಿರ್ದೇಶಕ ರಾಜನ್, ನಟ ಸಂಚಾರಿ ವಿಜಯ್ ದೀಪ ಬೆಳಗುವ ಮೂಲಕ ಹಾಗೂ ಶಶಿಧರ್ ಕೋಟೆ ಗಾಯನದ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.