ನಗರದಲ್ಲಿ ಈಗ `ಲೌಡ್ ಮ್ಯೂಸಿಕ್' ಕಾಲ. ಎಂ.ಜಿ.ರಸ್ತೆಯ ಮೆಟ್ರೊ ರೈಲು ನಿಲ್ದಾಣದ ಕೆಳಗೆ ಮಳಿಗೆಗಳ ಸಾಲು ಮೂಡಿರುವುದು ಗೊತ್ತೇ ಇದೆ. ಭಾನುವಾರ (ಜೂ. 23) ಅಲ್ಲಿ ಡ್ರಮ್ಮರ್‌ಗಳು ಜಮಾಯಿಸಿದ್ದರು. ಅವರಿಗೆ ಸಾಥ್ ನೀಡಲು ಗಾಯಕಿ, ನಟಿ ವಸುಂಧರಾ ದಾಸ್ ಕೂಡ ಬಂದಿದ್ದರು.
ರಾಬರ್ಟೊ ನಾರಾಯಣ್ ಸೇರಿದಂತೆ ನಗರದ ಹಲವು ಡ್ರಮ್ಮರ್‌ಗಳು ವರ್ತುಲಾಕಾರದಲ್ಲಿ ಕುಳಿತಾಗ ನಡೆಯುತ್ತಿದ್ದ ಪಾದಗಳು ಕೊಂಚ ಕಾಲ ನಿಂತವು. ಅವರ ದೃಷ್ಟಿ ಜಂಬೆಗಳನ್ನು ಹಿಡಿದವರತ್ತ. `ರಂಗೋಲಿ ಮೆಟ್ರೊ ಆರ್ಟ್ ಸೆಂಟರ್' ಹಾಗೂ `ಡ್ರಮ್‌ಜಾಮ್' ಆಯೋಜಿಸಿದ್ದ ಸಮುದಾಯ ಸಂಗೀತ ಕಾರ್ಯಕ್ರಮದ ಝಲಕ್ ಇದು. ಸೇಂಟ್ ಮಾರ್ಕ್ಸ್ ರಸ್ತೆಯ ಹಾರ್ಡ್ ರಾಕ್ ಕೆಫೆಯಲ್ಲಿ ಆಸ್ಟ್ರೇಲಿಯಾದ ಡ್ರಮ್ಮರ್ ಬೆನ್ ಸಂಗೀತ ಕಛೇರಿ ನೀಡಿದ್ದೂ ಇದೇ ಭಾನುವಾರ. ಹಾಗಾಗಿ ಮೊನ್ನೆಯ ರವಿವಾರವನ್ನು `ಡ್ರಮ್ಸ ಭಾನುವಾರ' ಎನ್ನಬಹುದೇನೋ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.